೧೮೯
ofIdeas). ೫. ಉದ್ದೇಶವೇ ಇಲ್ಲದೆ, ಮಾತನಾಡುವುದು ; ಆಡಿದ್ದನ್ನೇ ಪುನಃ ಪುನಃ ಆಡುವುದು (Unproductive and Repetitive Talk).
ಈ ಚಿಹ್ನೆಗಳೆಲ್ಲವೂ 'ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಎನ್ನುವ ಬೇನೆಯ ಮೊದಮೊದಲ ಸೂಚನೆಗಳು, ಸೂಕ್ತ ಚಿಕಿತ್ಸೆಯನ್ನು ಈ ಹಂತದಲ್ಲಿ ನೀಡದಿದ್ದರೆ, ಬೇನೆಯು ಉಗ್ರವಾಗುತ್ತದೆ. Acute Mania ಉಂಟಾಗುತ್ತದೆ.
ಇಂತಹ ಸ್ಥಿತಿಯಲ್ಲಿರುವ ರೋಗಿಯನ್ನು ಹೆದರಿಸಿ ಬೆದರಿಸಿ ಬುದ್ಧಿ ಕಲಿಸುತ್ತೇವೆ ; ಶಿಕ್ಷೆಯನ್ನು ವಿಧಿಸಿ ಸರಿಪಡಿಸುತ್ತೇವೆ ; ದಂಡಂ ದಶಗುಣಂ ಭವೇತ್ ಅಲ್ಲವೇ ? ಎಂದು ಅಜ್ಞಾನದಿಂದ ಮನೆಯವರು ನಡೆದುಕೊಂಡರೆ, ರೋಗಿಯ ಮನಸ್ಸು ಮುದುರಿಕೊಂಡಂತಾಗಿ, ಮೊಂಡು ಹಾಕಿಕೊಳ್ಳುತ್ತದೆ.
ಹರಿದಾಡುತ್ತಿರುವ ಸಾವಿರಕಾಲನ್ನು ಒಂದು ಹಂಚಿಕಡ್ಡಿಯಿಂದ ತಟ್ಟಂತ ಚುಚ್ಚಿದರೆ, ಸುರುಳಿ ಸುತ್ತಿಕೊಂಡು ಬಿಡುತ್ತೆ, ಅದು. ಮುಂದಕ್ಕೂ ಹೋಗುವುದಿಲ್ಲ, ಹಿಂದಕ್ಕೂ ಬರುವುದಿಲ್ಲ. ಅಪಾಯವು ಒದಗಬಹುದು ಎನಿಸಿದಾಗ ಸ್ವಸಂರಕ್ಷಣೆಗೆ ಹಾಗದು ಸುರುಳಿ ಸುತ್ತಿಕೊಂಡು ಸತ್ತಂತೆ ಇದ್ದು ಬಿಡುತ್ತೆ.
ಮನಸ್ಪೂ ಹಾಗೆಯೇ, ಒಂದು ದೃಷ್ಟಿಯಲ್ಲಿ, ರೋಗಿಯ ಆಳಮನಸ್ಸಿನಲ್ಲಿ
ಭಯಂಕರವಾದ ವಿಪ್ಲವವು ಆಗುತ್ತಿರುತ್ತದೆ. ಬುದ್ಧಿಯ ಬುಡವನ್ನು ಅದು ಅಲ್ಲಾಡಿಸಿ
ಸಡಿಲಿಸುತ್ತಿರುತ್ತದೆ. ಯಾಕೆ ಹೀಗಾಗುತ್ತಿದೆ ಎನ್ನುವುದು ರೋಗಿಗೆ ತಿಳಿಯುವುದಿಲ್ಲ.
ಆದಕಾರಣ ಇದಕ್ಕೇನು ಮಾಡಬೇಕು ಎನ್ನುವುದು ತಿಳಿದಿರುವುದಿಲ್ಲ. ಆಳಮನಸ್ಸಿನ
ಭಾರೀ ವಿಪ್ಲವದಿಂದ ರೋಗಿಯು ತುಂಬಾ ಧೃತಿಗೆಟ್ಟಿರುತ್ತಾನೆ. ಅವನಿಗೆ ಆಗ
ನೆರೆಹೊರೆಯವರ, ಮನೆಯವರ, ಸಹಾನುಭೂತಿಯೂ, ಆದರದ ಅನುಕಂಪವೂ
ಅತ್ಯಗತ್ಯ. ಬದಲು ಬೈದು ಶಿಕ್ಷಿಸತೊಡಗಿದರೆ, ಚುಚ್ಚಲ್ಪಟ್ಟ ಸಾವಿರಕಾಲಿನಂತೆ,
ತೋರುಮನಸ್ಸು ಮುದುಡಿಕೊಳ್ಳುತ್ತದೆ. ಮುಂದೂ ಹೋಗಲಾರದು, ಹಿಂದಕ್ಕೂ
ಸರಿಯಲಾರದು. ಇದ್ದಲ್ಲೇ ಇದ್ದು, ತನ್ನಲ್ಲೇ ತಾನು ಎಂಬಂತಾಗಿ, ಹೊರಗಿರುವ
ಪರಿಸರವನ್ನು ಮರೆಯತೊಡಗುತ್ತದೆ. ವಾಸ್ತವಿಕತೆಯ ಅರಿವು ಆಗ
ನಾಶವಾದಂತೆಯೇ. ತನ್ನ ಊಹಾಲೋಕದಲ್ಲಿ, ಭ್ರಮಾ ಪ್ರಪಂಚದಲ್ಲಿ ತಾನೇ
ತಾನಾಗಿ ವಿಹರಿಸತೊಡಗುತ್ತಾನೆ. ಹೆಚ್ಚು ಬೆಪ್ಪು ಶಿವಲೀಲೆಗಳು ಹೀಗೆಯೇ
ಅವತರಿಸುವುದು.
ಮನ ಮಥನವಾಗುವಾಗ, ಮೊಸರು ಕಡೆದು ಬೆಣ್ಣೆಯನ್ನು ತೆಗೆಯುವ ಸಾಮತಿಯನ್ನು ಬಳಸಿದ್ದೆವು. ಒಬ್ಬೆಷನಲ್ ಬೇನೆಗಳಲ್ಲಿ, ಕಡೆಯುವ ಹಗ್ಗದ,