ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೨

ಮನಮಂಥನ

'ಹುಚ್ಚಾಸ್ಪತ್ರೆಗೆ ಹೋಗುವಂತಹುದು, ನನಗೇನಾಗಿದೆ?' ಎಂದೇ ಇವರುಗಳ ಹಠ. ಬೇನೆಯು ಬೇರೂರಿದ ಮೇಲೆ ಸರಿಪಡಿಸಲಾಗದ ಹಂತಕ್ಕೆ ಏರಿದ ಮೇಲೆ ನಿರ್ವಾಹವಿಲ್ಲದೆ ಮನೋವೈದ್ಯರ ಬಳಿಗೆ ಹೋಗುತ್ತಾರೆ. ಆಗ ಚಿಕಿತ್ಸೆಯು ಬಹಳ ಕಷ್ಟ, ಬಹುಕಾಲ ಹಿಡಿಯುತ್ತದೆ. ಆದುದರಿಂದ ಮೊದಲ ಹಂತದಲ್ಲೇ ಮನೆಯವರು ಗುರುತಿಸಿದರೆ ತಿಕ್ಕಲು ಬೇನೆಯಾಗುತ್ತಿರುವ ಹಂತದಲ್ಲಿ ಗಮನಿಸಲ್ಪಟ್ಟರೆ, ಮನೋವೈದ್ಯರ ಚಿಕಿತ್ಸೆಯು ಸುಲಭವಾಗಿ ಸಫಲವಾಗಬಹುದು. ಆದಕಾರಣ ಈ ಬೇನೆಗಳ ಪ್ರಚಾರವು ಆದಷ್ಟು ಮಟ್ಟಿಗೆ ಸಮಾಜದಲ್ಲಿ ಹೆಚ್ಚಬೇಕು.

ಒಬ್ಸೆಷನಲ್ ಬೇನೆಗಳು

ವಿಜಯಲಕ್ಷ್ಮಿಯು ಹತ್ತಿಪ್ಪತ್ತು ಬಾರಿ ಬಾಗಿಲನ್ನು ಹಾಕುವುದು ; ಮುಸುರೆ ಆಯಿತು ಎಂದು ಅನಸೂಯ ಸಾರಿಸಿದ್ದನ್ನೇ ಸಾರಿಸುವುದು ; ಮಾಲಕ್ಷಮ್ಮನ ಅತಿ ಮಡಿ ; ಇವೆಲ್ಲವೂ ಮಾನಸಿಕ ಅಸ್ವಾಸ್ಥ್ಯದಿಂದ ಉಂಟಾದ ಪರಿಣಾಮಗಳು.

ಮಾನಸಿಕ ಅಸ್ವಾಸ್ಥ್ಯ ಎಂದರೇನು ? ಸಾಮಾನ್ಯವಾಗಿ ಯೋಚನೆಯನ್ನು ಮಾಡುವಾಗ, ಮನಸ್ಸು ಸರಾಗವಾಗಿ ನಡೆಯುತ್ತದೆ. ಯೋಚನೆಯು ಮೂಡಿ ಮಿಡಿಯುವಾಗ ಹಾಗಾಗುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಆದರೆ ಆತಂಕವು ಉಂಟಾದರೆ, ಆಗ ಮನಸ್ಸು ಇದೆ, ಯೋಚನೆ ಮಾಡಲು ಒದ್ದಾಡುತ್ತಿದೆ ಎನ್ನುವುದು ವ್ಯಕ್ತಿಗೆ ಗೊತ್ತಾಗುತ್ತದೆ. ಒಬ್ಸೆಷನಲ್ ಬೇನೆಗಳು ಇರುವವರಿಗೆ, ಸಾಮಾನ್ಯವಾಗಿ ಆತಂಕವೂ ಜತೆಯಾಗಿರುತ್ತದೆ. ಆದುದರಿಂದ ಯೋಚಿಸುವಾಗ ಅವರುಗಳ ಮನಸ್ಸು ತಳಮಳಗೊಳ್ಳುತ್ತಿರುವುದು ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಇದು ಮನಸ್ಸಿನ ಅಸ್ವಾಸ್ಥ್ಯದ ಮೊದಲ ಚಿಹ್ನೆ.

ಈ ಬೇನೆಯು ಬಡಿದವರಿಗೆ, ವಾಸ್ತವಿಕ ಪರಿಸ್ಥಿತಿಯ ಅರಿವು ಚೆನ್ನಾಗಿರುತ್ತದೆ. 'ನಮಗೆ ಎಂತದೋ ದರಿದ್ರ ಬೇನೆಯು ಬಂದಿದೆ, ನಮ್ಮ ವರ್ತನೆಯು ವಿಚಿತ್ರವಾದ ತಿಕ್ಕಲು' ಎಂದು ಚೆನ್ನಾಗಿ ಗೊತ್ತಿರುತ್ತದೆ. ಈ ದೃಷ್ಟಿಯಿಂದ ಇವರನ್ನು ಹುಚ್ಚರು ಬೆಪ್ಪರು ಅನ್ನುವಂತಿಲ್ಲ. ಒಂದು ರೀತಿಯಲ್ಲಿ ಇವರೆಲ್ಲಾ ಶಿವಲೀಲೆ ಹಿಡಿದವರು ಅನ್ನಬಹುದು.

ಈ ಬೇನೆಗೆ ಬಲಿಯಾದವರು, ಇತರ ಮಾನಸಿಕ ಚಟುವಟಿಕೆಗಳಲ್ಲಿ, ಚೂಟಿಯಾಗಿಯೇ ಇರುತ್ತಾರೆ. ಮಾನಸಿಕ ಅವ್ಯವಸ್ಥೆಯು ಇವರಿಗಿದೆ, ಎನ್ನುವ ಅನುಮಾನವು ಕೂಡ ಇತರರಿಗೆ ಬರುವುದಿಲ್ಲ. ಹೇಳಿದಂತೆ ಚಾಚೂ ತಪ್ಪದೆ ಮಾಡುವುದರಲ್ಲಿ, ಕಟ್ಟುನಿಟ್ಟಾಗಿ ಕಾನೂನು ಮತ್ತು ಸಂಪ್ರದಾಯಗಳನ್ನು