೧೮೭
ಆದುದರಿಂದ, ಹೈಪೊಮೇನಿಯಾದ ವಿವರಗಳು ಸಮಾಜದಲ್ಲಿರುವವರಿಗೆ ತಿಳಿದಿರಬೇಕು. ಅವರ ನೆಂಟರಿಷ್ಟರಿಗೆ ಈ ತೆರನ ಮಾನಸಿಕ ಉದ್ರೇಕವಾದಾಗ, ಮೊದಮೊದಲ ಹಂತದಲ್ಲಿ ಗುರುತಿಸಲು ಆಗ ಸಾಧ್ಯವಾಗುತ್ತದೆ. ಹೈಪೋಮೇನಿ ಯಾವು, ಮೇನಿಯಾ ಆಗದಂತೆ ಚಿಕಿತ್ಸೆಯನ್ನು ಮಾಡಲು ಸಾಧ್ಯ.
ನಿಂಗನ ಮೇನಿಯಾ
ಸ್ನೇಹಿತರೊಂದಿಗೆ ಸಾಹುಕಾರ್ ಲಕ್ಕಣ್ಣನವರು ಹಜಾರದಲ್ಲಿ ಮಾತನಾಡುತ್ತ ಕುಳಿತಿದ್ದರು. ಹದಿನೈದು ವರ್ಷದ ಅವರ ಮಗ ನಿಂಗ, ಹೊರಗೆ ಹೋಗಿದ್ದವನು ಮನೆಗೆ ಬಂದ. ಹಜಾರದಲ್ಲಿ ಎಲ್ಲರೂ ಕುಳಿತಿರುವುದನ್ನು ಕಂಡು ತಾನೂ ಅಲ್ಲಿ ಕುಳಿತ. ಜಮೀನಿನ ವಿಚಾರದಲ್ಲಿ ಹೀಗೆ ಮಾಡಿದರೆ ಚೆನ್ನ ಎಂದು ಲಕ್ಕಣ್ಣನವರು ಸ್ನೇಹಿತರಿಗೆ ಹೇಳಿದರು. ಆ ಸ್ನೇಹಿತರು ಉತ್ತರ ಕೊಡುವುದಕ್ಕೆ ಮುಂಚೆಯೇ ನಿಂಗ ಏನನ್ನೋ ಹೇಳಲು ಶುರು ಮಾಡಿದ. ಲಕ್ಕಣ್ಣನವರಿಗೆ ರೇಗಿತು. ನಿಂಗೇನು ಬುದ್ಧಿಗಿದ್ದಿ ಇಲ್ವೇನೋ, ಮಗಾ ! ದೊಡ್ಡವರು ಮಾತಾಡ್ತಿರುವಾಗ, ಚಿಕ್ಕವರು ಬಾಯಿ ಹಾಕಬಾರದು ಅಂತ ಎಷ್ಟು ಸಲ ಹೇಳಿಲ್ಲ. ಎದ್ದು ಹೋಗು' ಎಂದು ಸಿಟ್ಟಿನಿಂದ ಗದರಿಸಿದರು. ಮುಖವನ್ನು ಚಿಕ್ಕದು ಮಾಡಿಕೊಂಡು ನಿಂಗ ಮನೆಯೊಳಕ್ಕೆ ಬಿರಬಿರನೆ ಹೊರಟುಹೋದ.
ಮಧ್ಯಾಹ್ನದ ಊಟಕ್ಕೆ ಮನೆಯವರೆಲ್ಲರೂ ಕುಳಿತಿದ್ದರು. ಅನ್ನವನ್ನು ಬಡಿಸಾಗಿತ್ತು. ಎಸರನ್ನು ಬಡಿಸಲು ಸ್ವಲ್ಪ ತಡವಾಗಿತ್ತು. ಲಕ್ಕಣ್ಣನವರೂ ಊಟಕ್ಕೆ ಕುಳಿತಿದ್ದರು. ಅವರಿದ್ದಾಗ ಮಕ್ಕಳು ಹೆಂಗಸರು ಮಾತಾಡುವುದು ಅಪರೂಪ. ಸಾಹುಕಾರರು ಮಾತನಾಡಿಸಿದರೆ, ಉತ್ತರಿಸುವರೇ ವಿನಾ ಮಿಕ್ಕಂತೆ, ಸಾಮಾನ್ಯವಾಗಿ ಮಾತೆತ್ತುತ್ತಿರಲಿಲ್ಲ. ಆದರೆ ಆ ಮಧ್ಯಾಹ್ನ ನಿಂಗ “ಎಸರು ತಾಮ್' 'ಎಸರು ತಾ' ಎಂದು ಎರಡು ಮೂರು ಸಲ ಗಟ್ಟಿಯಾಗಿ ಕೂಗಿದ. ಇದೇನು ಇವತ್ತು, ನಿಂಗ ಹೀಗಾಡ್ತಾನೆ ; ಅಪ್ಪ ಇರುವುದನ್ನೂ ಗಮನಿಸಿದಂತಿಲ್ಲ' ಎಂದು ಮನೆಯವರೆಲ್ಲರೂ ನಿಂಗನನ್ನೇ ದಿಟ್ಟಿಸಿ ನೋಡತೊಡಗಿದರು. ದೊಡ್ಡವರೆದುರಿಗೆ ಯಾವಾಗಲೂ ತೋರಿಸುತ್ತಿದ್ದ ಗೌರವ, ಮರ್ಯಾದೆ, ಮತ್ತು ತುಸು ಭಯ, ಇವೆಲ್ಲವೂ ನಿಂಗನಿಂದ ಈಗ ಮರೆಯಲ್ಪಟ್ಟಂತಿತ್ತು.
ಸಂಜೆ ಮುಂದೆ ಅಕ್ಕನ ಜತೆಯಲ್ಲಿ ಪಗಡೆಯಾಡುತ್ತ ನಿಂಗ ಕುಳಿತಿದ್ದ. ಅಕ್ಕ ಆಡಿದ ಒಂದು ಮಾತಿಗೆ ಹತ್ತು ಮಾತುಗಳನ್ನು ಬಡ ಬಡ ಅಂತ ಆಡತೊಡಗಿದ. “ನಿಂಗೇನು ಬಂತೋ, ನಿಂಗ ; ಆಡಿದ ಮಾತಿಗೆ ಯೋಚಿಸಿ