ಮನಮಂಥನ
ನಿಲೂಫರ್ ಇನ ಇಂಜಿನಿಯರಿಂಗ್ ಓದು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಸಮೀಯುಲ್ಲಾ ನನ್ನ ಸಹಪಾಠಿಯಾಗಿದ್ದ, ಬಡಮನೆತನದಲ್ಲಿ ಹುಟ್ಟಿದ್ದ ಜಾಣ ವಿದ್ಯಾರ್ಥಿ, ನಮ್ಮ ತರಗತಿಯಲ್ಲಿ ಇದ್ದ ವಿದ್ಯಾರ್ಥಿಗಳು ಬಹುತೇಕ ಮಧ್ಯಮ ವರ್ಗದವರು. ಅವನೂ ನಾನೂ ಇಬ್ಬರೇ ಕಡುಬಡವರು. ನಮ್ಮಿಬ್ಬರಿಗೆ ಮಾತ್ರ ಗಡಿಯಾರವಿರಲಿಲ್ಲ ; ಫೌಂಟನ್‌ಪೆನ್ನೂ ಇರಲಿಲ್ಲ. ಕಾರಣ, ನಮ್ಮಿಬ್ಬರಲ್ಲಿಯೂ ತುಂಬಾ ಗೆಳೆತನವು ಕುದುರಿಕೊಂಡಿತು.
ಎಂಟ್ರೆನ್ಸ್ ಪರೀಕ್ಷೆಯಾದ ಮೇಲೆ ಅವ ಇಂಜನಿಯರಿಂಗ್ ಕಾಲೇಜನ್ನು ಸೇರಿದ ; ವಿದ್ಯಾರ್ಥಿವೇತನವು ದೊರಕಿದುದರಿಂದ, ಸೈನ್ಸ್ ಕಾಲೇಜಿಗೆ ನಾನು ದಾಖಲಾದೆ ; ಫೀಜು ಕಡಿಮೆ ಇದ್ದುದರಿಂದ, ಅನಂತರ ನಾವು ಒಬ್ಬರನ್ನೊಬ್ಬರು ಕಾಣುವುದು ಸ್ವಾಭಾವಿಕವಾಗಿ ವಿರಳವಾಯ್ತು.
ಹದಿನೈದು ಇಪ್ಪತ್ತು ವರ್ಷಗಳಾದ ಮೇಲೆ ಅವನನ್ನು ಸಿನಿಮಾ ಬಳಿ ಆಕಸ್ಮಿಕವಾಗಿ ಭೇಟಿಯಾದೆ. ಸುಮಾರು ಧಡಿಯನಾಗಿದ್ದ ; ಬೇಗ ಗುರುತು ಸಿಗಲಿಲ್ಲ. ಇವ ಸಮೀಯುಲ್ಲಾನೇ, ಎಂದು ಶಂಕಿಸುತ್ತಿದ್ದೆ. ಅಷ್ಟರಲ್ಲಿ ಅವನೇ ಒಂದು ತೋಳ ಮೇಲೆ ಕೈಹಾಕಿ 'ಯಾಕೋ ಹಾಗೆ ನೋಡೀ ಗುರುತು ಸಿಗಲಿಲ್ಲವೇನೋ' ಅಂದ. ಧ್ವನಿಯನ್ನು ಕೇಳಿದ ಮೇಲೆ ಅವನೇ ಎನ್ನುವುದು ಖಚಿತವಾಯಿತು. ಬಾಲ್ಯದ ಗೆಳೆಯ ಸಿಕ್ಕಿದ ಅಂತ ಹಿಗ್ಗೂ ಆಯಿತು. ಪರಸ್ಪರ ಯೋಗಕ್ಷೇಮದ ವಿಚಾರಣೆಯೂ ಆಯಿತು. ಮರಾಮತ್ತು ಇಲಾಖೆಯಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ ಎಂದು ತಿಳಿಯಿತು. ನಾನು ವೈದ್ಯನಾಗಿರುವುದು ಅವನಿಗೆ ಮೋಜೆನಿಸಿತು. ಪಿಳ್ಳುಜುಟ್ಟು ಬಿಟ್ಟುಕೊಂಡು, ಹೆಣವನ್ನು ಕಂಡರೆ ಜನಿವಾರವನ್ನು ತೀಡುತ್ತಿದ್ದ ನೀನು, ಡಾಕ್ಟರಾದೆಯೇನೋ, ಹೆಣ ಕುಯ್ದೆಯೇನೋ ? ಹೆಣ ಹಾಕ್ತಿಯೇನೋ ಎಂದೆಲ್ಲಾ ಮೊದಲಿನಂತೆ ಗಹಗಹಿಸಿ ಕುಹಕವಾಡಿದ.
ಮುಂದಿನ ಭಾನುವಾರ ಸಂಜೆ ಅವರ ಮನೆಗೆ ಚಹಾಕ್ಕೆ ಬರುವುದಾಗಿ ಒಪ್ಪಿದೆ.
ಸಮೀಯುಲ್ಲಾ ಅಷ್ಟು ಇಷ್ಟು ಸಾಂಪ್ರದಾಯಕ ಮುಸಲ್ಮಾನ. ಮನೆಯಲ್ಲಿ ಘೋಷಾವನ್ನು ಕಟ್ಟುನಿಟ್ಟಾಗಿ ಆಚರಿಸುವವ. ಆದರೆ ಮಗಳು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಳು. ಚಹಾಕ್ಕೆಂದು ಅವನ ಮನೆಗೆ ಹೋದಾಗ ಅವಳೇ ಬಾಗಿಲು ತೆಗೆದು ಸ್ವಾಗತಿಸಿದ್ದು, ನೀವು ಬರೀರಿ ಅಂತ ದಾದಾ ಹೇಳಿದ್ದರು. ಸಚಿವರು ತುರ್ತಾಗಿ ಮಧ್ಯಾಹ್ನ ಹೇಳಿಕಳಿಸಿದ್ದರಿಂದ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ' ಎಂದಳು. ಅಷ್ಟು ಹೊತ್ತಿಗೆ ಸರಿಯಾಗಿ ಸರಂತ ಬಂದು