ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೨

ಮನಮಂಥನ

ಲಚಮನನು ಪಾರ್ಟಿಗಳ ವಿವರಗಳನ್ನು ಹೇಳಿದ ಮೇಲೆ ತುಂಬಾ ಅನುಮಾನ ಉಂಟಾಯಿತು, ನನಗೆ ನಿರ್ಲಿಪ್ತನಂತೆ ; ಸ್ಥಿತ ಪ್ರಜ್ಞನಂತೆ ಇದ್ದವ, ಹಠಾತ್ತನೆ ಬೇಜಬ್ದಾರಿಯಿಂದ ದುಂದು ಖರ್ಚು ಮಾಡುತ್ತಾ, ಹತ್ತಾರು ಮಂದಿಗಳಿಗೆ ಪಾರ್ಟಿ ಕೊಡಬೇಕಾದರೆ, ಇವನಲ್ಲಿ ಯಾವುದೋ ಪ್ರಮಾದವಾಗಿರಬೇಕು ಎಂದು ಅನ್ನಿಸಿತು. ಕಾರಣ ನನ್ನ ಬಂದು ಕಾಣು ಎಂದು ಹೇಳಿ ಕಳುಹಿಸಿದೆ.

ಎರಡು ಮೂರು ದಿನಗಳಾದ ಮೇಲೆ ಅವ ಬಂದ. "ಹೇಳಿ ಕಳುಹಿಸಿದರಂತೆ ನೀವು ತುಂಬಾ ಕೆಲಸದಲ್ಲಿರುತ್ತೀರಿ ಎಂದು ತಿಳಿಯೋದು, ಆದ್ದರಿಂದ ತಡವಾಗಿ ಬಂದೆ. ಏನಾಗಬೇಕಾಗಿತ್ತು' ಎಂದು ಕೇಳಿದ.

'ತುಂಬಾ ದಿನಗಳಾಗಿತ್ತು, ನಿನ್ನ ಕಂಡು, ಯೋಗಕ್ಷೇಮವನ್ನು ವಿಚಾರಿಸೋಣ ಅಂತ ಕರೆಕಳಿಸಿದೆ. ಅಲ್ಲದೆ ಈಚೀಚೆಗೆ ಪಾರ್ಟಿಗಳ ಭರಾಟೆ ಹೆಚ್ಚಾಗಿದೆ ಎಂದು ಕಿವಿವದಂತಿ ಕೇಳಿಸಿತು. ಆರೋಗ್ಯಕ್ಕೆ ಅಪಾಯವಾಗಬಹುದು, ಅಂತಹ ದುಶ್ಚಟಗಳಿಂದ, ಆದ್ದರಿಂದ ಅದನ್ನೂ ನಿನ್ನಿಂದ ತಿಳಿದುಕೊಳ್ಳೋಣ ಎನ್ನಿಸಿತು,' ಎಂದೆ.

ಈ ರೀತಿ ನೇರವಾಗಿ ಕೇಳಿದೆ ಅಂತ ಅವನಿಗೆ ಬೇಸರವಾಗಲೀ, ಕೋಪವಾಗಲೀ ಬರಲಿಲ್ಲ. 'ಪಾರ್ಟಿಗೆ ನೀವೂ ಬನ್ನಿ ಡಾಕ್ಟರೇ, ನಗುನಗುತ್ತಾ ಮಜಾ ಮಾಡಿದರೆ ಖುಷಿಯಾಗಿರುತ್ತೆ ; ಆಹ್ವಾನವನ್ನು ಕಳುಹಿಸಲಿ, ಅಂತ ಕಾಯಬೇಡಿ. ಯಾವಾಗ ಬಂದರೂ ಸ್ವಾಗತ' ಎಂದು ಹೇಳಿದ. ಹೀಗನ್ನುವಾಗ ಆದರದಿಂದಾಗಲೀ, ವಿಶ್ವಾಸದಿಂದಾಗಲೀ ಅವ ನುಡಿದಂತೆ ಅನಿಸಲಿಲ್ಲ. ನಾನು ಪಾರ್ಟಿಗೆ ಹೋದರೂ ಒಂದೇ ಹೋಗದೆ ಇದ್ದರೂ ಒಂದೇ ಎನ್ನುವ ಭಾವನೆ ಇದ್ದಂತಿತ್ತು.

'ಹುಷಾರಾಗಿರಪ್ಪ, ಅಷ್ಟೆಲ್ಲಾ ಖರ್ಚು ಮಾಡಿದರೆ, ಎಷ್ಟು ಸಂಪಾದನೆಯನ್ನು ಮಾಡಿದರೂ, ಸಾಲದೆ ಬರುವಂತಾಗುತ್ತದೆ. ಅಲ್ಲದೆ ದೇಹಕ್ಕೂ ಬೇನೆ ಬಡಿಯುತ್ತದೆ. ಬೆಳೆದು ಕಲಿತ ಯುವಕ ನೀನು, ನಿನ್ನ ಜವಾಬ್ದಾರಿಯು ತಿಳಿದಿರಬೇಕು. ಈ ವಿಷಯ ತಿಳಿದಾಗ ಸುಳ್ಳಿರಬಹುದು ಎಂತಿದ್ದೆ. ನೀನೇ ಒಪ್ಪಿಕೊಂಡಿದ್ದನ್ನು ಕೇಳಿ ಮನಸ್ಸಿಗೆ ಕಸಿವಿಸಿಯಾಗಿದೆ. ಜಾಣನಾಗಿ ಬಾಳಪ್ಪ' ಎಂದು ಹೇಳಿ ಕಳುಹಿಸಿದೆ.

ಇನ್ನೇನು ತಾನೆ ಮಾಡಲು ನನ್ನಿಂದ ಸಾಧ್ಯವಿತ್ತು ? ನಾಚಿಕೆ, ಮತ್ತು ಸಂಕೋಚದ ಪ್ರವೃತ್ತಿಯ ಬಾಲಕ ಬೆಳೆದು ಪ್ರೌಢನಾದ ಮೇಲೆ, ಭಾವನೆಗಳನ್ನು ಕಳೆದುಕೊಂಡಿದ್ದಾನೆ ಎಂದರೆ,ಸ್ಕೀಜೋ ತಲೆ ಹಾಕಿದೆಯೇನೋ ಎಂದು