೫. ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು
Manic Depressive Psychosis
ವಾಸ್ತವಿಕತೆ ಎಂದರೇನು ? ಮೇಜಿನ ಬಳಿ ಕುಳಿತು, ಪೆನ್ನು ಹಿಡಿದು, ಈ ಲೇಖನವನ್ನು ಬರೆಯುತ್ತಿದ್ದೇನೆ. ಇದರ ಅರಿವು ಸ್ಪಷ್ಟವಾಗಿದೆ. ವಸ್ತುಗಳ ಪರಿಸ್ಥಿತಿಯ ಅರಿವು ವಾಸ್ತವಿಕವಾದ, ಅಂದರೆ ನಿಜವಾದ ಅರಿವು, Reality ಎಂಬ ಪದದ ಅರ್ಥ ವಾಸ್ತವಿಕತೆ ಎಂದಾಗ ಬರುತ್ತದೆ. ಸುತ್ತುಮುತ್ತಲೂ ಇರುವ ವಸ್ತುಗಳ ನಿಜವಾದ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ವಸ್ತುಸ್ಥಿತಿಯಂತೆ ನಡೆದ ಘಟನೆಗಳ ಸ್ಮರಣೆಯೂ ವಾಸ್ತವಿಕವಾಗಿ, ದಿಟವಾಗಿ ಇರುತ್ತದೆ. ಕೆಲವು ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗುತ್ತದೆ. ಅಂತಹ ರೋಗಿಗಳ ಮನಸ್ಸು ಯಾವುದೋ ಊಹಾಲೋಕದಲ್ಲಿ ಮಗ್ನವಾಗಿರುತ್ತದೆ. ಅಂತಹ ಬೇನೆಗಳೂ ನಮ್ಮ ಸಮಾಜದಲ್ಲಿ ವಿಫುಲವಾಗಿವೆ. ಅವುಗಳ ಸ್ಕೂಲಪರಿಚಯವನ್ನು ಎಲ್ಲರೂ ಮಾಡಿಕೊಂಡರೆ, ಅಂತಹ ಕ್ರೂರ ಬೇನೆಗಳನ್ನು ಮೊದಮೊದಲ ಹಂತದಲ್ಲಿ ಗುರುತಿಸಿ, ಜರೂರು ಚಿಕಿತ್ಸೆಯನ್ನು ಮಾಡಿಸಬಹುದು. ಆಗ, ಬೇನೆಗಳನ್ನು ಪೂರ್ಣವಾಗಿ ಗುಣಪಡಿಸಲು ಸುಲಭ.
ಈ ತನಕ ನಾವು ಕಂಡ ಮಾನಸಿಕ ಬೇನೆಗಳಲ್ಲಿ ವಾಸ್ತವಿಕ ಅರಿವು ಮಾಯವಾಗಿರಲಿಲ್ಲ. Insight into reality ಲಕ್ಷಣವಾಗಿತ್ತು. ಆತಂಕದ ಬೇನೆಗಳಲ್ಲಾಗಲೀ, ಪ್ಯಾರನಾಯ್ಡ್ ಪರಿಸ್ಥಿತಿಯಲ್ಲಾಗಲೀ, ಹಿಸ್ಟಿರಿಯಾ ಪ್ರದರ್ಶನಗಳಲ್ಲಾಗಲೀ, ಒಷನಲ್ ಬೇನೆಗಳಲ್ಲಾಗಲೀ, ವಾಸ್ತವಿಕತೆಯ ಅರಿವು ಇದ್ದೇ ಇತ್ತು. ಒಂದರಲ್ಲಿ ಅಲ್ಲಸಲ್ಲದ, ಅನಗತ್ಯವಾದ ಭಯ ; ಇನ್ನೊಂದರಲ್ಲಿ ಮಹಾಭ್ರಮೆ, ಹಿಸ್ಟಿರಿಯಾದಲ್ಲಿ ; ಮಾನಸಿಕ ತಳಮಳವು ದೇಹದ ಅಂಗಕ್ಕೆ ವಕ್ತಿಸುವುದು ; ಒಷನ್ನಿನಲ್ಲಿ ಹಿಡಿದ ಗೀಳು ತಪ್ಪು ಎಂದು ತಿಳಿದಿದ್ದರೂ, ಅದರಂತೆ ಬಲವಂತವಾಗಿ ನಡೆದುಕೊಳ್ಳಲೇಬೇಕಾದ ಆಂತರಿಕ ಒತ್ತಡ : ಈ ರೀತಿ ಇದ್ದುವು. ಆದರೂ ಪರಿಸರದ ವಸ್ತುಸ್ಥಿತಿಯ ಜ್ಞಾನವು ಮಿಕ್ಕಂತೆ ಲಕ್ಷಣವಾಗಿ ಉಳಿದಿತ್ತು.