ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨೪

ಮನಮಂಥನ

ಸೆಕೆಂಡ್ ಕ್ಲಾಸ್‌ಗಿಂತ ಹೆಚ್ಚಿನದನ್ನು ನಾನು ಪಡೆಯಲೇ ಇಲ್ಲ. ಕೇವಲ ಹೈಸ್ಕೂಲ್ ಮಾಸ್ತರು, ನಾನೀಗ ಅವನಾದರೋ ಬಲು ಜಾಣ, ಬ್ಯಾಂಕ್‌ ಪಡೆಯದೆ ಯಾವ ಪರೀಕ್ಷೆಯಲ್ಲೂ ಸೋತಿಲ್ಲ. ಅವನ ಹತ್ತಿರ ಮಾತನಾಡುಕ್ಕೆ ನನಗೆ ಸ್ವಲ್ಪ ಭಯ. ತಾಯಿ ಅಂದರೆ ಅಸಡ್ಡೆ ಇರುಲ್ಲ ಮಕ್ಕಳಿಗೆ ನೀನೇ ಇನ್ನೊಂದು ಸರ್ತಿ ಕೇಳು' ಎಂದರು ತಂದೆ.

ಮಗನದು ಬಾಲ್ಯದಿಂದಲೂ ಸಂಕೋಚ ಪ್ರವೃತ್ತಿ. ತಾನಾಯಿತು, ತನ್ನ ಪುಸ್ತಕಗಳಾಯಿತು. ಬರುತ್ತಿದ್ದ ವಿದ್ಯಾರ್ಥಿವೇತನದ ಕಾರಣದಿಂದ, ತಂದೆಯ ಬಳಿ ಫೀಜು, ಪುಸ್ತಕ, ಅಂತ ಏನೂ ಬೇಡಬೇಕಾಗಿರಲಿಲ್ಲ. ಅಪ್ಪಿತಪ್ಪಿ, ಅಪ್ಪ ಮೇಲು ಬಿದ್ದುಕೊಂಡು ಮಾತನಾಡಿಸಿದರೆ, ಹೂ; ಉಹೂ; ಇರಬಹುದು ; ಗೊತ್ತಿಲ್ಲ ; ಇವೇ ಮಗನಿಂದ ಬರುತ್ತಿದ್ದ ಉತ್ತರ. ಸದರದಿಂದ ಯಾರೊಡನೆಯೂ ಮಗ ನಡೆದುಕೊಳ್ಳುತ್ತಿರಲಿಲ್ಲ ಎನ್ನುವುದನ್ನು ಮನೆಗೆ ಬಂದ ನೆಂಟರಿಷ್ಟರೂ ಗಮನಿಸಿದ್ದರು. ಆ ವಿಷಯವನ್ನು ಆಡಿಕೊಂಡೂ ಇದ್ದರು. ಬ್ಯಾಂಕ್ ಪಡೆದು ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳುವ ಹುಡುಗನೊಡನೆ, ನಮ್ಮ ಹುಡುಗ ಇವ, ಎಂದು ಮಾತನಾಡಲು ನೆಂಟರಿಗೆಲ್ಲಾ ಬಲು ಆಸೆ. ಆದರೆ ರಾಮಭದ್ರ ಸಹಕರಿಸುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಅಲಕ್ ಆಗಿರುವುದರಲ್ಲಿ ಅವನಿಗೆ ಖುಷಿ ಇದ್ದಿತು.

'ನಿಮ್ಮ ಮಗ ಅಮೆರಿಕಾಕ್ಕೆ ಹೋಗುತ್ತಾನಂತೆ' ಎಂದು ಮಾಸ್ತರೊಬ್ಬರು, ರಾಮಭದ್ರನ ತಂದೆಯವರನ್ನು ಕೇಳಿದರು. ಅವರಿಗೇನು ಉತ್ತರ ಹೇಳುವುದು; ಯಾವ ವಿಷಯವೂ ಗೊತ್ತಿರಲಿಲ್ಲ. 'ಹೋಗಬೇಕು ಅಂತಿದಾನೆ ಇನ್ನೂ ವ್ಯವಸ್ಥೆಯಾಗಿಲ್ಲ' ಎಂದು ತೇಲಿಸಿ ಹೇಳಿದರು. ಮನೆಗೆ ಬಂದು ರಾತ್ರಿ ಮಗನನ್ನು ಕರೆದು ಹೀಗಂತ ಹೇಳಿದರು. ಸಮಾಚಾರ ಏನು, ಎಂದು ಕೇಳಿದರು. ಏನು ಮಾಡುತ್ತಿದೀಯೋ ಅದನ್ನು ಹೇಳಬಾರದೇಪ್ಪಾ ಎಂದೂ ಕೇಳಿದರು. 'ಏನು ಮಹಾ ಸುದ್ದಿ ಅಂತ ಹೇಳಬೇಕು. ಇನ್ನೂ ನಾಲ್ಕು ದಿನಗಳಿವೆ, ಹೊರಡುಕ್ಕೆ. ಆಮೇಲೆ ಹೇಳಿದರಾಯಿತು ಅಂತ ಸುಮ್ಮನಿದ್ದೆ' ಎಂದು ರಾಮಭದ್ರ ಉತ್ತರಿಸಿದ. ಊರು ಬಿಟ್ಟು, ಮನೆಯವರನ್ನು ಬೀಳ್ಕೊಟ್ಟು ಪರದೇಶಕ್ಕೆ ಕೆಲವು ವರ್ಷಗಳ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾನೆ. ತಂದೆ ತಾಯಿಯರನ್ನು ಬಿಟ್ಟು ಹೋಗಬೇಕಲ್ಲಾ ಎಂಬ ಆತಂಕವಾಗಲೀ, ಇನ್ನೆಂದೋ ಇವರನ್ನು ಕಾಣುವುದು ಎನ್ನುವ ಕೊರಗಾಗಲೀ ಅವನಲ್ಲಿ ಕಾಣಬರಲಿಲ್ಲ. ಅಮೆರಿಕಾಕ್ಕೆ ಹೋದ.

ನಾಲ್ಕು ವರ್ಷಗಳು ಅಲ್ಲಿದ್ದ. ಡಾಕ್ಟರೇಟ್ ಪ್ರಶಸ್ತಿಯನ್ನು ಸುಲಭವಾಗಿ