೨೨೧
ಹೀಗೆ ಮನಸ್ಸು ಛಿದ್ರವಾದಾಗ, ಆಳ ಮನಸ್ಸಿನಲ್ಲಿ ಹುದುಗಿಕೊಂಡಿದ್ದ ID-compulsions ವನ್ಯ ಮೃಗಗಳ ನಡತೆಯು ರಘುಪತಿಯನ್ನು ಜಗ್ಗಿಸಿ ಆಡಿಸಬಹುದು. ಆಗ ಮಾನವ ಸಹಜವಾದ ಆಸೆ, ಆಕಾಂಕ್ಷಿ ; ಸುರಕ್ಷಿತವಾಗಿರಬೇಕು, ಸಮಾಜದಲ್ಲಿ ಮನ್ನಣೆಯನ್ನು ಪಡೆಯಬೇಕು ಎಂಬುವೆಲ್ಲಾ ನಶಿಸಿಹೋಗುತ್ತಾ ಇರುತ್ತವೆ. ಇದರ ಲಕ್ಷಣವೇ ಮಹತ್ ಉದಾಸೀನತೆ, ರಘುಪತಿಯು ಮಹಾ ಉದಾಸೀನನಾಗಿದ್ದು ಈ ಕಾರಣದಿಂದ
ರೋಗದ ಚಿಹ್ನೆಗಳನ್ನೆಲ್ಲಾ ಬರೆದು ರಘುಪತಿಯು ತಂದುಕೊಟ್ಟ ಯೋಚನೆಗಳನ್ನು ಸಮಂಜಸವಾಗಿ ಬರೆದಿಟ್ಟ ರೀತಿಯನ್ನು ನೋಡಿದರೆ, ಯೋಚನೆಗಳನ್ನು ಹೊರಪಡಿಸುವಾಗ ಯಾವ ತಪ್ಪ ಇಲ್ಲ ಎನ್ನುವುದು ಸ್ಪಷ್ಟವಾಯಿತು. ಹೊರಪಡಿಸುವುದು ಸಮಂಜಸವಾಗಿದ್ದರೂ, ಅವ ಯೋಚನೆಗಳನ್ನು ಮಾಡುವಾಗ ತೀವ್ರವಾಗಿ ಎಡವುತ್ತಿದ್ದ ಎನ್ನುವುದೂ ಸ್ಪಷ್ಟವಾಗಿತ್ತು. ಭಾವನೆಗಳು ನಶಿಸುತ್ತಿದ್ದುದರಿಂದ ಯೋಚಿಸುವಾಗ ಎಡವುತ್ತಿದ್ದಹಾಗೆ ಹೊರಬಂದ ಯೋಚನೆಗಳನ್ನು ಮಾತುಗಳಲ್ಲಿ ಮೂಡಿಸುವಾಗ, ಸಮಂಜಸವಾಗಿಯೇ ಮಾಡುತ್ತಿದ್ದ. ಇವನ ಮನಸ್ಸು ಸರಿಯಾಗಿ ಕೆಲಸ ಮಾಡುತ್ತಿದೆ ; ಇವನಿಗೇನೂ ಬೇನೆ ಇರಲಾರದು ; ಎಂದು ಅನ್ನುವಂತಿದ್ದ.
ರಘುಪತಿಯು ಕೆಲಸದ ಮೇಲಿದ್ದಾಗಲೂ ಕೂಡ, 'ನನ್ನನ್ನು ನೋಡಿ ಜನರು ನಗುತ್ತಾರೆ, ನನ್ನ ಹಿಂದೆ ಮೂದಲಿಸುತ್ತಿದ್ದಾರೆ' ಎನ್ನುವ ಯೋಚನೆಗಳು, ಒದ್ದುಕೊಂಡು ಬಂದು, ಕೆಲಸದ ಮೇಲಿರಬೇಕಾಗಿದ್ದ ಗಮನವನ್ನು ತಪ್ಪಿಸಿದುವು. ರಘುಪತಿಯ ಈ ಅವಸ್ಥೆಯನ್ನು Thought-disorder ಎಂದು ಕರೆಯುತ್ತಾರೆ, ಸ್ಕಿಜೋಫೆನ್ರಿಯಗಳ ಒಂದು ಪ್ರಮುಖವಾದ ಚಿಹ್ನೆ ಇದು.
'ಇಷ್ಟು ದುರ್ಬಲವೇನೋ, ನಿನ್ನ ಮನಸ್ಸು, ರಘುಪತಿ ; ಸಾಹಸಪಟ್ಟು ಮನಸ್ಸಿನ ಯೋಚನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಪ್ಪಾ' ಎಂದು ಬುದ್ಧಿಯನ್ನು ಹೇಳುವುದು, ಶುದ್ಧ ಮೌಡ್ಯತನ, ಅದು ಸಾಧ್ಯವಾಗಿದ್ದರೆ ಅವ ಡಾಕ್ಟರ ಬಳಿಗೆ ಏಕೆ ಬರುತ್ತಿದ್ದ? ಮನಸ್ಸು ಹತೋಟಿಯಲ್ಲಿರದೆ, ಸೂತ್ರವನ್ನು ಹರಿದುಕೊಂಡ, ಹಾಗೂ ಬಾಲಂಗೋಚಿ ಇಲ್ಲದ ಗಾಳಿಪಟದಂತೆ, ತಿಪ್ಪರಲಾಗ ಹಾಕಿ ಬೆದರಿಸುತ್ತಿರುವಾಗ, ಅವನನ್ನು ಧೈರ್ಯ ತಂದುಕೋಪ್ಪಾ ಎನ್ನುವುದು ಶುದ್ಧ ಅನ್ಯಾಯ, ಹೀಗಂದರೆ ರಘುಪತಿಯು ಸಿಡುಕಿ ರೇಗುವುದು ಸಹಜ. ಯೋಚಿಸಿ, ದೃಢ ನಿರ್ಧಾರ ಮಾಡುವ ಶಕ್ತಿಯು ಕಳೆದು ಹೋಗುವುದು ಜೋಫ್ರೆನಿಯಾಗಳ ಮುಖ್ಯ ಲಕ್ಷಣ.