ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಕಿಜೋಫ್ರೆನಿಯಾಗಳು

೨೩೭

ನಿಂತ ಮೋಟಾರು, ಜಟ್ಟಂತ ನಿಂತಿತು. ಇಳಿದು ಓಡೋಡಿ ಬಂದ ಸಮೀಯುಲ್ಲಾ 'ತುಂಬಾ ಹೊತ್ತಾಯಿತೇನೋ ನೀ ಬಂದು, ಬೇಸರವಾಗಲಿಲ್ಲವಾ, ಹಾಳು ಕೆಲಸ, ರಜ ಇದ್ದರೂ ಹೋಗಲೇಬೇಕು' ಎಂದ. 'ಇಲ್ಲ ಕಣೋ, ಈಗ ತಾನೇ ಬಂದೆ, ಈ ಹೆಣ್ಣುಮಗಳು ಬಾಗಿಲು ತೆಗೆದಳು. ಎರಡು ಮಾತನಾಡಿದಳು. ಅಷ್ಟರಲ್ಲೇ ನೀ ಬಂದೆ' ಎಂದೆ.

ಇವಳು ನನ್ನ ದೊಡ್ಡ ಮಗಳು ಕಣೋ, ನಿಲೂಫರ್ ಅಂತ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಮುಂದೆ ಆರಿಟೆಕ್ಟ್ ಆಗಬೇಕು ಅಂತ ಹಂಬಲ ಅವಳಿಗೆ' ಎಂದು ಅವಳನ್ನು ಪರಿಚಯ ಮಾಡಿಸಿದ. 'ನನ್ನ ಹಳೆಯ ಅಪ್ತಗೆಳೆಯ ಕಣೆ, ಮಾಮೂ ಅಂತ ಅವನನ್ನು ಕರಿ ; ಮಸಲಾ ನಾನಿಲ್ಲದೇ ಹೋದರೆ, ಏನಾದರೂ ಬೇಕಾದರೆ, ಇವನ ಹತ್ತಿರ ಹೋಗು. ತನ್ನ ಸ್ವಂತಮಗಳಿಗಿಂತ ಹೆಚ್ಚು ಮಮತೆಯಿಂದ ನಿನ್ನನ್ನು ನೋಡಿಕೊಳ್ಳುತ್ತಾನೆ' ಎಂದು ನನ್ನ ಪರಿಚಯವನ್ನು ಆಕೆಗೆ ಮಾಡಿಸಿಕೊಟ್ಟ ಸಮೀಯುಲ್ಲನಿಗೆ ತುಂಬು ಹೃದಯ. ಹೃದಯದಲ್ಲಿದ್ದುದನ್ನು ನಿಷ್ಕಪಟದಿಂದ ನುಡಿಯುತ್ತಾನೆ. ಅವನಂದುದನ್ನು ಕೇಳಿ ನನಗೂ ಗಂಟಲು ಒತ್ತಿಕೊಂಡು ಬಂದಿತ್ತು. ವಾತ್ಸಲ್ಯವು ತುಂಬಿದ್ದ ಕಣ್ಣುಗಳಿಂದ ನಿಲೂಫರ್ ನನ್ನನ್ನು ನೋಡಿ, 'ಆದಾಬ್ ಮಾಮೂ' ಎಂದಂದಳು. ಕಿರುನಗೆಯನ್ನು ಹೂಡಿದಳು. 'ಆರ್ಕಿಟೆಕ್ಟ್ ಆಗಬೇಕಾದರೆ ವಿಜ್ಞಾನದ ಕಲಿಕೆಯೊಂದೇ ಸಾಲದು. ಸೌಂದರ್ಯವನ್ನು ಗುರುತಿಸಿ ಅದನ್ನು ಕಲ್ಲುಮಣ್ಣಿನಲ್ಲಿ ಸೆರೆಹಿಡಿಯಬೇಕು, ಆದ್ದರಿಂದಲೇ ಈ ವಿದ್ಯೆಯಲ್ಲಿ ಹೆಂಗಸರು ಪ್ರವರ್ಧಮಾನಕ್ಕೆ ಸುಲಭವಾಗಿ ಬರಬೇಕು. ಒಳ್ಳೆಯ ಕೆಲಸ ಮಾಡಿದೆ. ಮಗಳ ಇಚ್ಛೆಯಂತೆ ಓದನ್ನು ಮುಂದುವರೆಸಿದೆಯಲ್ಲಾ. ಸಂಪ್ರದಾಯಕ್ಕೆ ಶರಣಾಗಿ ಮದುವೆ ಮಾಡಿ ಮೂಲೆಯಲ್ಲಿ ಕೂರಿಸಲಿಲ್ಲವಲ್ಲ' ಎಂದು ನಾನೂ ಹೊಗಳಿದೆ.

ಒಳ ಅಂಗಳಕ್ಕೆ ಕರೆದುಕೊಂದು ಹೋದ. “ನಿನ್ನ ವಿಷಯದಲ್ಲಿ ಘೋಷಾ ಎಲ್ಲಿ ಬಂತೋ' ಎಂದು ಹೇಳುತ್ತಾ ಹೆಂಡತಿಯನ್ನು ಕರೆದು ಪರಿಚಯ ಮಾಡಿ ಕೊಟ್ಟ. ಇನ್ನಿಬ್ಬರು ಮಕ್ಕಳನ್ನೂ ಕರೆದು ಆದಾಬ್ ಮಾಡಿಸಿದ. ಅವೂ ೧೫- ೧೦ರ ಹೆಣ್ಣು ಮಕ್ಕಳು.

ಆತ್ಮೀಯವಾಗಿ ಅವನೊಡನೆ ಆ ಸಂಜೆಯನ್ನು ಕಳೆದು, ಆ ಮಕ್ಕಳೊಂದಿಗೆ ಆಟವಾಡಿ, ನಕ್ಕುನಲಿಸಿ ನಂತರ ಹಿಂತಿರುಗಿದೆ.

ಸಮೀಯುಲ್ಲಾಗೆ ವರ್ಗವಾಯಿತು ಎನ್ನುವುದನ್ನು ಪತ್ರಿಕೆಗಳಲ್ಲಿ ಕಂಡೆ. ತಿರುಗಿ ಎಂದು ಅವನನ್ನು ಕಾಣುವುದೋ ಎಂದು ಅನ್ನಿಸಿತು. ಸ್ವಲ್ಪ ಬೇಸರವೂ