ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬೬

ಮನಮಂಥನ

'ನನ್ನ ಹೆಂಡತಿ ಮಾಲಕ್ಷ್ಮಿ ತುಂಬಾ ಮಡಿ ಕಣೋ, ಅಡಿಗೆಯ ಮನೆಯನ್ನು ದೇವರ ಮನೆಯಂತೆ ಶುಭ್ರವಾಗಿಡುತ್ತಾಳೆ. ಅಡಿಗೆಯ ಪಾತ್ರೆಗಳು ಕನ್ನಡಿಯಂತೆ ಹೊಳೆಯುತ್ತಿರುತ್ತೆ. ಪಾತ್ರೆಗಳನ್ನು ಚೆನ್ನಾಗಿ ತೊಳೆದು ನಂತರ ಅಡಿಗೆಯನ್ನು ಮಾಡುತ್ತಾಳೆ. ಕಾರಣ, ಅಡಿಗೆ ಮುಗಿಯುವುದಕ್ಕೆ ಹೊತ್ತಾಗುತ್ತದೆ ನಮ್ಮನೆಯಲ್ಲಿ. ಬ್ರೆಡ್ಡನ್ನು ತಿಂದು ಶಾಲೆಗೆ ಹೋಗುವುದು ಮಕ್ಕಳಿಗೆ ಅಭ್ಯಾಸವಾಗಿಬಿಟ್ಟಿದೆ, ನಾನೂ ಹಾಗೇ ಅನ್ನು' ಎಂದ ಮಧೂ.

ಹಜಾರದಿಂದ ಎಡಕ್ಕೆ ಚಿಕ್ಕ ಓಣಿ. ಅದಕ್ಕೆ ಲಗತ್ತಿಸಿದಂತೆ ಅಡಿಗೆಯ ಮನೆ, ಊಟದ ಮನೆ, ಅಡಿಗೆಯ ಮನೆಯ ಬಾಗಿಲ ತನಕ ನನ್ನ ಕರೆದುಕೊಂಡು ಹೋದ. ಬಾಗಿಲ ಹೊರಗೆ ನಿಂತು 'ಮಾಲಕ್ಷ್ಮೀ ನನ್ನ ಹಳೆ ಗೆಳೆಯ ಆಕಸ್ಮಾತ್ ಸಿಕ್ಕ ನೋಡು, ಕರಕೊಂಡು ಬಂದೆ, ಇಲ್ಲೇ ಊಟ ಮಾಡ್ತಾನೆ' ಎಂದು ನುಡಿದ. ಒಲೆಯ ಮುಂದೆ ಕುಳಿತಿದ್ದ ಮಾಲಕ್ಷಮ್ಮ, ಬಲು ಆದರದಿಂದ ನನ್ನನ್ನು ಮಾತನಾಡಿಸಿದಳು. ಅಡಿಗೆಯ ಮನೆಯೊಳಕ್ಕೆ ಒಂದು ಹೆಜ್ಜೆಯನ್ನು ಇಡತೊಡಗಿದೆ. ತೋಳನ್ನು ಜಟ್ಟಂತ ಹಿಡಿದು, ನನ್ನನ್ನು ಹಿಂದಕ್ಕೆ ಮಾಧೂ ಎಳೆದುಕೊಂಡ. “ಅಡಿಗೆಯ ಮನೆಯು ಮಡಿ ಕಣೋ, ಬೀದಿಯಿಂದ ಬಂದು ನೇರ ಒಳಕ್ಕೆ ಹೋಗಬಾರದು' ಎಂದು ಎಚ್ಚರಿಸಿದ. ಮಾಲಕ್ಷಮ್ಮನು ಎದ್ದು ಬಂದು, ನಾ ಹೆಜ್ಜೆಯಿಟ್ಟಿದ್ದ ಜಾಗವನ್ನು ಸಾರಿಸಿದಳು. 'ಅವರಿಗೆ ತಿಳಿಯದು, ಈಗೇನಾಯಿತು. ಸಾರಿಸಿದರೆ ಮಡಿಯಾಗುತ್ತೆ' ಎಂದಳು. ಸಾರಿಸಿದ ಮೇಲೆ ಬಚ್ಚಲ ಕೋಣೆಗೆ ಹೋದಳು. ಅಡಿಗೆಯ ಮನೆಯ ಪಾತ್ರೆಗಳು ನಿಜವಾಗಿ ಹೊಳೆಯುತ್ತಿದ್ದವು, ಗೋಡೆಗಳು ಶುಭ್ರವಾಗಿದ್ದುವು.

ಹಜಾರಕ್ಕೆ ಹಿಂತಿರುಗಿದೆವು. 'ಹೆಜ್ಜೆ ಇಟ್ಟ ಜಾಗವನ್ನು ಸಾರಿಸಿದಳು. ಈಗ ಸ್ನಾನ ಮಾಡುಕ್ಕೆ ಹೋಗಿದ್ದಾಳೆ. ಅಂತಹ ಕಟ್ಟುನಿಟ್ಟು ಮಡಿಯಪ್ಪಾ' ಎಂದ. ಆ ಮಾತು ಈ ಮಾತು ಆಡುತ್ತಾ, ನನಗೆ ತೋರಿಬಂದಿದ್ದ ಸಂಶಯ ನಿವಾರಣೆಯನ್ನು ಮಾಡಿಕೊಳ್ಳಲೆತ್ನಿಸಿದೆ. ಅವನು ಹೇಳಿದುದರ ಸಾರಾಂಶ ಹೀಗೆ :

ಹದಿನೇಳು ವರ್ಷಗಳ ಹಿಂದೆ ಮದುವೆಯಾಗಿ ಗಂಡನ ಮನೆಗೆ ಬಂದಾಗ, ಮಾಲಕ್ಷಮ್ಮನಿಗೆ ಅಂತದೇನೂ ಮಡಿಯಿರಲಿಲ್ಲ. ಆದರೆ ಮನೆಯಲ್ಲಿ ಅಚ್ಚುಕಟ್ಟು, ಶುಭ್ರತೆ, ಇತ್ಯಾದಿಗಳಲ್ಲಿ ಸ್ವಲ್ಪ ಅತಿರೇಕವನ್ನು ಮಾಡುತ್ತಿದ್ದಳು. ಮೊದಲ ಮಗು ವಾದಮೇಲೆ 'ಮಡಿ' ಮಾಡುವುದಕ್ಕೆ ಪ್ರಾರಂಭವಾಯಿತು. ಬೆಳಗಿನ ಝಾವ ಐದಕ್ಕಿದ್ದು ಅಡಿಗೆಯ ಮನೆಯನ್ನು ಗುಡಿಸಿ ಸಾರಿಸಿ ನಂತರ ಸ್ನಾನ ಮಾಡುವಳು. ಆರರ ವೇಳೆಗೆ ಅಡಿಗೆಮನೆಯನ್ನು ಸೇರುತ್ತಾಳೆ. ಮೊದಮೊದಲು ಹತ್ತರ ವೇಳೆಗೆ