ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೦

ಮನಮಂಥನ

ಒಂದು ಕಡೆಯಲ್ಲಿ ಕೆಲವು ಎಳೆಗಳು ಕಿತ್ತುಹೋಗಿರುತ್ತವೆ ಎಂದೆವು. ಅದೇ ಸಾಮತಿಯನ್ನು ಬಳಸಿಕೊಂಡು, ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್‌ನಲ್ಲಿ, ಮೊಸರಿರುವ ಮಡಕೆಯೇ ಬಿರುಕು ಬಿಟ್ಟಿರುತ್ತದೆ ಎನ್ನಬಹುದು. ವಾಸ್ತವಿಕ ಪರಿಸ್ಥಿತಿಯ ಅರಿವು ಮನಸ್ಸಿನ ಮಡಕೆಯಿದ್ದಂತೆ. ಅದರಲ್ಲಿರುವ ಮೊಸರು ಎಂದರೆ ಆಜನ್ಮ ಬಳುವಳಿಯಾಗಿ ಬಂದ ಅನುಭವ ಮತ್ತು ಒತ್ತಡಗಳು ಈ ಜನ್ಮದಲ್ಲಿ ಕಲಿತುಕೊಂಡದು, ಮತ್ತು ಸ್ಮರಣೆಗಳು ; ಇದನ್ನು ಮಥಿಸಿ ನಿರ್ಣಯಗಳು ಎಂಬ ಬೆಣ್ಣೆಯನ್ನು ತೆಗೆಯಬೇಕು.

ಮಡಕೆಯು ಬಿರುಕು ಬಿಟ್ಟಿರುವಂತಹ ಭಯಂಕರ ಸ್ಥಿತಿಯಲ್ಲಿ, ಇಷ್ಟರು, ನೆಂಟರು, ಬೇಕಾದವರು ಎನಿಸಿಕೊಂಡವರು ಬೆದರಿಸಿದರೆ, ಶಿಕ್ಷೆಯನ್ನು ಹೂಡಿದರೆ ಅಂಜಿದವರ ಮೇಲೆ ಕಪ್ಪೆಯನ್ನು ಎಸೆದಂತಾಗುತ್ತದೆ.

ಮಡಕೆಯ ಬಿರುಕನ್ನು ಸುಫರ್ದು ಮಾಡಬೇಕಾದರೆ, ಸಹಾನುಭೂತಿ ಮತ್ತು ಅದರಗಳು ಅತ್ಯಗತ್ಯ. ಆದರವನ್ನು ಮನೆಯವರು ತೋರಿಸಬೇಕು ; ಪ್ರದರ್ಶಿಸಬೇಕು. ರೋಗಿಗೆ ಇದು ತಿಳಿಯಿತು, ತಕ್ಕ ಪ್ರತಿಕ್ರಿಯೆಯನ್ನು ಅವ ತತ್‌ಕ್ಷಣ ಹೂಡಲೇಬೇಕು ಎಂದು ಆಸೆ ಪಡಬಾರದು. ತನ್ನವರ ಆದರದ ಪ್ರದರ್ಶನವು ರೋಗಿಯ ಮೇಲೆ ಪರಿಣಾಮವನ್ನು ಕಿಂಚಿತ್ತಾದರೂ ಬೀರಿಯೇ ಬೀರುತ್ತದೆ. ಆದರೆ ಬಿರುಕು ಸರಿಹೋಗಲು ಕಾಲಾವಧಿಯು ಬೇಕು. ತಾಳ್ಮೆಯು ಅತ್ಯಗತ್ಯ. ಹೀಗನ್ನುವುದು ವೈದ್ಯರಿಗೆ ಸುಲಭ, ರೋಗಿಯ ಮನೆಯವರು ತುಂಬಾ ಕಾತರರಾಗಿರುತ್ತಾರೆ. ರೋಗಿಯ ನಡವಳಿಕೆಯಿಂದಾಗಿ, ಬೇಸರವೂ ಬಂದಿರುತ್ತದೆ. ಬಹು ಪಾಲು ಅವರುಗಳ ನಿದ್ರೆ ಮತ್ತು ಆಹಾರಗಳಲ್ಲಿ ಖೋತಾ ಆಗಿರುತ್ತದೆ. ಅಂತಹವರಿಗೆ ತಾಳ್ಮೆಯನ್ನು ವಹಿಸುವುದು ಸುಲಭವಲ್ಲ. ಎಷ್ಟೇ ಒಲವಿನ ಮಗನಾದರೂ, ಹೀಗಿರುವ ಬದಲು ಸತ್ತರೆ ಚೆನ್ನ ಎಂದು ಉದ್ವೇಗದಿಂದ ಅನ್ನುವಂತಾಗುತ್ತದೆ. ಆದರೆ ಕೆಲವು ತಿಂಗಳುಗಳಲ್ಲಿ ಖಂಡಿತವಾಗಿಯೂ ಗುಣವಾಗುತ್ತದೆ ಎಂಬುವುದು ತಿಳಿದಿದ್ದರೆ, ಆಗ ತಾಳ್ಮೆಯನ್ನು ವಹಿಸಿ, ಸಹಾನುಭೂತಿಯನ್ನು ಮತ್ತು ಆದರವನ್ನೂ ಪ್ರದರ್ಶಿಸಲು ಸುಲಭವಾಗುತ್ತದೆ.

ಆದಕಾರಣ, ಸಮಾಜದಲ್ಲಿ ಈ ತೆರನ ಜ್ಞಾನ ಪ್ರಚಾರವು ಅತ್ಯಂತ ಅವಶ್ಯಕ.

ಕುಮುದಳ ಡಿಪ್ರೆಷನ್‌

ಇಪ್ಪತ್ತಾರು ವರ್ಷಗಳಾಗಿತ್ತು ಕುಮುದಳಿಗೆ. ಆರೇಳು ವರ್ಷಗಳ ಹಿಂದೆಯೇ ಅವಳ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದರು. 'ಬಿ. ಎ. ಅಂತ ಅನ್ನಿಸಿಕೊಂಡರೆ ಎಂ.ಎ.