೧೮೧
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು
ಪಡೆಯುತ್ತಾನೆ.
ಇದೇ ರೀತಿಯಲ್ಲಿ ಕೊಕೇನ್, ಗಾಂಜಾ, ಅಫೀಮು, ಇತ್ಯಾದಿ ಮಾದಕ ವಸ್ತುಗಳೂ ಕೂಡ, ಅಮಲನ್ನು ಬರಿಸಿ, ವಾಸ್ತವಿಕತೆಯ ಅರಿವನ್ನು ಮಾಯಗೊಳಿಸುತ್ತವೆ. ಆದರೆ ಅಮಲು ಇರುವತನಕ, ಮಾದಕವಸ್ತುಗಳ ಪ್ರಭಾವವು ಇರುವ ತನಕ. ನಂತರ ವಾಸ್ತವಿಕತೆಯ ಅರಿವು ಮೂಡುತ್ತದೆ. ನಾಳಿನಿಂದ ಇವನ್ನು ಮುಟ್ಟುವುದಿಲ್ಲ ಎಂದು ತಲೆಯನ್ನು ಹೊಡೆದುಕೊಳ್ಳುತ್ತಾರೆ. ಆದರೆ ಗೀಳು ಹತ್ತಿರುತ್ತದಲ್ಲಾ ! ನರಿ ಕೆಕ್ಕೆಕಾಯಿ ತಿಂದಹಾಗೇ ಇವರುಗಳೂ ಸಂಜೆ ಹೊತ್ತಿಗೆ ದುಶ್ಚಟಕ್ಕೆ ಬಲಿಯಾಗುತ್ತಾರೆ.
ರಾಮಣ್ಣನ ಹೈಪೊಮೇನಿಯ
ಪ್ರೊಬೇಷನರ್ ಪರೀಕ್ಷೆಯಲ್ಲಿ ಯಶಸ್ವಿಯಾಗಿ ರಾಮಣ್ಣ ಉತ್ತೀರ್ಣನಾಗಿದ್ದ. ಇಂಟರ್‌ವ್ಯೂನಲ್ಲಿ ಅನಕ ಅತ್ಯಂತ ಚೂಟಿಯ ಉತ್ತರಗಳನ್ನು ಕೊಟ್ಟಿದ್ದ. ಪ್ರೊಬೇಷನರಾದುದು ಸ್ವಾಭಾವಿಕವಾಗಿತ್ತು. ಆರೆಂಟು ತಿಂಗಳುಗಳಲ್ಲಿ ಬಲು ಚೂಟಿಯಿಂದ ಕೆಲಸವೆಲ್ಲವನ್ನೂ ಕಲಿತುಕೊಂಡ. ಮೇಲಧಿಕಾರಿಗಳ ಅಚ್ಚು ಮೆಚ್ಚಿನವನಾದ.
ಕಚೇರಿಯ ನೌಕರರೆಲ್ಲರೂ ಕೂಡಿ ವಿಲಾಸೀ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ರಾಮಣ್ಣನ ಉತ್ಸಾಹವನ್ನು ಕೇಳಬೇಕೇ? ಸಂಸ್ಥೆಯ ಕಾರ್ಯದರ್ಶಿಯಾಗಿ ಆಯ್ಕೆಯಾದ. ಆಡುವ ನಾಟಕಗಳಲ್ಲಿ ಪಾತ್ರವೊಂದು ಅವನಿಗೆ ಮೀಸಲಾಗಿತ್ತು. ಉತ್ಸಾಹೀ ಕೆಲವು ನೌಕರರು ಸಾಹಿತ್ಯ ಸಂಘವೊಂದನ್ನು ಸ್ಥಾಪಿಸಬಯಸಿದರು. ಪುಸ್ತಕಭಂಡಾರವನ್ನು ನಿರ್ಮಿಸತೊಡಗಿದರು. ಅವಿರೋಧವಾಗಿ ರಾಮಣ್ಣ ಉಪಾಧ್ಯಕ್ಷನಾದ. ಕೆಲವಾರು ಕತೆಗಳನ್ನೂ ಪದ್ಯಗಳನ್ನೂ ಅವನಾಗಲೆ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಸಿದ್ಧನಾಗಿದ್ದ. ಸಹಕಾರೀ ವಸ್ತುಮಳಿಗೆಯನ್ನು ಕಚೇರಿಯವರು ಸ್ಥಾಪಿಸಲಿಚ್ಛಿಸಿದರು. ಸರಿ ! ರಾಮಣ್ಣ ಜಂಟಿಕಾರ್ಯದರ್ಶಿಯಾದ.
ಇಷ್ಟೆಲ್ಲಾ ಹವ್ಯಾಸಗಳನ್ನು ಇಟ್ಟುಕೊಂಡಿದ್ದರೂ, ಕಚೇರಿಯ ಕೆಲಸದಲ್ಲಿ ರಾಮಣ್ಣ ಹಿಂದೆ ಬೀಳಲಿಲ್ಲ. 'ಇಷ್ಟೆಲ್ಲಾ ಕೆಲಸವನ್ನು ಹತ್ತು ಹನ್ನೆರಡು ತಾಸು ದಣಿಯದೆ ಮಾಡುತ್ತೀರಲ್ಲಾ? ಯೋಗಾಭ್ಯಾಸ ಗೀಗಾಭ್ಯಾಸ ಏನಾದರೂ ಮಾಡುತ್ತೀರಾ, ಅಷ್ಟು ಶಕ್ತಿಯನ್ನು ಪಡೆಯುವುದಕ್ಕೆ' ಎಂದು ಸಹೋದ್ಯೋಗಿಗಳು ಅಚ್ಚರಿಯಿಂದ ಕೇಳಿದ್ದುಂಟು. 'ಅವರ ಜಾತಕದ ಲಗ್ನದಲ್ಲಿ ಬುಧ ಉಚ್ಛನಾಗಿರಬೇಕು. ಆದುದರಿಂದ ಪಾದರಸದಂತೆ ಹರಿದಾಡುತ್ತಾರೆ' ಎಂದು ಟೈಪಿಸ್ಟ್ ತರುಣಿಯು