ಮನಮಂಥನ
ಆಯಿತು. ಕೆಲಸದ ನೆಪದಿಂದಾಗಿ ಅವನನ್ನು ಪುನಃ ಭೇಟಿಯಾಗಿರಲಿಲ್ಲ. ಮುಂದಿನ ಭಾನುವಾರ ಅಂತ ಮುಂದಕ್ಕೆ ಹಾಕುತ್ತ ಬಂದಿದ್ದೆ. ಆದರೆ ಎರಡೇ ತಿಂಗಳುಗಳಲ್ಲಿ ವರ್ಗವಾಗಿತ್ತು.
ತಿರುಗಿ ಸಮೀಯುಲ್ಲಾನ ಕಂಡಿದ್ದು, ಅವನೇ ನನ್ನ ದವಾಖಾನೆಗೆ ಬಂದಾಗ: ಎರಡು ವರ್ಷಗಳಾದ ಮೇಲೆ, 'ಯಾವಾಗ ಬಂದೆ? ಇಲ್ಲಿಗೆ ಪುನಃ ವರ್ಗವಾಗಿದೆಯೆ ? ಏನು ಸಮಾಚಾರ?' ಎಂದು ವಿಚಾರಿಸಿದೆ. 'ನಿನ್ನ ಹತ್ತಿರ ಮಾತನಾಡುವುದು ತುಂಬಾ ಇದೆ. ಮನೆಗೆ ಬಂದು ಮಾತನಾಡುತ್ತೇನೆ, ಯಾವಾಗ ವಿರಾಮ ಹೇಳು' ಎಂದ. 'ಮಧ್ಯಾಹ್ನ ಒಂದರ ವೇಳೆಗೆ ಊಟಕ್ಕೆ ಹೋಗುತ್ತೇನೆ, ಆ ವೇಳೆಗೆ ನೀನೂ ಬಾ, ಜತೆಯಲ್ಲಿ ಊಟ ಮಾಡು. ಆಗ ಏನು ಬೇಕಾದರೂ ಮಾತನಾಡು. ನಿನ್ನ ಆರ್ಕಿಟೆಕ್ಟ್ ಮಗಳಿಗೆ ವಿರಾಮವಿದ್ದರೆ ಅವಳನ್ನೂ ಕರೆದು ಕೊಂಡು ಬಾ ತುಂಬಾ ಚೂಟಿ ಹುಡುಗಿ, ಅವಳ ಹತ್ತಿರ ಮಾತನಾಡಿದರೆ ಹಾಯ್ ಎನಿಸುತ್ತೆ' ಎಂದೆ.
'ಅವಳ ವಿಷಯವನ್ನು ಮಾತನಾಡುವುದಕ್ಕೆ ಬರೋದು, ಆದ್ದರಿಂದ ನಾನೊಬ್ಬನೇ ಬರೀನಿ. ಆಮೇಲೆ ನೀನು ಅವಳನ್ನು ನೋಡಬೇಕಾಗುತ್ತೆಯೇನೋ' ಎಂದ ಸಮೀಯುಲ್ಲಾ. ಸಾಮಾನ್ಯವಾಗಿ ಗಹಗಹಿಸುತ್ತಿದ್ದ ಅವ ಈಗ ಖಿನ್ನನಾದಂತಿತ್ತು. ಯಾವುದೋ ಆತಂಕದಿಂದ ನರಳುತ್ತಿದ್ದಂತಿತ್ತು. ಏನಾಗಿದೆಯೋ ಪಾಪ, ಎಂದಂದುಕೊಂಡೆ ಅವ ಹೊರಟು ಹೋಗುವಾಗ,
ಊಟಕ್ಕೆ ಕುಳಿತಾಗ ಹೇಳಿದ : 'ಏನು ಮಾಡಬೇಕೋ ಒಂದೂ ತಿಳಿಯುವುದಿಲ್ಲ. ನಿನ್ನ ಸಲಹೆ ಕೇಳಿ ನಂತರ ನಿರ್ಧರಿಸೋಣ ಅಂತ ಬಂದೆ, ಊಟ ಮುಗಿದ ಮೇಲೆ ಹೇಳೀನಿ. ಇಲ್ಲದೆ ಈಗ ಹೇಳಿದರೆ, ಬಡಿಸಿದ ಊಟವು ರುಚಿ ಬರದೇ ಇರಬಹುದು,' ಎಂದು. 'ಅಂತದೇನೂ ಆಗುಲ್ಲ, ಊಟ ಮಾಡುವಾಗಲೇ ಹೇಳು, ಮನಸ್ಸಿನ ಭಾರವಾದರೂ ಕಡಿಮೆಯಾಗುತ್ತೆ' ಅಂದೆ. ಮಾತನಾಡಲಾರಂಭಿಸಿದ, ಮಧ್ಯೆಮಧ್ಯೆ ತುತ್ತು ಉಣ್ಣುತ್ತಾ :
'ನಿಲೂಫರ್ ಅನ್ನು ನೋಡಿದ್ದೆಯಲ್ಲಪ್ಪಾ ! ಇಂಜಿನಿಯರಿಂಗ್ ಕಾಲೇಜು ಸೇರಿದ್ದಳು. ಹೆಚ್ಚು ಮಾತನಾಡದಿದ್ದರೂ, ಆಡಿದಾಗ ವಿನಯದಿಂದ ವೈನವಾಗಿ, ನುಡಿಯುತ್ತಿದ್ದಳು. ಓದಿನಲ್ಲಿ ಯಶಸ್ವಿಯಾಗಿದ್ದಳು. ಓದಿಸುವುದು ಬೇಡ, ಮದುವೆ ಮಾಡಿಬಿಡೋಣ ಅಂತ ಅವಳಮ್ಮ ಹೇಳಿದರೂ ನಾನು ಕೇಳಲಿಲ್ಲ. ಕಾಲೇಜಿಗೆ ಸೇರಿಸಿದೆ. ನನಗೆ ವರ್ಗವಾದಾಗ ನಿಲೂಫರನ್ನು ನಮ್ಮವರೇ ನಡೆಸುತ್ತಿರುವ ಉತ್ತಮ ಮಟ್ಟದ ಹಾಸ್ಟೆಲಿನಲ್ಲಿ ಸೇರಿಸಿದೆ. ಆಗಲೂ ನನ್ನ ಹೆಂಡತಿ, ಬೆಳೆದ