ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಕಿಜೋಫೊನಿಯಾಗಳು

೨೩೩

ಅನುಮಾನವು ಮೂಡುತ್ತದೆ. ಶೋಕಿಸುವಂತಹ ಸಂದರ್ಭಗಳಲ್ಲಿ, ಮತ್ತೆ ರೇಗಬೇಕಾದ ಸನ್ನಿವೇಶಗಳಲ್ಲಿ, ಯಾವ ರಾಗ ಪ್ರದರ್ಶನವನ್ನೂ ಮಾಡದೆ ಇದ್ದರೆ, ಇವನಿಗೆ Feelings ಇಲ್ಲವೇ ? ಎಂದೆನಿಸುತ್ತದೆ. ಮಗುವಿಗೆ ಸಕತ್ ಕಾಯಿಲೆಯಾದಾಗ, ನೆಂಟನಲ್ಲದ ನಾನು ಅವನ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ ; ಎರಡೂ ಸಂದರ್ಭಗಳಲ್ಲಿ ಅವ, ರಾಗರಹಿತನಾಗಿದ್ದ. ಹೀಗಾಗುವುದು ಜೋ ಬೇನೆಗಳಲ್ಲಿ.

ನಾನು ಕೇಳಿದ ಪ್ರಶ್ನೆಗೆ ಸಮಂಜಸವಾದ ಉತ್ತರವೆಂದರೆ ; 'ಇಲ್ಲ ಸಾರ್ ಇನ್ನು ಮೇಲೆ 'ಪಾರ್ಟಿ'ಗಳ ಬೆಡಗಿಗೆ ಬೀಳುವುದಿಲ್ಲ. ಖರ್ಚನ್ನು ದುಂದಾಗಿಸುವುದಿಲ್ಲ' ಎನ್ನುವುದು. ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡಬೇಕು ಎಂದು ಅವನು ಯೋಚಿಸಲಿಲ್ಲ. ಪಾರ್ಟಿ ಎನ್ನುವ ಪದವನ್ನು ಹಿಡಿದುಕೊಂಡಿದ್ದ, ನನಗೂ ಆಹ್ವಾನವನ್ನು ಕೊಟ್ಟಿದ್ದ. ಯೋಚನಾಸರಣೆಯಲ್ಲಿ ಅವ ತಪ್ಪಿದ್ದ. ಆದರೆ ಹಳಿ ತಪ್ಪಿದ ಯೋಚನೆಯನ್ನು ಮಾತುಗಳಲ್ಲಿ ಮೂಡಿಸುವಾಗ ಲಕ್ಷಣವಾಗಿ ನುಡಿದಿದ್ದ. ಪಾರ್ಟಿಗೆ ಬಾ ಎಂದಿದ್ದ. ಇದೂ ಜೋವಿನ ಒಂದು ಚಿಹ್ನೆ.

ಇವನ ತಂದೆಗೆ ಒಂದು ಕಾಗದವನ್ನು ಬರೆದು ; ನಿಮ್ಮ ಮಗ ಪಿತಾಂಬರ್‌ಗೆ ಹೀಗೆ ಸ್ಕಿಜೋ ಬೇನೆಯು ತಗುಲಿದಂತಿದೆ. ಇಲ್ಲಿಗೆ ಬಂದು, ಮನೋವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಪರಣಾಮಕಾರಿ ಚಿಕಿತ್ಸೆಯನ್ನು ನಡೆಸಿ : ಎಂದು ಹೇಳಲೇ ? ಎನ್ನಿಸಿತು. ಇದು ಕರ್ತವ್ಯ ಎಂದೂ ಅನಿಸಿತು.

ಆದರೆ ಅವನ ತಂದೆಯ ಪರಿಚಯವು ಸಾಕಷ್ಟು ಇರಲಿಲ್ಲ. ಆ ರೀತಿ ಕಾಗದ ಬರೆದರೆ, ಆತ ಬಂದು 'ನನ್ನ ಮಗನಿಗೇನಾಗಿದೆ. ಹುಚ್ಚು ಅಂತ ಹೇಳುವ ನೀನು ಹುಚ್ಚ ಎಂದು ದಬಾಯಿಸಬಹುದು. ಪಾರ್ಟಿಗಳನ್ನು ಏರ್ಪಡಿಸಿದರೆ, ಜೋ ಅನ್ನುತ್ತಾರೆಯೇ ಎಂದು ಮೂದಲಿಸಬಹುದು. ಸುಮ್ಮಸುಮ್ಮನೆ ಈ ಗೋಜಿಗೆ ಏಕೆ ಕೈಹಾಕಲಿ ಅಂತ ತೆಪ್ಪಗಾದೆ.

ಒಂದೆರಡು ತಿಂಗಳುಗಳಲ್ಲಿ ಪಿತಾಂಬರನ ಅಜ್ಜಿಯು, ಮಗನನ್ನು ಚಿಕಿತ್ಸೆಗೆ ಕರೆತಂದಳು. 'ನನ್ನ ಮಗ, ಮದ್ರಾಸಿನಿಂದ ನಾಲ್ಕು ದಿನಗಳ ಹಿಂದೆ ಬಂದ. ಎರಡು ದಿನಗಳಿಂದ ಎದೆಯು ನೋವುತ್ತೆ, ತುಂಬಾ ಸುಸ್ತಾಗುತ್ತದೆ ಎಂದು ಹೇಳಿದ. ಡಾಕ್ಟರ ಬಳಿಗೆ ಹೋಗೋಣ ಅಂದೆ. ವಿಶ್ರಾಂತಿ ತೆಗೆದುಕೊಂಡರೆ ಸರಿಹೋಗುತ್ತೆ ಅಂತ ಹಠ ಹಿಡಿದ. ಅದಕ್ಕೆ ಈ ತನಕ ಬರಲಿಲ್ಲ. ಆದರೆ ನಿನ್ನೆ ರಾತ್ರಿಯೆಲ್ಲಾ ನರಳುತ್ತಿದ್ದ. ಜುಲುಂ ಮಾಡಿ ಈಗ ಕರತಂದೆ' ಎಂದು ಪೀತಾಂಬರನ