ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೨

ಮನಮಂಥನ

ಮೆಚ್ಚುಗೆಯಿಂದ ಹುಬ್ಬು ಕೊಂಕಿಸಿದ್ದಳು.

ಎರಡು ವರ್ಷದ ಪ್ರೊಬೇಷನ್ ಅವಧಿಯು ಮುಗಿಯುತ್ತಾ ಬಂದಿತು. ಇನ್ನೊಂದೆರಡು ತಿಂಗಳುಗಳಲ್ಲಿ ಖಾಯಂ ಆಗಬೇಕು ; ಆಫೀಸರಾಗಿ,

ಆ ಸಮಯಕ್ಕೆ ಸರಿಯಾಗಿ ಅವನ ನಡತೆಯಲ್ಲಿ ತುಸು ವಿಚಿತ್ರವು ಕಾಣ ಬಂದಿತು. ಮೊದಲೇ ಮಾತುಗಾರ, ಈಗೀಗ ಮಾತು ಅತಿಯಾಯಿತು. ಕೆಲವೊಮ್ಮೆ ಅಸಂಬದ್ಧವೂ ಆಗುತ್ತಿತ್ತು. ನಗುಸರಸಿಯಾಗಿದ್ದವ ಇತ್ತಿಂದೀಚೆಗೆ ಯಾರಾದರೂ ತಮಾಷೆ ಮಾಡಿದರೆ, ರೇಗಲಾರಂಭಿಸುತ್ತಿದ್ದ. ಕೆಲವು ವೇಳೆ ಅತಿ ಜಾಣತನದ ಮಾತನ್ನಾಡಿ, ಎಲ್ಲರೂ ಅಚ್ಚರಿಪಡುವಂತೆ ಮಾಡುತ್ತಿದ್ದ. ಮತ್ತೆ ಕೆಲವು ಸರ್ತಿ ಶುದ್ಧ ಗಾಂಪನಂತೆ ನುಡಿಯುತ್ತಿದ್ದ. ಸಿನಿಮಾಕ್ಕೆ ಬಾರೋ ಎಂದು ಸ್ನೇಹಿತನನ್ನು ಒತ್ತಾಯಪಡಿಸಿ ಕರೆದುಕೊಂಡು ಹೋಗುವುದು ; ಅರ್ಧ ತಾಸಿನೊಳಗೆ, ಸಾಕು ಕಣೋ ಇನ್ನೆಲ್ಲಿಗಾದರೂ ಹೋಗೋಣ, ಎಂದು ಎದ್ದು ಬಿಡುವುದು ; ಹೀಗೆ ಮಾಡಲು ಪ್ರಾರಂಭಿಸಿದ. ಎಲ್ಲದಕ್ಕೂ ಅವಸರ ; ಯಾವುದರಲ್ಲೂ ಆತುರ ; ಕುಳಿತಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಲಾರ ; ತೊಣಚಿ ಹೊಕ್ಕ ನಾಯಿಯ ಹಾಗೆ ಆಡತೊಡಗಿದ. ಮುಖಚರ್ಯೆಯೂ ಬದಲಾಯಿತು. ಅಡ್ಡಡ್ಡ ಗೆರೆಗಳಿರುತ್ತಿದ್ದ ನಗುಮುಖವು ಹೋಗಿ ಉದ್ದುದ್ದ ಗೆರೆಗಳ ಕಾತರದ ಮುಖವು ಸದಾ ಕಾಣಿಸುವಂತಾಯಿತು.

ರಾಮಣ್ಣನ ನಡವಳಿಕೆಯಲ್ಲಿ ಕಾಣಬಂದ ಬದಲಾವಣೆಗಳು, ಅವನ ನೂರಾರು ಸ್ನೇಹಿತರಿಗೆ ಸ್ಪಷ್ಟವಾಗಿ ಕಾಣಿಸಿತು. ಆದರೂ ರಾಮಣ್ಣನಲ್ಲಿ ತುಂಬಾ ವಿಶ್ವಾಸವಿದ್ದವರಾದುದರಿಂದ 'ತುಂಬಾ ದುಡಿಯುತ್ತಿದ್ದಾನೆ. ಆ ಕಾರಣದಿಂದ ಬಹಳ ದಣಿದಿದ್ದಾನೆ. ಕೆಲವು ವಾರಗಳಾದರೆ, ಖಾಯಂ ಆಫೀಸರಾದ ಮೇಲೆ, ರಜ ತೆಗೆದುಕೊಂಡು ಪೂರ್ಣ ವಿಶ್ರಾಂತಿಯನ್ನು ಪಡೆದರೆ, ಎಂದಿನಂತೆ ಗೆಲುವಾಗುತ್ತಾನೆ' ಎಂದಂದುಕೊಂಡರು. ಇಷ್ಟರಾದವರಿಗೆ ಬೇನೆಯು ತಗುಲಿದೆ ಎಂದು ಒಪ್ಪಿಕೊಳ್ಳಲು ಮನಸ್ಸು ಸಾಮಾನ್ಯವಾಗಿ ಸಿದ್ಧವಿರುವುದಿಲ್ಲ. ಹಾಗಾಗಿ ಅವರಾರೂ ರಾಮಣ್ಣನ ಆರೋಗ್ಯದ ವಿಷಯದಲ್ಲಿ ಕೈಹಾಕಲಿಲ್ಲ.

ಮನೆಯಲ್ಲಿ ಮುದಿತಾಯಿಯೊಂದಿಗೆ ರಾಮಣ್ಣ ವಾಸವಾಗಿದ್ದ. ಕೊನೆಯ ಒಬ್ಬನೇ ಮಗ ;ಹಿರಿಯ ನಾಲ್ವರು ಅಕ್ಕಂದಿರೂ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದರು. ಶಾಲೆ ಕಾಲೇಜುಗಳಲ್ಲಿ ಉತ್ತಮ ತರಗತಿಯಲ್ಲಿ ಪ್ಯಾಸುಮಾಡುವ ಹುಡುಗ ಮನೆಯವರ ಮುದ್ದಿಗೆ ಪಾತ್ರನಾಗುವುದು ಸ್ವಾಭಾವಿಕ. ಹಾಗಾಗಿ ಮೊದಲಿನಿಂದಲೂ ತಾಯಿಯ ಕಣ್ಮಣಿಯಾಗಿದ್ದ. ಬಾಲ್ಯದಲ್ಲಿ ತಂದೆಯು