ಸ್ಕೀಜೋಫ್ರೆನಿಯಾಗಳು
೨೨೯
ವರ್ಷಗಳು ಚಾಕರಿಯನ್ನು ಮಾಡುವ, ಮಿಕ್ಕ ಮಾಸ್ತರುಗಳು, ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಗಳಿಸುವಂತೆ ಪಾಠ ಕಲಿಸುವ. ಮಾತಾಡುವುದು ವಿರಳವಾಗಿದ್ದರೂ, ಆಡಿದಾಗ ಅತಿ ಜಾಣತನವನ್ನು, ಒಮ್ಮೊಮ್ಮೆ ಶುದ್ಧ ಪೆಚ್ಚುತನವನ್ನೂ ಕಾಣಿಸುತ್ತಿದ್ದ. ನಂತರ ಹಠಾತ್ತನೆ ರಾಜೀನಾಮೆ ಇತ್ತು ಹಿಂತಿರುಗಿಬಿಡುತ್ತಿದ್ದ. ಹೀಗೆಯೇ ಹಲವಾರು ವರ್ಷಗಳು ನಡೆಯಿತು. ಐವತ್ತರ ವೇಳೆಗೆ ಚಾಕರಿ ಹುಡುಕುವುದನ್ನೂ ಬಿಟ್ಟ ವ್ಯಕ್ತಿತ್ವವೇ ಬದಲಾಯಿತು, ಮುಖದಲ್ಲಿ ಕಳೆಯೂ ಹೋಯಿತು. ಬೆಪ್ಪ ಹಿಡಿದವನಂತೆ ಇರುತ್ತಾನೆ. ಮುದಿತಾಯಿ ಇರುವ ತನಕ ಊಟಕ್ಕೆ ಕೊರತೆ ಇಲ್ಲ. ಆಕೆಯು ಮರಣ ಹೊಂದಿದ ಮೇಲೆ, ಇವ ಏನಾಗುತ್ತಾನೋ, ದೇವರೇ ಬಲ್ಲ.
ಪಾರ್ಟಿ' ಕೊಡುವ ಪೀತಾಂಬರ್
'ಹೊಟ್ಟೆ ತೊಳಸುತ್ತಿದೆ, ಡಾಕ್ಟರೇ, ನಾಲಿಗೆಯೆಲ್ಲಾ ಒಣಗಿ ಸುಕ್ಕಾದ ಚರ್ಮದಂತೆ ಇದೆ. ತಲೆ ಭಾರವಾಗಿ ಸಿಡಿಯುತ್ತಿದೆ.' ಎಂದು ಲಚಮನ್ ಹೇಳಿದ. ಅವನ ನಾಲಿಗೆಯ ಮೇಲೆ ದಪ್ಪವಾದ ಬಿಳಿ ದೋಷವು ಹೆಪ್ಪುಗಟ್ಟಿತ್ತು. ಕಣ್ಣುಗಳೆಲ್ಲವೂ ಕೆಂಪಗಿದ್ದುವು. ನಿನ್ನೆ ಸಂಜೆ ಪಗದಸ್ತಾಗಿ ಕುಡಿದುಬಿಟ್ಟು ಸಿಕ್ಕಿದ್ದನ್ನು ಮುಕ್ಕಿರಬೇಕು, ಅದಕ್ಕೇ ಈ ಬೆಳಿಗ್ಗೆ ಹೀಗೆ, ಎಂದಂದುಕೊಂಡು ; 'ಲಚಮನ್ ! ಬಟ್ಟೆ ತುಂಡುಗಳನ್ನು ರಸ್ತೆ ಅಂಚಿನಲ್ಲಿ ವ್ಯಾಪಾರ ಮಾಡುತ್ತ, ಜೀವನ ಮಾಡ್ತೀ ; ಹೆಂಡತಿ ಮಕ್ಕಳು ಇದಾರೆ. ಹೊಟ್ಟೆ ಬಟ್ಟೆಗೆ ಸಾಲದೆ ಇರುವವ ನೀನು. ಇಂಡೋನು ಸಿಕ್ಕಾಪಟ್ಟೆ ಕುಡಿದರೆ ಹೇಗೆ ಬಾಳುಕ್ಕೆ ಸಾಧ್ಯವೋ ?' ಎಂದು ರೇಗಿ ಕೇಳಿದೆ. ಬಾಲ್ಯದಿಂದಲೂ ಪರಿಚಯವಿದ್ದವ, ಈಗ ಇಪ್ಪತ್ತೆಂಟರ ಪ್ರಾಯ. ಆದರೂ ವಿಶ್ವಾಸವನ್ನೂ ಗೌರವವನ್ನೂ ನನ್ನಲ್ಲಿಟ್ಟುಕೊಂಡಿದ್ದುದರಿಂದ, ಬುದ್ಧಿ ಹೇಳುವ ಅವಕಾಶವು ನನಗಿತ್ತು.
'ನಿನ್ನೆ ರಾತ್ರಿ ಸಿಕ್ಕಾಪಟ್ಟೆ ಕುಡಿದಿದ್ದೇನೋ ನಿಜ, ಡಾಕ್ಟರೇ ; ಆದರೆ ಒಂದು ಪೈಸೇನೂ ನಾನು ಖರ್ಚು ಮಾಡಲಿಲ್ಲ. ಪೀತಾಂಬರ್ ಪಾರ್ಟಿ ಕೊಟ್ಟಿದ್ದ. ಪುಕಟ್ಟು ಸಿಕ್ಕಿತು ಅಂತ ನಾನೂ ಮಿತಿಮೀರಿದೆ. ಸಂಪಾದಿಸಿದ ಹಣದಲ್ಲಿ ಒಂದು ಪೈಸೇನೂ ಇಂತಹ ದುಂದು ಖರ್ಚಿಗೆ ಬಳಸುಲ್ಲ' ಎಂದ ಲಚಮನ್.
ಪೀತಾಂಬರನ ಪರಿಚಯವೂ ನನಗಿತ್ತು. ಅವನೂ ಲಚಮನನ
ವಯಸ್ಸಿನವನೇ. ಬಾಲ್ಯದಿಂದಲೂ ಪರಿಚಯವಿದ್ದವನೇ. ಅವನ ತಂದೆ ಮದ್ರಾಸಿನಲ್ಲಿ
ಲೇಣೆ ದೇಣೆ ವ್ಯಾಪಾರದಲ್ಲಿದ್ದ. ಶಾಖೆಯೊಂದನ್ನು ನಮ್ಮ ಷಹರಿನಲ್ಲಿ ಇಟ್ಟು,
ದೊಡ್ಡ ಮಗ ಪೀತಾಂಬರನನ್ನು ಮ್ಯಾನೇಜರ್ ಆಗಿ ನೇಮಿಸಿದ್ದ. ಲೇಣೆದೇಣಿ