ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಬ್ಸೆಷನಲ್ 'ಬೇನೆಗಳು'

೧೭೧

ಒಂದು ಗುಹೆಯಲ್ಲಿ ಸೇರಿಕೊಂಡು, ಹಠಹಿಡಿದು ಹೀಗೆ ಮಾಡು ಎಂದು ಬಲವಂತಪಡಿಸುತ್ತದೆ. ನಾವು ಮಾಡುತ್ತೇವೆ. ಆದರೆ ಸ್ವಲ್ಪ ಯೋಚನೆ ಮಾಡಿ ಇದೆಂತಹ ತಿಕ್ಕಲು ಎನಿಸಿದಾಗ, ಭೂತದ ಆಟವೇನೂ ನಡೆಯುವುದಿಲ್ಲ. ತಿಕ್ಕಲು ಬಿಟ್ಟುಹೋಗುತ್ತದೆ. ಮನಸ್ಸಿನಲ್ಲಿ ನೆಮ್ಮದಿಯೂ ಎಂದಿನಂತೆಯೇ ಇರುತ್ತದೆ; ಅಸ್ವಸ್ಥವಾಗುವುದಿಲ್ಲ.

ಇವೆಲ್ಲಾ ತಿಕ್ಕಲು ನಡವಳಿಕೆಯಾದರೂ ರೋಗ ಎನಿಸುವುದಿಲ್ಲ. ಏಕೆಂದರೆ ದೈನಂದಿನ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಮನಸ್ಸಿನ ಸ್ವಾಸ್ಥ್ಯವೂ ಕೆಟ್ಟಿರುವುದಿಲ್ಲ.ಆದರೆ ಇದೇ ತಿಕ್ಕಲು ಅತಿಯಾದರೆ, ಆಗ ಒಬ್ರೆಷನಲ್ ಬೇನೆಗಳಿಗೆ ಮಾರ್ಗಮಾಡಿಕೊಡುತ್ತದೆ. ದಿನದಿನದ ಬಾಳಿನ ವ್ಯವಸ್ಥೆಯನ್ನು ಕುಂಟಿಸುತ್ತದೆ. ಮನಸ್ಸಿನ ನೆಮ್ಮದಿಯೂ ಕದಡಿಹೋಗುತ್ತದೆ.

ದುಶ್ಚಟಗಳೂ ದುರಭ್ಯಾಸಗಳೂ ಒಬ್ಸೆಷನಲ್ ಬೇನೆಯ ಮತ್ತು ತಿಕ್ಕಲಿನ ಮಧ್ಯೆ ಇರುವಂತಹವು. ಇದೇನೂ ಮುಂದೆ ಮಾನಸಿಕ ಬೇನೆಗಳಾಗುವುದಿಲ್ಲ. ಆದರೆ Compulsive Traits ಬಲವಂತದಿಂದಾಗುವ, ಮನಸ್ಸಿನ ಹತೋಟಿಯನ್ನು ಮೀರಿದ ನಡವಳಿಕೆಗಳು, ಇವೆಲ್ಲಾ.

ಊಟವಾದ ಮೇಲೆ ಎಲ್ಲರೂ ಕೈ ತೊಳೆದುಕೊಳ್ಳುತ್ತಾರೆ. ಕೆಲವರು ತಿಕ್ಕಿತಿಕ್ಕಿ ಐದಾರು ನಿಮಿಷ ಕೈ ತೊಳೆದುಕೊಳ್ಳಬಹುದು. ಆದರೆ ತಿರುಗಿ ತಿರುಗಿ ಬಚ್ಚಲ ಮನೆಗೆ ಹತ್ತಾರು ಬಾರಿ ಹೋಗಿ ಕೈ ತಿಕ್ಕಿ ತೊಳೆಯಲಾರಂಭಿಸಿದರೆ, ತಿಕ್ಕಲಿನ ಗಡಿಯನ್ನು ದಾಟಿದೆ, ಬೇನೆಯ ಗಡಿಯನ್ನು ಮುಟ್ಟಿದೆ ಎಂದು ಎಚ್ಚರವಹಿಸಬೇಕು.

ವಿಜಯಲಕ್ಷ್ಮಿಯ ಅನುಮಾನ, ಅನಸೂಯಳ ಮುಸುರೆ, ಮಾಲಕ್ಷಮ್ಮನ ಮಡಿ ಇವೆಲ್ಲವೂ ಒಬ್ಸೆಷನಲ್ ಗುಂಪಿನವತಾರಗಳು. ಸ್ವಲ್ಪವೂ ಇಷ್ಟವಿರದಿದ್ದಾಗಲೂ ಕಷ್ಟಪಟ್ಟುಕೊಂಡು ಮಾಡಲೇಬೇಕಾಗುವಂತಹ ಮಾನಸಿಕ ಬೇನೆಗಳು. ಇಂತಹ ಬೇನೆಗಳಿಗೂ ತಿಕ್ಕಲು ನಡವಳಿಕೆಗೂ ಮೂಲಭೂತವಾಗಿ ತಳಹದಿಯು ಒಂದೇ ಆದರೆ ಒಂದರಿಂದ ಇನ್ನೊಂದು ಉತ್ಪನ್ನವಾಗುವುದಿಲ್ಲ. ತಳಹದಿಯು ಒಂದೇ ಆದರೂ ಕೆಲವರಲ್ಲಿ ತಿಕ್ಕಲು, ತಿಕ್ಕಲಾಗಿಯೇ ಉಳಿಯುತ್ತದೆ. ಇನ್ನು ಕೆಲವು ನತದೃಷ್ಟರಲ್ಲಿ ಒಬ್ಸೆಷನ್ ಬೇನೆಗಳು ಉಂಟಾಗುತ್ತವೆ. ಒಂದು ವಿಚಿತ್ರ ಚಟ ತಿಕ್ಕಲು, ಇನ್ನೊಂದು ಕಾಡುವ, ನರಳಿಸುವ ರೋಗ

ಈ ಬೇನೆಯಿಂದ ನರಳುವವರು, ಸಾಮಾನ್ಯವಾಗಿ ವೈದ್ಯರ ಬಳಿಗೆ ಹೋಗುವುದೇ ಇಲ್ಲ. ಮನೋವೈದ್ಯರ ಬಳಿಗೆ ಹೋಗುವುದನಕ ಬಹಳ ಅಪರೂಪ.