ಮನಮಂಥನ
. ಮಾತುಗಳನ್ನೂ ರಾಮಣ್ಣ ಸರಿಯಾಗಿ ಆಡಿದ. 'ಮಕ್ಕಳನ್ನು ಯಾಕೆ ಕರೆದುಕೊಂಡು ಬರಲಿಲ್ಲ' ಎಂದು ಮೂರು ಮಕ್ಕಳ ಹೆಸರುಗಳನ್ನೂ, ಹೇಳಿ ವಿಚಾರಿಸಿದ. ಭಾವನ ಜತೆಗೆ ನೀನ್ಯಾಕೆ ಬಂದೆ, ಇಲ್ಲೇನು ಕೆಲಸವಿತ್ತು ಈಗ ಎಂದು ಕೇಳಲಿಲ್ಲ. 'ನೀನು ಹೇಗಿದೀಪ್ಪಾ, ಹೊಸ ಕಾರುಬಾರು ಏನಾದರೂ ಮಾಡ್ತಿದ್ದೀಯಾ' ಎಂದು ಹಿರಿಯಕ್ಕ ಕೇಳಿದಳು. * ಈಗ ಪೆಯಿಂಟಿಂಗ್ ಹಾಬಿಯನ್ನು ಹಿಡಿದಿದ್ದೀನಿ' ಎಂದ ರಾಮಣ್ಣ. 'ಹೌದೇನೋ, ಹಾಗಾದರೆ ಏನು ಮಾಡಿದ್ದೀಯೋ ಅದನ್ನು ತಂದು ತೋರಿಸು.' ಎಂದಳು. ಕೊಠಡಿಯೊಳಕ್ಕೆ ಹೋಗಿ ದೊಡ್ಡ ಸುರಳಿಯನ್ನು ರಾಮಣ್ಣ ತಂದು ಅಕ್ಕನ ಕೈಲಿಟ್ಟ 'ಚಾಮುಂಡಿಬೆಟ್ಟದ ಚಿತ್ರ ಬಿಡಿಸಿದೀನಿ ನೋಡು' ಎಂದ. ಅಕ್ಕ ಹಾಳೆಯನ್ನು ಬಿಡಿಸಿ ನೋಡಿದಳು ದೊಡ್ಡ ಹಾಳೆಯ ಮಧ್ಯದಲ್ಲಿ ಕೆಂಪು ಶಾಯಿಯಲ್ಲಿ ಮೂರು ಚಿತ್ರಗಳನ್ನು ಸಣ್ಣದಾಗಿ ಮಾಡಿದ್ದ. ಅಷ್ಟೇ ! ಆ ವೇಳೆಗೆ ಸರಿಯಾಗಿ ಭಾವ ಅಲ್ಲಿಗೆ ಬಂದ. ಬುಳುಬುಳು ಅಳಲು ಶುರುಮಾಡಿದ್ದ ಹೆಂಡತಿಯನ್ನು ಸನ್ನೆಮಾಡಿ, ಅಡಿಗೆಮನೆಗೆ ಕಳಿಸಿದ. ಚಿತ್ರದ ವಿಷಯವನ್ನು ಚರ್ಚಿಸಲು ಅವ ರಾಮಣ್ಣನೊಡನೆ ಕುಳಿತ.
'ಚಾಮುಂಡಿಬೆಟ್ಟದ ಚಿತ್ರವನ್ನೇನೋ ಬರೆದಿದ್ದಿ. ಆದರೆ ದೇವಸ್ಥಾನವೇ ಇಲ್ಲವಲ್ಲೋ' ಎಂದ ಭಾವ. 'ಇಲ್ಲೇ ಅದರ ಗೋಪುರವನ್ನ ಬರೆದಿದ್ದೇನೆ. ಮಂಜು ಬೀಳುತ್ತಿರಬಹುದು, ನಿಮಗೆ ಕಾಣಿಸಲಿಲ್ಲ' ಎಂದ ರಾಮಣ್ಣ. ಇದೇ ತೆರನ ಮಾತು ಮುಂದುವರೆಯಿತು ರಾತ್ರಿ ಊಟ ಮಾಡುವ ತನಕ.
ಬೆಳಗಾಗುತ್ತಲೂ ಭಾವ ಮನೋವೈದ್ಯರಲ್ಲಿಗೆ ಹೋದರು. ರಾಮಣ್ಣನ ಬೇನೆಯನ್ನು ವಿವರಿಸಿದರು. ವೈದ್ಯರೂ ಭಾವನ ಜತೆಗೆ ರಾಮಣ್ಣನ ಮನೆಗೆ ಬಂದು, ಮಾತನಾಡಿದರು. ಹಿಂತಿರುಗುವಾಗ ಭಾವನನ್ನೂ ಕರೆದುಕೊಂಡು ಹೋದರು. ವಿಷಯವನ್ನು ವಿವರಿಸಿದರು.
'ರಾಮಣ್ಣನ ವ್ಯಕ್ತಿತ್ವವು ಇನ್ನೂ ದೃಢಗೊಂಡಿಲ್ಲ. ಇನ್ನೂ ಹುಡುಗು ಹುಡುಗು ಪ್ರವೃತ್ತಿಯಿದೆ. ತುಂಬಾ ಜಾಣ. ಪ್ರೊಬೇಷನರ್ ಪರೀಕ್ಷೆಗೆ ಕೂತಾಗ ಹೈಪೋಮೇನಿಯಾ ಶುರುವಾಗಿತ್ತು. ಆದುದರಿಂದಲೇ ಅವ ಏನೇನೆಲ್ಲಾ ಚಟುವಟಿಕೆಗಳಲ್ಲಿ ಮಗ್ನನಾಗುತ್ತಿದ್ದ. ಇತರರು ಹಾಗೆ ದುಡಿದಿದ್ದರೆ, ಸುಸ್ತುಬಡಿದು ಹೋಗುತ್ತಿದ್ದರು. ಆದರೆ ಇವ ದಣಿಯುತ್ತಿರಲಿಲ್ಲ ಈ ಬೇನೆಯ ಕಾರಣದಿಂದ. ತುಂಬಾ ಚೂಟಿಯಿಂದ, ಬಹಳ ಶ್ರಮವಹಿಸಿ, ಅವಿಶ್ರಾಂತವಾಗಿ ಕೆಲಸ ಮಾಡುವವರಲ್ಲಿ, ಬಹು ಮಂದಿ ಹೈಪೋಮೇನಿಯಾ ಪ್ರವೃತ್ತಿಯವರೇ. ಆದರೆ ಅದೇ ಹಂತದಲ್ಲಿ ಅದು ಉಳಿಯುತ್ತದೆ. ಹಾಗಾಗಿ ಅವರುಗಳು ಬಾಳಿನ ಉದ್ದಕ್ಕೂ