ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು

೧೮೫೫

ಅತಿಯಾಗಿ ದುಡಿಯುತ್ತಾರೆ. ಸ್ಪಷ್ಟವಾಗಿಯೂ ಇರುತ್ತಾರೆ. ಸಮಾಜದಲ್ಲಿ ಹಿರಿಮೆಯನ್ನೂ ಮನ್ನಣೆಯನ್ನೂ ಗಳಿಸುತ್ತಾರೆ. ಆದರೆ ಇವರಲ್ಲಿ ವ್ಯಕ್ತಿತ್ವವು Personality ದೃಢವಾಗಿ ಬೆಳೆದಿರುತ್ತದೆ. ಆದಕಾರಣ ಹೈಪೋಮೇನಿಯಾ ಪ್ರವೃತ್ತಿಯು, ಬೇನೆಯ ಹಂತಕ್ಕೆ ಏರುವುದಿಲ್ಲ.

ರಾಮಣ್ಣನು ಬಾಲ್ಯದಿಂದಲೂ ಮುದ್ದುಮುದ್ದಾಡಿಸಿಕೊಂಡು ಬೆಳೆದವನು, ತುಂಬಾ ಚೂಟಿಯ ಹುಡುಗನಾದುದರಿಂದ ಪರೀಕ್ಷೆಗಳಲ್ಲಿ ಉತ್ತಮ ವರ್ಗದಲ್ಲಿ ಉತ್ತೀರ್ಣನಾಗುತ್ತಿದ್ದ. ಇದರಿಂದ ಮನೆಯವರ ಮುದ್ದು ಹೆಚ್ಚಾಯಿತು. ನನ್ನ ಬಿಟ್ಟರೆ ಇನ್ನು ಯಾರೂ ಇಲ್ಲ ಎನ್ನುವ ಬಾಲ್ಯತನದ ಮಮಕಾರವು ಬೆಳೆಯಿತು. ಇತರರು ಅಸೂಯೆ ಪಡುವಂತಹ ಪ್ರೊಬೇಷನರ್‌ಗಿರಿಯು ಲಭಿಸಿದಾಗ, ಬಾಲ್ಯತನದ ಮಮಕಾರಕ್ಕೆ ಇಂಬು ಕೊಟ್ಟಂತಾಯಿತು. ಹೈಪೋಮೇನಿಯಾ ಪ್ರವೃತ್ತಿ ಇದ್ದ ರಾಮಣ್ಣ, ಎಲ್ಲ ಚಟುವಟಿಕೆಗಳಲ್ಲೂ ಕೈಹಾಕತೊಡಗಿದ.

ಆದರೆ ಅವನ ವ್ಯಕ್ತಿತ್ವವು ಬಾಳ ಘರ್ಷಣೆಗಳಿಂದ ದೃಢವಾಗಿರಲಿಲ್ಲ. ಕಷ್ಟ, ಸಂಕಟ, ಜವಾಬ್ದಾರಿ ಹೊಣೆ, ಅವಮಾನ, ಅನ್ಯಾಯ ಇವುಗಳು ತರುಣರಿಗೆ ಸಾಕಷ್ಟು ಬರೆ ಹಾಕದೆ ಇದ್ದರೆ, ಅವರುಗಳ ವ್ಯಕ್ತಿತ್ವವು ದೃಢವಾಗುವುದಿಲ್ಲ. ಮೃದುವಾಗಿಯೇ ಇರುತ್ತದೆ. ರಾಮಣ್ಣನ ಪರಿಸ್ಥಿತಿಯೂ ಇಂತಹುದೇನೇ.

ಆದಕಾರಣವೇ, ಅವ ಹೈಪೋಮೇನಿಯಾದ ಹಂತದಿಂದ ಮೇನಿಯಾ ಹಂತಕ್ಕೆ ಏರಿದ್ದಾನೆ. ಆರೇಳು ತಿಂಗಳುಗಳ ಹಿಂದೆಯೇ, ಅವನ ನಡವಳಿಕೆಯು ವಿಚಿತ್ರವಾದಾಗ, ಅವನ ಸ್ನೇಹಿತರು ಹಾಗೂ ಮನೆಯವರು ಗಮನಿಸಿದರು. ಆದರೆ ಸೂಕ್ತವಾದ ಪರಿಹಾರ ಕ್ರಮವನ್ನು ಕೈಗೊಳ್ಳಲಿಲ್ಲ.

ಆ ಸ್ಥಿತಿಯಲ್ಲಿ ಸೂಕ್ತ ಚಿಕಿತ್ಸೆಯನ್ನು ಕೈಗೊಂಡಿದ್ದರೆ, ಮೇನಿಯಾ ಹಂತ ಕ್ಕೇರುವುದನ್ನು ಬಹಳ ಸುಲಭವಾಗಿ ತಪ್ಪಿಸಬಹುದಾಗಿತ್ತು. ರಾಮಣ್ಣನನ್ನು ಕಂಡರೆ ಸ್ನೇಹಿತರಿಗೆ ತುಂಬಾ ವಿಶ್ವಾಸ. ಅವನಿಗೆಂದು ಏನನ್ನಾದರೂ ಮಾಡಲು ಅವರು ಸಿದ್ದ. ಆದರೆ ಈ ಬೇನೆಯ ವಿವರಗಳು ಅವರಿಗೆ ತಿಳಿಯದು. ತಿಳಿದಿದ್ದರೆ ಅವರೇ ಚಿಕಿತ್ಸೆಯನ್ನು ಮಾಡುತ್ತಿದ್ದರು.


ನಿಮ್ಮ ಅತ್ತೆಯು ಹಳೆಯ ಕಾಲದ, ಏನನ್ನೂ ಅರಿಯದ ಹೆಂಗಸು. ಇದ್ದೊಬ್ಬ ಚೂಟಿ ಮಗ ಮಾಡಿದ್ದೇ ಸರಿ ಎಂದು ನಂಬಿ ಬಾಳನ್ನು ನಡಸುತ್ತಿರುವವಳು. ಈ ವಿಷಯಗಳು ಆಕೆಗಾದರೂ ತಿಳಿದಿದ್ದರೆ, ರಾಮಣ್ಣ ಈ ಸ್ಥಿತಿಗೆ ಬರುತ್ತಿರಲಿಲ್ಲ. ಈಗಲೂ ರಾಮಣ್ಣನ ಬೇನೆಯು ಕೆಟ್ಟಮಟ್ಟಕ್ಕೆ ಇಳಿದಿಲ್ಲ. ಕೆಲವು ತಿಂಗಳು ಚಿಕಿತ್ಸೆ ಮಾಡಿದರೆ, ಒಂದಾರು ತಿಂಗಳು ಅನ್ನಿ, ಅಷ್ಟರಲ್ಲಿ