ಈ ಪುಟವನ್ನು ಪ್ರಕಟಿಸಲಾಗಿದೆ
೨೦೨
ಮನಮಂಥನ
ಡಿಪ್ರೆಷನ್ ಅವಸ್ಥೆಯಲ್ಲಿ ಚಿಹ್ನೆಗಳು ಘೋರವಾಗಿ ಕಂಡರೂ, ಬಲು ಬೇಗ ಸೂಕ್ತ ಚಿಕಿತ್ಸೆಯಿಂದ ಗುಣವಾಗುತ್ತದೆ ಎಂಬುದು ತಿಳಿದಿದ್ದರೆ, ಇವೆಲ್ಲಾ ಲಘು ಡಿಪ್ರೆಷನ್‌ನಲ್ಲಿ ಕಾಣಬರುತ್ತವೆ ಎಂದು ತಿಳಿದಿದ್ದರೆ, ಭವಿಷ್ಯದ ಭಯವೂ ಕಡಿಮೆಯಾಗುತ್ತದೆ. ಆತಂಕವು ಕರಗುತ್ತದೆ. ಡಿಪ್ರೆಷನ್ನಿನ ನಿರುತ್ಸಾಹವೂ ಹೋಗಿ,ಉತ್ಸಾಹವು ಬಲುಬೇಗ ಮೂಡುವಂತಾಗುತ್ತದೆ.