೨೧೫
ಪೂಜೆ ಹಾಕಿಸಿದ ನಂತರ ಅದು ಬಿಟ್ಟುಹೋಯಿತು. ಅದಾದ ಎರಡು ವರ್ಷಗಳಾದ ಮೇಲೆ, ಮತ್ತೊಂದು ಸರ್ತಿ ಬಸಿರಾಗಿ ಮೈ ಇಳಿದ ಮೇಲೆ, ಆಸ್ಪತ್ರೆಗೆ ಹೋಗುವುದು ಅನಿವಾರ್ಯವಾಯಿತು. ಮಾನ ಮಯ್ಯಾದೆಯ ಮೇಲೆ ಗಮನವಿರಲಿಲ್ಲವಾದ ಕಾರಣ, ಆಸ್ಪತ್ರೆಗೆ ಸೇರಿಸಲೇಬೇಕಾಯಿತು. ಈಗ ಸ್ವಸ್ಥವಾಗಿದ್ದಾಳೆ. ಆದರೆ ಮನೆಯ ಯಾವ ಹೊಣೆಯೂ ಅವಳ ಮೇಲಿಲ್ಲ. ಸಾವಂದಪ್ಪನ ದೊಡ್ಡ ಅಕ್ಕ ಸಂಸಾರದ ಎಲ್ಲಾ ಹೊಣೆಯನ್ನೂ ಹೊತ್ತಿದ್ದಾಳೆ.
ಸಕ್ಕೂಬಾಯಿಗೆ ದೊಡ್ಡ ಅಣ್ಣ ಒಬ್ಬನಿದ್ದಾನೆ. ಮೂರು ವರ್ಷ ದೊಡ್ಡವನು. ಅವನೂ ಶಾಲೆಗೆ ಹೋಗುತ್ತಾನೆ. ಸಕ್ಕೂಬಾಯಿಯ ಕ್ಲಾಸಿನಲ್ಲೇ ಓದುತ್ತಿದ್ದಾನೆ. ಮನೆಪಾಠವನ್ನು ಇಡಿಸಿದ್ದಾರೆ. ಆದರೆ ತಂದೆಯು ಹೇಳಿದಂತೆ 'ಅವನಿಗೆ ಪಾಠ ಹಿಡಿಸುಲ್ಲ ಅಂತ ಕಾಣುತ್ತೆ' ಇತರ ಕೆಲಸಗಳನ್ನು ಹೇಳಿದರೆ, ಸರಿಯಾಗಿ ಮಾಡುತ್ತಾನೆ. ಅಂದರೆ ಅಂಗಡಿಗೆ ಹೋಗಿ ಬೆಂಕಿಪೊಟ್ಟಣವನ್ನು ತಾ ಅಂದರೆ ತರುತ್ತಾನೆ. ಅಂಚೆ ಕಚೇರಿಗೆ ಹೋಗಿ ಕವರ್ ತಾ ಎಂದರೆ ತರುತ್ತಾನೆ. ಸಿನಿಮಾಕ್ಕೂ ಒಬ್ಬನೇ ಹೋಗಿ ಬರುತ್ತಾನೆ. ಊಟ ತಿಂಡಿಗಳನ್ನು ಹಾಕಿದಾಗ ತಿನ್ನುತ್ತಾನೆ. ಯಾವ ಗಲಾಟೆಯನ್ನೂ ಮಾಡುವುದಿಲ್ಲ. ತುಂಬಾ ಒಳ್ಳೆಯ ಹುಡುಗ, ಯಾವ ಕೆಟ್ಟ ಅಭ್ಯಾಸವೂ ಇಲ್ಲ. ಅಷ್ಟಾಗಿ ಸ್ನೇಹಿತರೂ ಹೆಚ್ಚಿಲ್ಲ.
ಮನೆಯ ಈ ವಿವರಗಳನ್ನು ಕೇಳಿದ ಮೇಲೆ, ಕೆಟಟೋನಿಕ್ ಪೊನಿಯಾ ಸಕ್ಯೂಬಾಯಿಗೆ ಆಗಿದೆ ಎನ್ನಲು ಅಭ್ಯಂತರವೇ ಇರಲಿಲ್ಲ.
ತಾಯಿಯನ್ನು ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದರು. ಅಂದರೆ ಸಾವಂದಪ್ಪನಿಗೆ ಈ ಬೇನೆಯ ಸ್ವರೂಪವು ತಿಳಿದಿದ್ದಿರಬೇಕು. ಮಕ್ಕಳಲ್ಲಿ ಮಂದ ಬುದ್ಧಿ, ವಿಚಿತ್ರವರ್ತನೆ, ಇವುಗಳನ್ನು ಕಂಡಾಗ, ಮಾನಸಿಕ ಆಸ್ಪತ್ರೆಗೆ ಮೊದಲೇ ಏಕೆ ಕರೆದುಕೊಂಡು ಹೋಗಲಿಲ್ಲ ?
ಸಾವಂದಪ್ಪನೊಬ್ಬನನ್ನೇ ನಂತರ ಬರಹೇಳಿ, 'ಮಕ್ಕಳನ್ನು ಮನೋವೈದ್ಯರಿಗೆ ಯಾಕೆ ತೋರಿಸಲಿಲ್ಲವಪ್ಪಾ ? ಈ ಅನುಮಾನವು ನಿನಗೂ ಬಂದಿರಬೇಕು' ಎಂದು ಕೇಳಿದೆ.
'ನನ್ನ ಹೆಂಡತಿಗೆ ಎರಡು ಮೂರು ವರ್ಷಗಳು ಚಿಕಿತ್ಸೆ ನಡೆಸಿದೆ, ಡಾಕ್ಟರೇ! ಈಗೆಷ್ಟೋ ಗುಣ ಹೊಂದಿದ್ದಾಳೆ. ಆದರೆ ಮಂಕು ಬಡಿದಂತೆ ಇರುತ್ತಾಳೆ, ಕೆಲವೊಮ್ಮೆ, ಮತ್ತೆ ಕೆಲವು ದಿನಗಳು ಸ್ವಲ್ಪ ವಾಸಿ, ಯಾವುದಾದರೂ ಮನೆ ಕೆಲಸವನ್ನು ಹೇಳಿದರೆ ಮಾಡುತ್ತಾಳೆ. ಆದರೆ ನಿಜಮನುಷ್ಯರಂತೆ ಎಂದೂ ಆಡಿಲ್ಲ. ನುಡಿದಿಲ್ಲ. ಅಂದ ಮೇಲೆ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡುಹೋಗಲು