ಮನಮಂಥನ ಅವಸರ ಸ್ವಭಾವದ ಗಂಡ 'ನಿನ್ನ ಜಾಯಮಾನವನ್ನು ಕಂಡಿಲ್ಲವೇನೇ ? ಮೇಲಿಂದ ಮೇಲೆ ಹೀಗೆ ಹುಷಾರ್ ಕೊಡದೆ ಹೋದರೆ, ಹತ್ತು ಗಂಟೆ ಬಡಿದ ಮೇಲೆ ಸಾರಿಗೆ ಒಗ್ಗರಣೆ ಹಾಕುತ್ತೀ. ಹೊತ್ತು ಗೊತ್ತು ಅಂತ ಏನಾದರೂ ಲೆಕ್ಕ ಇದೆಯೇ ನಿನಗೆ!' ಅಂತ ಹೆಂಡತಿಯನ್ನು ಮರುಛುಡಾಯಿಸುತ್ತಾನೆ. ಇದೂ ದಿಟವೇ. ಸ್ವಲ್ಪ ಆತಂಕಹತ್ತುವಂತೆ, ಮನಸ್ಸನ್ನು ಕೆರಳಿಸಿದರೆ ಆಗ ಹಿಡಿದ ಕೆಲಸವನ್ನು ಬೇಗ ಮಾಡಲು ಅನುಕೂಲವಾಗುತ್ತದೆ. ಇವೆರಡೂ ಟೀಕೆಗಳು, ಪರಸ್ಪರ ವಿರುದ್ಧವಾಗಿ ಕಂಡರೂ, ನಿಜವೇ. ಆತಂಕದಿಂದ ಕೆಲಸ ಕೆಡುತ್ತದೆ, ಎಂದು ಹೆಂಡತಿ ಅಂದರೆ, ಅದರಿಂದಲೇ ಅಡಿಗೆಯನ್ನು ಬೇಗ ಮಾಡಬಹುದು ಎಂದ ಗಂಡ ಅನ್ನುತ್ತಾನೆ. ಇದು ಹೇಗಾಯಿತು? ಆತಂಕವು ಅಲ್ಪ ಪ್ರಮಾಣದ್ದಾದರೆ ಮಾಡಬೇಕಾದ ಕೆಲಸಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಆದರೆ ಆತಂಕವು ಒಂದು ಮಿತಿಯನ್ನು ಮೀರಿದರೆ, ಆಗ ಕೆಲಸಕ್ಕೆ ಅಡಚಣೆಯೂ ಆಗುತ್ತದೆ, ವಿಳಂಬವೂ ಆಗುತ್ತದೆ, ಕೆಟ್ಟ ಹೋಗಬಹುದು. ನಾಗರಿಕತೆಯು ಹರಡಿದ ಮೇಲೆ ಆತಂಕವು ಈ ರೀತಿ ಮನುಷ್ಯರನ್ನು ಕಾಡುತ್ತದೆಯೇ ? ಅಥವಾ ಆದಿಮಾನವನ ಕಾಲದಿಂದಲೂ ಈ ಪರಿಸ್ಥಿತಿಯು ಕಾಣಿಸಿ ಕೊಂಡಿದೆಯೇ? ಅರಣ್ಯಗಳಲ್ಲಿ ವನ್ಯಮೃಗಗಳ ಜತೆಗೆ ಸಹವಾಸವನ್ನು ಮಾಡಿಕೊಂಡಿದ್ದ ಆದಿಮಾನವನಿಗೆ, ಕಚೇರಿಗೆ ಇಷ್ಟು ಹೊತ್ತಿಗೆ ಹೋಗಬೇಕು, ಆ ವೇಳೆಗೆ ಅಡಿಗೆ ಸಿದ್ಧವಾಗಿರಬೇಕು ಎನ್ನುವ ಯಾವ ಕಟ್ಟುನಿಟ್ಟುಗಳೂ ಇರಲಿಲ್ಲ. ಹಸಿವಾದಾಗ ಬೇಟೆಗೆ ಹೋಗುವುದು, ಸಿಕ್ಕಿದ್ದನ್ನು ದಕ್ಕಿಸಿಕೊಳ್ಳುವುದು; ನಾಳೆಗೆ ಎಂದು ಕೂಡಿಡುವ ಚಿಂತೆಯಿಲ್ಲ. ಕಾಲದ ಎಣಿಕೆಯ ಕಟ್ಟುಪಾಡುಗಳಿರದೆ ಇದ್ದ ಆದಿ ಮಾನವನಿಗೆ ಆತಂಕವು ಇರುತ್ತಿತ್ತೇ? ಅಗತ್ಯವಾಗಿತ್ತೆ? ಯೋಚಿಸೋಣ. ಹೊಟ್ಟೆಯು ಚುರುಚುರು ಎಂದಾಗ ಆದಿಮಾನವನು ಬೇಟೆಗೆ ಹೋದ ಎನ್ನಿ, ಇನ್ನೇನು ಮೊಲವೊಂದನ್ನು ಪೊದೆಯಲ್ಲಿ ಹಿಡಿಯಬೇಕು ! ಆಗ ಪೊದೆಯಿಂದ ಘಟಸರ್ಪವು ಬುಸುಗುಟ್ಟಿತು ಎನ್ನಿ. ಆಗ ಆದಿಮಾನವ ಬೆದರಿ ಹಿಂದೋಡುತ್ತಾನೆ. ಬಾಯಿಗೆ ಬರಬಹುದಾಗಿದ್ದ ತುತ್ತು ಕೈಗೇ ಬರಲಿಲ್ಲ ! ಅನಿರೀಕ್ಷಿತವಾದ ಘಟ ಸರ್ಪದಿಂದ ಅವನಿಗೆ ಮೊದಲು ಉಂಟಾದುದು, ಭಯ. ಭಯವುಂಟಾದ ಮೇಲೆ ಅದರ ಹಿಂದೆಯೇ ಕಾತರ ಅಥವಾ ಆತಂಕವೂ ನೆರಳಿನಂತೆ ಹಿಂಬಾಲಿಸುತ್ತದೆ. ಆನಂತರ ಆತಂಕವು ಮನಸ್ಸನ್ನು 'ಮುಂಜಾಗ್ರತೆಯನ್ನು ತೆಗೆದುಕೋ' ಎನ್ನುವಂತೆ ಪ್ರೇರೇಪಿಸುತ್ತದೆ. ಮತ್ತೊಂದು ಸಲ ಅವನು
ಪುಟ:ಮನಮಂಥನ.pdf/೨೩
ಗೋಚರ