ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು

೧೭೭

ಭರ್ಜರಿ ಕುದುರೆಯನ್ನು ಸವಾರಿ ಮಾಡುತ್ತಿದ್ದೇನೆ, ಸೈಕಲ್ ನಡೆಸುತ್ತಿದ್ದೇನೆ ಎಂಬ ಭಾವನೆಯು ಪೂರ್ಣವಾಗಿರುತ್ತದೆ. ಆ ಅಂತರದಲ್ಲಿ ವಾಸ್ತವಿಕತೆಯ ಅರಿವನ್ನು ಮಗುವು ಉಳಿಸಿ ಕೊಂಡಿರುವುದಿಲ್ಲ.

ಬಾಲ್ಯದ ಸ್ವಸ್ಥವಾಗಿರುವ ಮನಸ್ಸಿನಲ್ಲಿ, ವಾಸ್ತವಿಕತೆಯ ಅರಿವು, ಅಲ್ಪಕಾಲ, ಕಳೆದುಹೋಗುವುದು, ಸ್ವಾಸ್ಥ್ಯದ ಸೂಚನೆ.

ಪ್ರೌಢರಲ್ಲಿ

ಬೆಳೆದು ಪ್ರೌಢರಾದವರಲ್ಲಿಯೂ ಈ ವರ್ತನೆಯನ್ನು ಕಾಣುತ್ತೇವೆ.

ಸ್ನೇಹಿತನೊಬ್ಬ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ. ಮಾತನಾಡುವಾಗ ನೇರನೆ ನೋಡದೆ ಆಕಾಶದತ್ತ ಮುಖವನ್ನು ಚಾಚುವ ಅಭ್ಯಾಸ ಅವನಿಗೆ ಆದ ಕಾರಣ 'ಆಕಾಶರಾಯ' ಎಂದವನನ್ನು ಕರೆಯುತ್ತಿದ್ದೆವು. ಅವನ ಈ ನಡವಳಿಕೆಯು ವಿಚಿತ್ರವಾಗಿದ್ದರೂ, ಯಾರಿಗೂ ಅದರಿಂದ ನೋವಾಗುತ್ತಿರಲಿಲ್ಲ. ಅವನ ಸ್ವಭಾವವೇ ಹಾಗೆ, ಯಾವುದೋ ಆಲೋಚನೆಯಲ್ಲಿ ಪೂರ್ಣವಾಗಿ ಮಗ್ನವಾಗಿರುತ್ತಿದ್ದ. ದಾರಿಯಲ್ಲಿ ಅಕಸ್ಮಾತ್ ಸಂಜೆ ಸಿಕ್ಕಾಗ 'ಸಿನಿಮಾಗೆ ಹೋಗೋಣವೇನೋ' ಎಂದು ಕೇಳಿದರೆ, 'ಸೋಪು ಇತ್ತಿಲ್ಲ' ಎಂದು ತಟ್ಟಂತ ಉತ್ತರಿಸಿದ, ಒಮ್ಮೆ, 'ಅರೆ! ಇವನಿಗೇನಾಯಿತು' ಎಂದು ನಾನಂದುಕೊಳ್ಳುವಷ್ಟರಲ್ಲಿ ; ಅವನೇ 'ನೀವೇನು ಕೇಳಿದ್ದು ! ಇವತ್ತು ಪಂಚೆಯನ್ನು ಒಗೆಯಬೇಕಾಗಿತ್ತು. ಸೋಪು ಇರಲಿಲ್ಲ ; ನಾಳೆ ಸೋಪು ಕೊಂಡುಕೊಂಡು ಪಂಚೆ ಒಗೆಯಬೇಕು ಎಂದು ಯೋಚಿಸುತ್ತಿದ್ದೆ. ಅದಕ್ಕೇ ಸೋಪು ಇತ್ತಿಲ್ಲ ಎಂದೆ' ಎಂದು ಉತ್ತರಿಸುತ್ತಿದ್ದ, ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲಿಲ್ಲ. ವಾಸ್ತವಿಕತೆಯ ಅರಿವು ಇದ್ದಿಲ್ಲ. ಆದುದರಿಂದ ಇವ ಮಾನಸಿಕ ರೋಗಿ ಎಂದೆನ್ನಲಾಗದು. ವಾಸ್ತವಿಕತೆಯ ಅರಿವು ಅರೆಕ್ಷಣ ಅವನಿಂದ ಮಾಯವಾಗಿತ್ತು, ದಿಟ. ಆದರೆ ಅದು ಅವ ಇನ್ನಾವುದೋ ಯೋಚನೆಯಲ್ಲಿ ಮಗ್ನನಾಗಿದ್ದುದರ ಪರಿಣಾಮ. ಆದರೆ ಇನ್ನೊಂದರೆಕ್ಷಣದಲ್ಲಿ ಪರಿಸ್ಥಿತಿಯನ್ನು ಲಕ್ಷಣವಾಗಿ ಅರಿತು, ಸಮಂಜಸವಾದ ಉತ್ತರವನ್ನು ನೀಡಿದ. ಅವನ ಮನಸ್ಸು ಸುಸೂತ್ರವಾಗಿ ಕೆಲಸವನ್ನು ಮಾಡುತ್ತಲಿತ್ತು. ಕೇವಲ Absent- minded ಆಗಿದ್ದ.

ಈ ಸ್ವಭಾವವು ಎಷ್ಟೋ ಜನರಲ್ಲಿದೆ. ಇಂತಹ ನಡವಳಿಕೆಗಳು, ಹಾಸ್ಯಗಾರರಿಗೆ, ಹೊನ್ನಿನ ಗಣಿ, ಹಣೆಯ ಮೇಲೆ ಕನ್ನಡಕವನ್ನೇರಿಸಿ, ಕನ್ನಡಕವನ್ನು ಹುಡುಕುವ ಅಧ್ಯಾಪಕರು ; ಸಕ್ಕರೆಗೆ ಬದಲು, ಉಪ್ಪನ್ನು ಕಣ್ಣುಗಳನ್ನು ತೇಲಿಸುತ್ತ