ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ವಾಸ್ತವಿಕತೆಯ ಅರಿವು ಮಾಯವಾದ ಬೇನೆಗಳು

೧೯೯

ವೇಳೆಗೆ ಅವರು ಸಿಗುತ್ತಿರಲಿಲ್ಲ.

ಕಳೆದ ಒಂದು ವರ್ಷದಿಂದ ಮಾಚಯ್ಯನಿಗೆ ಸ್ವಸಾಮರ್ಥ್ಯದಲ್ಲಿ ತುಂಬಾ ಅಪನಂಬಿಕೆಯುಂಟಾಗುತ್ತ ಬಂದಿತು. ಮನಸ್ಸಿನ ಮೇಲೆ ಹತೋಟಿಯು ತಪ್ಪುತ್ತಿದೆಯೇನೋ ಎಂದು ಭಯವಾಗತೊಡಗಿತು. ಬುದ್ಧಿಯು ಮಂದವಾಗುತ್ತಿದೆಯೋ ಎನ್ನುವ ಶಂಕೆಯು ಬಲವಾಗತೊಡಗಿತು.

ಕಚೇರಿಯಲ್ಲಿದ್ದ ನಾಲ್ಕು ಜನ ವಾರಿಗೆ ಅಧಿಕಾರಿಗಳನ್ನು, ಸಾಹೇಬರು ಕರೆಸಿ 'ನಿಮ್ಮ ನಿಮ್ಮ ಶಾಖೆಯಲ್ಲಿ ಈ ರೀತಿ ಕೆಲಸ ಮಾಡಿಸಬೇಕು. ಇಷ್ಟು ಪ್ರಗತಿಯನ್ನು ತೋರಿಸಬೇಕು' ಎಂದು ಹೇಳುವರು. ನಂತರ ಕೆಲವು ಪ್ರಶ್ನೆಗಳನ್ನು ಕೇಳುವರು. ವಾರಿಗೆ ಅಧಿಕಾರಿಗಳು ಚೂಟಿಯ ಮತ್ತು ಸಮಂಜಸವಾದ ಉತ್ತರವನ್ನು ಕೊಡುತ್ತಿದ್ದರು. ಆದರೆ ಈಚೀಚೆಗೆ ಮಾಚಯ್ಯನಿಗೆ ಸಾಹೇಬರು ಹೇಳಿದುದು ಅರ್ಥವಾಗುತ್ತಿರಲಿಲ್ಲ. ಮೊದಲಿನಿಂದಲೂ ಅವನಿಗೆ ತಿಳಿದಿದ್ದ ವಿಷಯವನ್ನೇ ಸಾಹೇಬರು ಹೇಳುತ್ತಿದ್ದುದು. ಮೊದಮೊದಲು ಮಾಚಯ್ಯನೂ ಬಲು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಿದ್ದ. ಆದರೆ ಈಗ ಅರ್ಥವಾಗುತ್ತಿರಲಿಲ್ಲ. ಕಿವಿಗೊಟ್ಟು, ಕಷ್ಟಪಟ್ಟುಕೊಂಡು, ಹೇಳಿದುದನ್ನು ಕೇಳಿಸಿಕೊಂಡರೂ, ತಲೆಯೇ ಓಡುತ್ತಿರಲಿಲ್ಲ, ಅರ್ಥವಾಗುತ್ತಿರಲಿಲ್ಲ. 'ಇನ್ನೂ ತಿಳಿಯುವುದಿಲ್ಲವೇ, ಮಾಚಯ್ಯ' ಎಂದು ಸಾಹೇಬರು ಕೆಲವು ಬಾರಿ ರೇಗಿ ಬೈದದ್ದೂ ಉಂಟು. ಹೀಗಾದಾಗಲೆಲ್ಲ ಮಾಚಯ್ಯನ ಖಿನ್ನತೆಯು ಹೆಚ್ಚಾಗುತ್ತಿತ್ತು. ಆತ್ಮವಿಶ್ವಾಸವು ಕರಗಿ ಹೋಗುತ್ತಿತ್ತು.

ಕಚೇರಿಯದೇ ಆಗಲಿ, ಸ್ನೇಹಿತರಿಗೇ ಆಗಲಿ, ಕಾಗದವನ್ನು ಬರೆಯಕೂತರೆ, ಯೋಚನೆಗಳೇನೋ ಸರಸರ ಅಂತ ಬರುತ್ತಿದ್ದುವು. ಆದರೆ ಅವನ್ನು ಕಾಗದದ ಮೇಲೆ ಇಳಿಸುವ ಮೊದಲೇ, ಒಂದು ಯೋಚನೆಯು ಮಾಯವಾಗಿ ಇನ್ನೊಂದು ಮೂಡುತ್ತಿತ್ತು. ಅದನ್ನು ಬರೆಯ ಹೋದರೆ ಅದರ ಪಾಡೂ ಹಾಗೆಯೇ. ನಾಲೈದು ನಿಮಿಷಗಳಲ್ಲಿ ಬರೆದು ಮುಗಿಸುತ್ತಿದ್ದ ಕಾಗದಕ್ಕೆ ಈಗ ಅವ ೧೫- ೨೦ ನಿಮಿಷಗಳನ್ನುತೆಗೆದುಕೊಳ್ಳುತ್ತಿದ್ದ. ಕಾಗದವನ್ನು ಮುಗಿಸಿ, ಲಕ್ಕೋಟೆಯಲ್ಲಿಟ್ಟು ಅಂಟಿಸಿ, ಸ್ಟಾಂಪು ಹಚ್ಚಿ, ಅಂಚೆಗೆ ಹಾಕಿ ಬಂದಮೇಲೆ, ಅಗತ್ಯವಾಗಿದ್ದ ಮೂರು ನಾಲ್ಕು ವಿಷಯಗಳನ್ನು ಬರೆಯಲೇ ಇಲ್ಲವಲ್ಲಾ ಎಂದು ಜ್ಞಾಪಿಸಿಕೊಂಡು, ಮರುಗುತ್ತಿದ್ದ.

ದಿಳ್ಳಿಗೆ ಜರೂರಾಗಿ ಕಳುಹಿಸಬೇಕಾದ ಕೆಲವು ಕಾಗದ ಪತ್ರಗಳನ್ನು, ಮಾಚಯ್ಯನ ವಶಕ್ಕೆ ಸಾಹೇಬರು ಕೊಟ್ಟರು. ಇವುಗಳ ಪ್ರತಿಯನ್ನು ತೆಗೆದಿಟ್ಟುಕೊಂಡು, ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ರಿಜಿಸ್ಟರ್ಡ್ ಪೋಸ್ಟ್