ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಬ್ಸೆಷನಲ್ `ಬೇನೆಗಳು'

೧೭೩

ಆಚರಿಸುವುದರಲ್ಲಿ, ಇವರುಗಳೂ ಯಶಸ್ವಿಯಾಗುತ್ತಾರೆ. ಆದರೆ ಸ್ವಂತ ವಿವೇಚನೆಯನ್ನು ಮಾಡಿ, ನಿರ್ಧಾರಗಳನ್ನು ಕೈಗೊಳ್ಳಲು ಅಸಮರ್ಥರಾಗಿರುತ್ತಾರೆ. Efficient followers ; but never leaders. ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು, ಇವರುಗಳ ಕಾರ್ಯಕ್ಷೇತ್ರವನ್ನೂ ಕೆಲಸದ ಮಿತಿಯನ್ನೂ ನಿಷ್ಕರ್ಷಿಸಬೇಕು.

ಹೀಗೇಕೆ ಆಗುತ್ತದೆ ? ಯೋಚನೆಗಳನ್ನು ಮಾಡಬೇಕಾದಾಗ, ಮನಸ್ಸು ಮಥಿಸುತ್ತದೆ, ಬೆಣ್ಣೆಯನ್ನು ತೆಗೆಯುವಾಗ ಮೊಸರನ್ನು ಕಡೆಯುವಂತೆ. ಮೇಲಕ್ಕೆ ತೇಲಿಬಂದ ಬೆಣ್ಣೆಯಂತೆ ಮನ ಮಥಿಸುವಾಗ ಯೋಚನೆಗಳು ಎದ್ದು ಬರುತ್ತವೆ. ಮೊಸರಿರುವ ಮಡಕೆಯು ಸರಿಯಾಗಿರುವುದರಿಂದ, ಕಡೆಯುವುದು ಸುಲಭ. ಹಾಗೆಯೇ ವಾಸ್ತವಿಕ ಅರಿವು ಎಂಬ ಮಡಕೆಯು, ಮನಸ್ಸಿನಲ್ಲಿ ಸ್ಥಿರವಾಗಿರುವುದರಿಂದ, ಇವರುಗಳ ಯೋಚನೆಗಳು ಮತ್ತು ನಿರ್ಣಯಗಳು ಬೆಣ್ಣೆಯಂತೆ ಸುಲಭವಾಗಿ ಮೇಲೇಳಬೇಕು.

ಆದರೆ ಕಡೆಯುವ ಹಗ್ಗದ ಒಂದು ಕಡೆಯಲ್ಲಿ, ಕೆಲವು ಎಳೆಗಳು ಕಿತ್ತು ಹೋಗಿವೆ ಅನ್ನಿ. ಆಗ ಆ ಕಡೆಯಿಂದ ಸೂಕ್ತವಾದಷ್ಟು ಶಕ್ತಿಯನ್ನು ಬಳಸಿ ಕಡೆಯುವಂತಿಲ್ಲ. ಜುಲುಮು ಮಾಡಿ ಎಳೆದರೆ ಉಳಿದ ಎಳೆಗಳೂ ಹಾಗೂ ಹಗ್ಗವೇ ಹರಿಯಬಹುದು. ಆದಕಾರಣ ಆ ಪಾರ್ಶ್ವದಿಂದ ಬಳಸುವ ಶಕ್ತಿಯನ್ನು ಮನಸ್ಸು ಕಡಿಮೆ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಎದುರು ಕಡೆಯಿಂದ ಎಳೆತವು ಬಲವಾಗುತ್ತದೆ. ಇದನ್ನು ಹತೋಟಿಯಲ್ಲಿಡಲು ಮನಸ್ಸಿಗೆ ಸಾಧ್ಯವಾಗುವುದಿಲ್ಲ. ಆದುದರಿಂದಲೇ ಅಸ್ವಾಭಾವಿಕವಾದ ಈ ಎಳೆತ, Compulsive ಪ್ರಭಾವ. ತಿಕ್ಕಲು ಎಂದು ತಿಳಿದಿದ್ದರೂ ಮನಸ್ಸು ವಿಚಿತ್ರ ವರ್ತನೆಯನ್ನು ಮಾಡಲೇಬೇಕಾಗುತ್ತದೆ. ಹಾಗೆ ಮಾಡಲಾಗದಿದ್ದರೆ, ಕೋಪ, ಸಿಡುಕು, ಇತ್ಯಾದಿಗಳು ಅಧಿಕವಾಗುತ್ತವೆ.

'An irresistible force trying to move an immovable object' ಎಂದು ಈ ಬೇನೆಯ ಬಲವಂತ ಸ್ವಭಾವವನ್ನು ವರ್ಣಿಸುತ್ತಾರೆ.

ನಿರರ್ಥಕವಾದ, ಭೂತಾಕಾರದ, ಇಂತಹ ಕಾಳಗವಾಗುತ್ತಿರುವಾಗ, ಮನಸ್ಸಿಗೆ ನೆಮ್ಮದಿಯು ದೊರಕಲಸಾಧ್ಯ. ವಿಚಿತ್ರವಾದ, ತಿಕ್ಕಲುತಿಕ್ಕಲಾದ ವರ್ತನೆಯು ಇಂತಹ ಕಾಳಗವಾಗುತ್ತಿರುವಾಗ, ಕೆಟ್ಟದ್ದರಲ್ಲಿ ಮಧ್ಯಸ್ಥ ಎಂಬಂತೆ, ಮನಸ್ಸಿಗೆ ತುಸು ನೆಮ್ಮದಿಯನ್ನು ನೀಡುತ್ತದೆ. ಮಡಿ, ಮುಸುರೆ ; ಚಟ, ಶಂಕೆ ; ಇತ್ಯಾದಿ ವಿಧಾನಗಳಿಂದ ತನ್ನನ್ನು ತಾನೇ ಮನಸ್ಸು ದಂಡಿಸಿಕೊಳ್ಳುತ್ತದೆ. ಸ್ವಯಂಪ್ರೇರಿತ