೧೭೯
ತನ್ನ ಸೇಡನ್ನೆಲ್ಲಾ ಅದರಲ್ಲಿ ಕಾರಿದ್ದ ; ನಂತರ ಸಮಾಧಾನ ಸ್ಥಿತಿಗೆ ಬಂದ. ಸ್ವಂತ ಉದ್ಯಮವೊಂದನ್ನು ಪ್ರಾರಂಭಿಸಿದ ; ಆರಂಭದ ಕಷ್ಟನಷ್ಟಗಳನ್ನು ಧೈರ್ಯಗುಂದದೆ ಎದುರಿಸಿದ. ಎರಡು ಮೂರು ವರ್ಷಗಳು ಹಲ್ಲು ಕಚ್ಚಿಕೊಂಡು ದುಡಿದ ನಂತರ ಶ್ರೀಮಂತನಾಗತೊಡಗಿದ. Adventurous Spirit :Gambling Instinct
- -Dare-Devil-ಎಂದೆಲ್ಲಾ ಇಂತಹ ಕೆರಳುವ ಪ್ರವೃತ್ತಿಯನ್ನು ಕರೆಯುತ್ತಾರೆ.
ತಾತ್ಕಾಲಿಕವಾಗಿ ವಾಸ್ತವಿಕತೆಯ ಅರಿವು ಇರದಿದ್ದರೂ, ಇವರುಗಳ ಮನಃಸ್ವಾಸ್ಥ್ಯವು ಅಣಿಯಾಗಿಯೇ ಇರುತ್ತದೆ.
ಉಗ್ರವಾದ ಕಾಯಿಲೆಗಳಿಂದ, ಅಥವಾ ಬಹಳವಾಗಿ ಶ್ರಮಪಟ್ಟುದುದರ ಸಲುವಾಗಿ, ಕೆಲವು ವೇಳೆ ವಾಸ್ತವಿಕತೆಯ ಅರಿವು ಮರೆಯಾದಂತೆ ಕಾಣಿಸುತ್ತದೆ.
ಸನ್ನಿಪಾತ ಜ್ವರವಾಗಲೀ, ಪ್ಲೇಗು, ನ್ಯೂಮೋನಿಯ ಇತ್ಯಾದಿ ಉಗ್ರಕಾಯಿಲೆಗಳಾಗಲಿ ತಾಕಿದಾಗ, ಸನ್ನಿ ಬಡಿಯುತ್ತದೆ. ಅಂದರೆ ಎರಿಬರಿಯಾಗಿ ಹುಚ್ಚರಂತೆ ಆಡಬಹುದು. ವಾಸ್ತವಿಕತೆಯ ಅರಿವು ಇರುವುದಿಲ್ಲ. ಆದರೆ ಹೀಗಾಗುವುದು ಉಲ್ಬಣವಾದ ಜ್ವರದ ಪರಿಣಾಮ, ಜ್ವರವು ನಿಂತಮೇಲೆ, ದೇಹವು ಆರೋಗ್ಯ ಸ್ಥಿತಿಗೆ ಬಂದಮೇಲೆ ಮನಸ್ಸು ಮೊದಲಿದ್ದಂತೆ ಸ್ವಸ್ಥವಾಗುತ್ತದೆ.
ತುಂಬಾ ನೋವನ್ನು ಒಂದೆರಡು ದಿನಗಳು ಅನುಭವಿಸಿ, ನಂತರ ಹೆರಿಗೆ ಯಾದರೆ, ಅಂತಹವರಲ್ಲಿ ಹೆರಿಗೆಯಾದ ನಂತರ ತುಂಬಾ ದಣಿವು, ಸುಸ್ತು ಇರುತ್ತದೆ. ಇಂತಹವರಲ್ಲಿ ಕೆಲವರು ಅರ್ಧ ಅಥವಾ ಒಂದು ತಾಸು ಸನ್ನಿ ಬಡಿದವರಂತೆ ಬಡ ಬಡಿಸುವುದುಂಟು. ನಂತರ ಸರಿಹೋಗುತ್ತಾರೆ.
ಎರಡು ಮೂರು ದಿನಗಳು ತುಂಬಾ ದೇಹಶ್ರಮವನ್ನು ಪಡಲೇಬೇಕಾದರೆ, ತದನಂತರ ಅಂತಹವರೂ ವಾಸ್ತವಿಕತೆಯ ಅರಿವನ್ನು ಕಳೆದುಕೊಳ್ಳುತ್ತಾರೆ. ವಿಶ್ರಾಂತಿಯು ಸಾಕಷ್ಟು ದೊರಕಿದ ನಂತರ, ಅವರ ಮನಸ್ಪೂ ತಿಳಿಯಾಗುತ್ತದೆ, ಸ್ವಸ್ಥವಾಗುತ್ತದೆ. ಮರುಭೂಮಿಯಲ್ಲಿ ಅಥವಾ ಕಾಡುಗಳಲ್ಲಿ ದಾರಿತಪ್ಪಿದವರು ಎರಡು ಮೂರು ದಿನಗಳಾದ ಮೇಲೆ ಹುಡುಕಲು ಹೋದ ತಂಡಕ್ಕೆ ಸಿಕ್ಕಾಗ ಯಾರನ್ನೂ ಗುರುತಿಸದೆ ವಾಸ್ತವಿಕತೆಯ ಅರಿವೇ ಇಲ್ಲದವರಂತೆ ನಡೆದುಕೊಳ್ಳುತ್ತಾರೆ. ಆದರೆ ವಿಶ್ರಾಂತಿಯೂ ಮತ್ತು ಉಪಚಾರವೂ ನಡೆದ ಮೇಲೆ ಸ್ವಾಸ್ಥ್ಯವನ್ನು ಬೇಗ ಪಡೆಯುತ್ತಾರೆ.
ಮದ್ಯ ಮತ್ತು ಗಾಂಜಾ ಇತ್ಯಾದಿ ದುಶ್ಚಟಗಳಿಂದಲೂ ವಾಸ್ತವಿಕತೆಯ ಅರಿವು ಮಾಯವಾಗುವುದು ಎಲ್ಲರೂ ಕಂಡು ಕೇಳಿರುವ ವಿಷಯ.