೧೯೩
ಮಾತನಾಡಿಸಿದರೆ ಒಮ್ಮೆ ಉತ್ತರಿಸುವುದು ; ಮುಖವನ್ನೆತ್ತಿ ನೋಡುವುದನಕ ಮರೆತೇಹೋಗಿತ್ತು. ಬಗ್ಗಿಸಿದ ತಲೆಯನ್ನು ಎತ್ತುತ್ತಲಿರಲಿಲ್ಲ.
ಕೆಲವು ವಾರಗಳೂ ಎದ್ದರೆ ನಿಂತರೆ ಏನಾಕರಣ ಬುಳುಬುಳು ಅಳುವುದಕ್ಕೆ ತೊಡಗಿದಳು. “ಯಾಕಮ್ಮಾ ಆಸ್ತಿ' ಎಂದು ಕೇಳುವುದಕ್ಕೆ ಅಮ್ಮನಿಗೆ ಭಯ. ಇನ್ನು ಯಾವ ತರಹ ಕೆರಳುತ್ತಾಳೋ ಎಂದು. ಊಟವನ್ನು ಮಾಡುತ್ತಿದ್ದಳು ; ಆದರೆ ಇದು ಇನ್ನಷ್ಟು ಬೇಕು ಎಂದು ಕೇಳುತ್ತಿರಲಿಲ್ಲ.
ಕಡೆಗೊಮ್ಮೆ ಕಂಕಣಬಲ ಕೂಡಿಬಂತು. ಕುಮುದಳನ್ನು ನೋಡಲು ಬಂದ ಗಂಡಿಗೆ ಮೂವತ್ತಾರು ಮುಗಿದಿತ್ತು. ಅವನೂ ಒಪ್ಪಿಕೊಂಡ. ಮದುವೆಯೂ ಆಯಿತು. ಯಥಾಪ್ರಕಾರದ ಅತ್ತೆ. ಸೌಭಾಗ್ಯವನ್ನು ಬೇಗ ಕಳೆದುಕೊಂಡು ತೌರಿಗೆ ವಾಪಸಾದ ಅತ್ತಿಗೆಯೊಬ್ಬಳು. ಇವರಿಬ್ಬರೇ ಮನೆಯ ಮಿಕ್ಕ ಮಂದಿ. ಅತ್ತೆಯ ಮನೆಯಲ್ಲಿ ಕುಮುದ ಮೂಗಿಯಂತೆಯೇ ಇದ್ದಳು. ಗಾದೆ ಹೇಳಿದಂತೆ ಮೂಗಿ ಬಸಿರಾದಳು. ಒಂಭತ್ತು ತಿಂಗಳು ಮುಗಿದ ಮೇಲೆ, ಹೆಚ್ಚು ತ್ರಾಸಿಲ್ಲದೆ ಹೆತ್ತಳು. ಹೆರಿಗೆಗಾಗಲೀ ಬಾಣಂತನಕ್ಕಾಗಲೀ ತೌರಿಗೆ ಹೋಗಲು ಅವಳು ಒಪ್ಪಲಿಲ್ಲ. ಗಂಡನಿಗೂ ಕಳಿಸಿಕೊಡಲು ಇಷ್ಟವಿರಲಿಲ್ಲ. ಹತ್ತು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದುಕೊಂಡು ಮನೆಗೆ ಗಂಡುಮಗುವಿನೊಡನೆ ಹಿಂತಿರುಗಿದಳು. ಮನೆಗೆ ಬಂದನಂತರ ಬಾಣಂತಿಯ ವರ್ತನೆಯು ವಿಚಿತ್ರವಾಯಿತು. ಇದ್ದಕ್ಕಿದ್ದ ಹಾಗೆ ನಗುವುದು ; ಒಮ್ಮೊಮ್ಮೆ ಅಳುವುದು ; ಕೆಲವೊಮ್ಮೆ ಅಳುತ್ತಿದ್ದ ಮಗುವನ್ನು ದಿಟ್ಟಿಸಿ ನೋಡುತ್ತಿದ್ದಳೇ ವಿನಾ, ತೊಟ್ಟಿಲಿನಿಂದ ಎತ್ತಿಕೊಂಡು ಆಡಿಸುತ್ತಿರಲಿಲ್ಲ, ಅಥವಾ ನಂಬಿಸುತ್ತಲೂ ಇರಲಿಲ್ಲ.
'ಇವಳೀಗೆಲ್ಲೋ ಬಾಣಂತಿ ಸನ್ನಿ ಬಡಿದಿದೆ ಕಣೋ, ಇವಳ ಹತ್ತಿರ ಮಗುವನ್ನು ಬಿಡುವುದು ಒಳ್ಳೆಯದಲ್ಲ. ಇದಕ್ಕೆ ಔಷಧಿಯನ್ನು ಪಟ್ಟಾಗಿ ಕೊಡಿಸೋ' ಎಂದು ಮಗನಿಗೆ ತಾಯಿ ಹೇಳಲಾರಂಭಿಸಿದಳು. ವೈದ್ಯರ ಬಳಿಗೆ ಹೋಗಿ ಮಗ ವಿಚಾರಿಸಿಕೊಂಡು ಬಂದ. ಮಾನಸಿಕ ಆಸ್ಪತ್ರೆಯಲ್ಲಿ ಕೆಲವು ದಿನ ಇರುವುದು ಒಳ್ಳೆಯದು ಎಂದು ಹೇಳಿದರು. ಆದರೆ ಆಸ್ಪತ್ರೆಗೆ ಹೋಗುವುದಕ್ಕೆ ಕುಮುದ ಒಪ್ಪಲಿಲ್ಲ.
ಒಂದು ಬೆಳಿಗ್ಗೆ ಹಾಲನ್ನು ಕೊಡಲು ಬಾಣಂತಿಯ ಬಳಿಗೆ ಅತ್ತಿಗೆ ಹೋದಳು. 'ಕುಡಿಯಮ್ಮಾ ಕುಮುದ ಬಿಸಿಯಾಗಿದೆ' ಎಂದು ಹೇಳಿ ಬಟ್ಟಲನ್ನು ನೀಡಿದಳು. ಬಟ್ಟಲನ್ನು ಕುಮುದ ಇಸುಕೊಂಡಳು. ಅತ್ತಿಗೆಯನ್ನು ದುರುದುರ ನೋಡತೊಡಗಿದಳು. ಏನು ಬಂತೋ ಆವೇಶ ! ಅತ್ತಿಗೆಯ ಎದೆಯತ್ತ ಹಾಲಿನ