ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೯೮

ಮನಮಂಥನ

ತಿಳಿದುಕೊಂಡಿದ್ದರೆ ? ಎಂದು ಉದ್ಗಾರ ತೆಗೆದಳು.

ಎಲ್ಲದಕ್ಕೂ ಕಾಲ ಬರಬೇಕಲ್ಲ ಎಂದು ವೇದಾಂತವನ್ನೂ ಡಾಕ್ಟರಿಗೆ ಬೋಧಿಸಿದಳು, ವಂದಿಸಿ ಹೋಗುವ ಮುನ್ನ

ಮಧ್ಯ ವಯಸ್ಸಿನಲ್ಲಿ ಬರುವ ಲಘು ಡಿಪ್ರೆಷನ್ನಿಗೆ ಚಿಕಿತ್ಸೆಯು ಅತ್ಯಂತ ಫಲದಾಯಕವಾಗುತ್ತದೆ, ಎನ್ನುವುದು ಭಾಮಾಳ ಉದಾಹರಣೆಯಿಂದ ಎಲ್ಲರಿಗೂ ಸ್ಪಷ್ಟವಾಗಬೇಕು.

ಮಂದ ಬುದ್ಧಿಯ ಮಾಚಯ್ಯ ಮೂವತ್ತರ ಪ್ರಾಯದ ಮಾಚಯ್ಯ ಇನ್ನೂ ಒಂಟಿಯಾಗಿಯೇ ಇದ್ದ. ತಂಗಿಯ ಮದುವೆಯಾದ ಮೇಲೆ ತಾನು ಮದುವೆಯಾಗಬೇಕೆಂಬ ಇಚ್ಛೆ ತಂದೆಗೆ ಲಕ್ವಾ ಬಡಿದು ಮೂಲೆ ಹಿಡಿಯುವಂತಾದರೆ, ತಂಗಿಯ ಮದುವೆಯ ಜವಾಬ್ದಾರಿಯು ದೊಡ್ಡ ಮಗನದೇ, ಕಂಪನಿಯೊಂದರಲ್ಲಿ ಐದು ಆರು ನೂರು ಸಂಬಳ ಬರುವ ಚಾಕರಿಯಲ್ಲಿದ್ದ. ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ ಸುಖವಾಗಿ ಉಂಡು ತಿಂದು ಇರಲು ಬೇಕಾದಷ್ಟಿತ್ತು. ಮದುವೆ, ಇತ್ಯಾದಿ ವಿಶೇಷ ಖರ್ಚಿಗೆ ಅಪ್ಪನ ಆಸ್ತಿಯು ನೆರವಾಗುತ್ತಿತ್ತು.

ಕಂಪನಿಯ ಕೆಲಸದ ಮೇಲೆ ಒಂದೆರಡು ವರ್ಷಗಳು ಅವ ಮಲೆನಾಡಿನ ಗ್ರಾಮ ಒಂದರಲ್ಲಿ ಇರಬೇಕಾಯಿತು. ಸಹೃದಯ ಸ್ನೇಹಿತರು ಅಲ್ಲಿ ಸಿಗಲಿಲ್ಲ. ಅಲ್ಲಿ ವಾಸಿಸುತ್ತಿದ್ದವರೊಂದಿಗೆ ಇವ ಜತೆಯಾಗಲು ಮನಸ್ಸಾಗಲಿಲ್ಲ. ಕಾರಣ, ಏಕಾಂಗಿಯಾಗಿಯೇ ಇರಬೇಕಾಯಿತು. ಸಂಜೆಯ ವೇಳೆಗೆ ತುಂಬಾ ಬೇಜಾರು ಬರುತ್ತಿತ್ತು. ಬೆಳಿಗ್ಗೆ ಹಗಲು, ಗ್ರಾಮಗಳಲ್ಲಿ ಸುತ್ತಬೇಕಾಗಿದ್ದುದರಿಂದ, ಕೆಲಸದ ಒತ್ತಡವೂ ಇರುತ್ತಿದ್ದುದರಿಂದ, ಹೇಗೋ ಕಾಲ ಸರಿದುಹೋಗುತ್ತಿತ್ತು. ಆದರೆ ಮುಸಾಫರಖಾನೆಗೆ ಸಂಜೆ ವೇಳೆಗೆ ಬಂದಾಗ ತುಂಬಾ ಬೇಜಾರಾಗುತ್ತಿತ್ತು ಎಂದು ಹೇಳಿದ.

ಷಹರಿನ ಕೇಂದ್ರ ಕಚೇರಿಯಲ್ಲಿ ಈಗ ಎರಡು ವರ್ಷಗಳಿಂದಲೂ ಕೆಲಸವನ್ನು ಮಾಡುತ್ತಿದ್ದಾನೆ. ಮಲೆನಾಡಿನಲ್ಲಿ ಅನುಭವಿಸುತ್ತಿದ್ದ ಬೇಸರವು ಷಹರಿನಲ್ಲಿ ನ್ಯಾಯವಾಗಿ ಮಾಯವಾಗಬೇಕು. ಆದರೆ ಹಾಗಾಗಲಿಲ್ಲ, ತಿಂಗಳಿಗೊಂದೆರಡು ಸಿನಿಮಾ ನೋಡಿದರೆ ಸಾಕಪ್ಪಾ ಎನಿಸುತ್ತಿತ್ತು. ಸ್ವಭಾವತಃ ಏಕಾಂತಪ್ರಿಯ, ಹಾಗಾಗಿ ಗಾಢಮೈತ್ರಿ ಇದ್ದ ಸ್ನೇಹಿತರು ಇಬ್ಬರೊ ಮೂವರೊ; ಅವರೂ ಅವರವರ ವ್ಯಾಪಾರ ವ್ಯವಹಾರಗಳಲ್ಲಿ ನಿರತರಾಗಿದ್ದುದರಿಂದ ಮಾಚಯ್ಯನ ವಿರಾಮದ