ಮನಮಂಥನ
ಶಿಕ್ಷೆಯನ್ನು ವಿಧಿಸಿಕೊಳ್ಳುತ್ತದೆ. ಪ್ರಾಯಶ್ಚಿತ್ತ ಮಾಡಿಕೊಂಡ ಮೇಲೆ ಮನಸ್ಸು ಹಗುರಾಗುವುದಿಲ್ಲವೇ ? "confession' ಅನ್ನು ಕ್ರಿಶ್ಚಿಯನ್ನರು ಮಾಡಿಕೊಂಡ ಮೇಲೆ ಮನಸ್ಸಿನ ದುಗುಡವು ಕಡಿಮೆಯಾಗುತ್ತದೆ. ಒಬ್ಸೆಷನ್ನಿನ ವಿಪರೀತ ಹಾಗೂ ವಿಚಿತ್ರ ವರ್ತನೆಗಳು ಆತ್ಮಶಿಕ್ಷೆಯ ವಿಧಾನಗಳು.
ಬಹಳ ಕಾಲ ಕಾಡುವಂತಹ ಈ ಬೇನೆಯು ಆತಂಕ, ಜುಗುಪ್ಪೆ, ನಿರುತ್ಸಾಹ ಇತ್ಯಾದಿ ಮಾನಸಿಕ ವಿಪರೀತಗಳೊಡನೆ ಜತೆಯಾಗುತ್ತದೆ. ಜತೆಯಾಗಿರುವ ಪರಿಸ್ಥಿತಿಗಳಿಗೆ ಉಪಶಮನವನ್ನು ಯಶಸ್ವಿಯಾಗಿ ಮಾಡಿದರೆ, ಒಬ್ಬೆಷನ್ನಿನ ಅವಾಂತರವು ಗಮನೀಯ ಪ್ರಮಾಣದಲ್ಲಿ ಕಡಿಮೆಯಾಗಲು ಸಾಧ್ಯ.
ತಿಕ್ಕಲು ಎನ್ನುವ ಹಂತದಿಂದ ನಡವಳಿಕೆಯು ಮೇಲೇರಿದಾಗ, ತತ್‌ಕ್ಷಣ, ನುರಿತ ಮನೋವೈದ್ಯರಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ, ಸಾಕಷ್ಟು ಗುಣ ಮಾಡಿಕೊಳ್ಳಬಹುದು. ವಿಚಿತ್ರ ವರ್ತನೆಯನ್ನು, ವೈದ್ಯರ ಬಳಿ ಹೇಳಿಕೊಂಡರೆ, ಸ್ವಪ್ರತಿಷ್ಠೆಗೆ ಕುಂದು ಎಂದು ಜಂಬ ಮಾಡಿಕೊಂಡರೆ ; ತಿಕ್ಕಲು ವಿಪರೀತಕ್ಕೇರಿ, ಬೇನೆಯಾಗುತ್ತದೆ. ಆದಕಾರಣ ಮೊದಮೊದಲ ಹಂತದಲ್ಲಿ ಮನೋವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆಯಬೇಕು.