ಮನಮಂಥನ
ಮದುವೆಯಾದ ಮೇಲೆ ತಂದೆತಾಯಿಗಳಿಗೂ ನನಗೂ ಸ್ವಲ್ಪ ದೂರವಾಗಿ ಮನಸ್ಸಿನಲ್ಲಿ ಬಾಧೆಯುಂಟಾಗುತ್ತಿತ್ತು. ಮದುವೆಯಾದ ಮೇಲೆ ರಜಾ ಹಾಕುವುದು ಜಾಸ್ತಿಯಾಯಿತು. ಒಟ್ಟೋಟ್ಟಿಗೆ ನಾಲೈದು ದಿನಗಳು ಹೋಗುತ್ತಿರಲಿಲ್ಲ.
PresentIllness ಹೀಗೆ ರಜಾ ಹಾಕುವುದು ಆಗಾಗ್ಗೆ ಜಾಸ್ತಿಯಾದುದರಿಂದ ಮನಸ್ಸಿನಲ್ಲಿ ನೆಮ್ಮದಿಯಿರಲಿಲ್ಲ.. ರಜ ತೆಗೆದುಕೊಂಡಾಗ ಬೇರೇನೂ ಕೆಲಸ ಮಾಡುತ್ತಿರಲಿಲ್ಲ. ಮನೆಯಲ್ಲಿ ಸುಮ್ಮನೆ ಮಲಗಿಕೊಂಡಿರುವುದು. ಏನೇನೋ ಯೋಚನೆಗಳನ್ನು ಮೆಲಕು ಹಾಕುವುದು. ಇಷ್ಟೇ ಕೆಲಸ ರಜ ತೆಗೆದುಕೊಳ್ಳುವುದು ಜಾಸ್ತಿಯಾಗಿ, ಮನಸ್ಸಿನಲ್ಲಿ ಅದೇ ಯೋಚನೆ ಬಾಧಿಸತೊಡಗಿತು. ಕೂತರೆ ನಿಂತರೆ ಅದೇ ಯೋಚನೆಯಾಯಿತು. ಹೀಗಾಗಿ ಕೆಲಸದ ಮೇಲೆ ಇದ್ದಾಗಲೂ ಅದೇ ಯೋಚನೆಯಾಗಿ ಕೆಲಸದ ಮೇಲೆ Concentrate ಮಾಡುವುದು ಆಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಮನಸ್ಸಿನಲ್ಲಿ ಅದೇ ಭಾವನೆ ಉತ್ಕಟವಾಗಿ ಮುಖಭಾವದಲ್ಲಿ ಬದಲಾವಣೆಯಾಗುತ್ತಿತ್ತೋ ಏನೋ? ಎಲ್ಲರೂ ನನ್ನನ್ನು ನೋಡಿ ನಗಲು ಪ್ರಾರಂಭಿಸಿದರು. ಹೀಗೇ ಸ್ವಲ್ಪ ದಿನ ನಡೆಯಿತು. ನನಗೆ ಇದಕ್ಕೆ ಪರಿಹಾರ ಕಾಣದಾಯಿತು. ಅಷ್ಟು ಹೊತ್ತಿಗೆ ನನ್ನನ್ನು ನೋಡಿ ಎಲ್ಲರೂ ನಗುತ್ತಾರೆ ಎಂಬ ಭಾವನೆ ಬೆಳೆದುಬಿಟ್ಟಿತು. ಮನಸ್ಸಿನಲ್ಲಿ ಅದನ್ನೇ ಮೆಲುಕು ಹಾಕುತ್ತಿದ್ದಾಗ ಎಲ್ಲ ನೋಡಿ ಆಡಿಕೊಳ್ಳುತ್ತಿದ್ದರು .
ಫ್ಯಾಕ್ಟರಿಗೆ ಹೋಗುವುದು ತೀರ ಕಮ್ಮಿಯಾಗಿದೆ. ತಿಂಗಳಿಗೆ ಐದಾರು ದಿನಗಳೋ, ಎಂಟು ಹತ್ತು ದಿನಗಳು ಮಾತ್ರ ಹೋಗುತ್ತಿರುತ್ತೇನೆ. ಈಗ ಏಳುವುದಕ್ಕೆ ಮತ್ತು Factory ಗೆ ಹೋಗಲು ಮನಸ್ಸೇ ಇಲ್ಲ. ಕೆಲಸಕ್ಕೆ ಹೋಗದೆ ಇರುವುದರಿಂದ ಆಗುವ ತೊಂದರೆಗಳು ನನ್ನ ಮೇಲೆ ಪರಿಣಾಮವನ್ನುಂಟುಮಾಡುತ್ತಿಲ್ಲ. ಕೆಲಸ ಹೋಗುತ್ತದೆ. ನಂತರ ಸಂಸಾರದ ಗತಿಯೇನು ? ಎಂಬ ಭಾವನೆಯೂ ನನಗೆ ಬರುತ್ತಿಲ್ಲ . . .
ಜೀವನದಲ್ಲಿ ಉತ್ಸಾಹವಾಗಲೀ ಹೆಂಡತಿ ಮಕ್ಕಳು ಎಂಬ ಪ್ರೀತಿ ವಿಶ್ವಾಸವಾಗಲೀ ಇಲ್ಲ. ಯಾವಾಗಲೂ ನಿರುತ್ಸಾಹ ಒಂಟಿತನ ಬೇಜಾರು ಕಾಡುತ್ತಿರುತ್ತವೆ.
ಮೇಲಿಂದ ಮೇಲೆ ರಜ ತೆಗೆದುಕೊಂಡು, ಚಾಕರಿಯನ್ನು ಊನ ಮಾಡಿಕೊಳ್ಳುತ್ತಿದ್ದ ರಘುಪತಿಯು ತನಗಾಗುವುದನ್ನು ವಿವರಿಸಿ ಬರೆದು ತಂದ ವರದಿಯಿಂದ, ಮೇಲೆ ಹೇಳಿರುವುದನ್ನು ಬಳಸಿಕೊಂಡಿದ್ದೇನೆ.
ಒಂಭತ್ತು ಮಕ್ಕಳಿದ್ದ ತುಂಬಿದ ಮನೆಯಲ್ಲಿ ರಘುಪತಿ ಹಿರಿಯ ಮಗ