ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೮

ಮನಮಂಥನ

ಉತ್ತರವನ್ನು ಕೊಡುತ್ತಿದ್ದೆ. ಈಗೀಗ ಸರಸರಾಂತ ಎಷ್ಟು ಮಾತಾಡ್ತೀಯಪ್ಪಾ !' ಎಂದು ಅಕ್ಕ ಅಚ್ಚರಿಯಿಂದ ನುಡಿದಳು. ಕಿರಿಯ ತಮ್ಮನ ಮುಖವನ್ನು ದಿಟ್ಟಿಸಿ ನೋಡಿದಳು. ತಮ್ಮನ ಮುಖದಲ್ಲಿ ಎಂತದೋ ಉದ್ವೇಗವಿದ್ದುದನ್ನು ಕಂಡಳು. ಎಷ್ಟು ಕಳೆಯಾಗಿದ್ದಾನೆ ಎಂದುಕೊಂಡಳು.

ಕಾಲೇಜಿನಲ್ಲಿ ಆಟದ ಮೈದಾನದಲ್ಲಿ ಸ್ನೇಹಿತರೊಂದಿಗೆ ಹರಟೆ ಕೊಚ್ಚುತ್ತಿದ್ದ. ಕ್ರಿಕೆಟ್ ಟೆಸ್ಟಿನ ಮಾತು ಬಂತು. ಇನ್ನೊಬ್ಬರಿಗೆ ಮಾತನಾಡಲು ಅವಕಾಶವನ್ನು ಕೊಡದೆ, ಯಾವುಯಾವುದೋ ಟೆಸ್ಟುಗಳ ವಿವರಗಳನ್ನು ನಿಂಗ ವರದಿ ಮಾಡಗೊಡಗಿದ. ಅಡೆತಡೆಯಿಲ್ಲದೆ ಬಡಬಡಿಸಿದ. 'ಚೂಟಿಯಾಗೇನೋ ಮಾತಾಡ್ತಿಪ್ಪ, ಮಾತಿಗೆ ಮಾತು ಪೋಣಿಸುತ್ತೀ. ಆದರೆ ಏನು ಹೇಳಬೇಕು ಅಂತಿದೆ, ಅದು ತಿಳಿಯವಲ್ಲದಲ್ಲಾ, ಕ್ರಿಕೆಟ್ ಆಟದಲ್ಲಿ ಧ್ಯಾನ್‌ಸಿಂಗ್ ಎಲ್ಲಿ ನುಸುಳಿಕೊಂಡು ಬಂದ ?' ಎಂದು ಜತೆಯಲ್ಲಿದ್ದವ ಹೇಳಿದ.

ಹಿಂದೆಂದೂ ನಿಂಗ ಹೀಗಾಡುತ್ತಿರಲಿಲ್ಲ. ಕಳೆದ ೪-೬ ವಾರಗಳಿಂದ ಅವನ ನಡವಳಿಕೆಯಲ್ಲಿ ವ್ಯತ್ಯಾಸವು ಎದ್ದು ಕಾಣುತ್ತಿತ್ತು. ಮುಖವು ಸದಾ ಹಿಂಡಿ ಕೊಂಡಂತೆಯೇ ಇರುತ್ತಿತ್ತು. ಹುಬ್ಬುಗಂಟಿಕ್ಕಿಕೊಂಡಿರುತ್ತಿತ್ತು. ಇತ್ತಿಂದೀಚೆಗೆ, ಕಾರಣವಿರಲಿ ಇಲ್ಲದಿರಲಿ, ಸಿಡುಕಲಾರಂಭಿಸಿದ್ದ. ಮಾತುಗಳ ಅವಸರವನ್ನು ನೋಡಿದರೆ, ಅವನ ತಲೆಯಲ್ಲಿ ಯೋಚನೆಗಳು ಅತಿ ರಭಸದಿಂದ ಮೂಡುತ್ತಿವೆ. ಅವಕ್ಕೆ ಶಬ್ದಗಳ ರೂಪು ಕೊಡಲು ಅವ ತುಂಬಾ ಆತುರ ಪಡುತ್ತಿದ್ದಾನೆ, ಎನಿಸುತ್ತಿತ್ತು. ಮಾತು ಮಾತಿಗೆ ಸಂಬಂಧವಿದ್ದಂತೆ ಕಂಡರೂ, ಒಟ್ಟು ಮಾತಿನ ಅರ್ಥವೇನು ಎಂಬುದು ಸ್ಪಷ್ಟವಾಗುತ್ತಿರಲಿಲ್ಲ. ತಾನಾಡುತ್ತಿರುವುದು ಇತರರಿಗೆ ಅರ್ಥವಾಗುತ್ತಿಲ್ಲ ಎನ್ನುವುದು ಅವನಿಗೆ ತಿಳಿದೇ ಇರಲಿಲ್ಲ. ಅಂದರೆ ವಾಸ್ತವಿಕ ಪರಿಸ್ಥಿತಿಯ ಅರಿವೇ ಅವನಿಗಿದ್ದಂತೆ ಕಾಣಿಸುತ್ತಿರಲಿಲ್ಲ. ಊಹಾಲೋಕದಲ್ಲೇ ವಿಹರಿಸುತ್ತಿದ್ದಂತೆ ಅನಿಸುತ್ತಿತ್ತು.

ವಾಸ್ತವಿಕ ಪರಿಸ್ಥಿತಿಯ ಅರಿವು ಮಾಯವಾಗಿ, ಮಾನಸಿಕ ವಿಕಲ್ಪವಾಗುವಾಗ, ಕಾಣಬರುವ ಚಿಹ್ನೆಗಳನ್ನು ನಿಂಗನ ನಡವಳಿಕೆಯು ಸ್ಪಷ್ಟವಾಗಿ ತೋರಿಸುತ್ತಿತ್ತು. ೧. ದೈನಂದಿನ ನಡವಳಿಕೆಯಲ್ಲಿ ತೀವ್ರ ಬದಲಾವಣೆಯಾಗುವುದು. ೨. ಮುಂಗೋಪ ಮತ್ತು ಸಿಡುಕು ಹೆಚ್ಚಾಗುವುದು. (Irritable.) ೩. ಬಾಲ್ಯದಿಂದಲೂ ರೂಢಿಸಿಕೊಂಡು ಬಂದ, ಮನಸ್ಸಿನ ಮೇಲಿನ ಹತೋಟಿಯು ಸಡಿಲಗೊಳ್ಳುವುದು: (Lack of Inhibition), ೪, ಅಲೆಅಲೆಯಾಗಿ ಚಿಮ್ಮುವ ಯೋಚನೆಗಳು, (Flight