ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ಕಿಜೋಫ್ರೆನಿಯಾಗಳು

೨೩೯

ಹುಡುಗಿಯನ್ನ ಎಲ್ಲೆಲ್ಲೋ ಬಿಟ್ಟು ಓದಿಸುವುದು ಸರಿಯಲ್ಲ, ಓದಿ ಏನು ಉದ್ಧಾರ ಆಗಬೇಕು. ನಮ್ಮೊಂದಿಗೆ ಕರೆದುಕೊಂಡು ಹೋಗೋಣ. ಓದಿದ್ದು ಸಾಕು' ಎಂದು ಬಹಳ ಹೇಳಿದಳು. ನಾನೊಪ್ಪಲಿಲ್ಲ. 'ಹೀಗೆ ಏರ್ಪಾಡು ಮಾಡಿದ್ದೀನಿ, ನಿನ್ನ ಮುಂದಿನ ವ್ಯಾಸಂಗಕ್ಕೆ, ಇಷ್ಟವಿಲ್ಲದಿದ್ದರೆ ಹೇಳು, ಓದು ಸಾಕು ಎನಿಸಿದರೆ ನಮ್ಮೊಡನೆ ಬಂದುಬಿಡು. ಒಂದು ವರ್ಷದ ಓದು ಹಾಳಾಯಿತು ಅಂತ ಏನೂ ಅಂದುಕೊಳ್ಳಬೇಡ' ಎಂದು ಅವಳಿಗೆ ಹೇಳಿದೆ. ನೀವು ಹೇಳಿದಂತೆ ಆಗಲಿ ಎಂದಳೇ ವಿನಃ, ನನ್ನಿಷ್ಟ ಹೀಗೆ, ನನ್ನ ಕಷ್ಟ ಹಾಗೆ ಎಂದೇನನ್ನೂ ಹೇಳಲಿಲ್ಲ. ಹಾಸ್ಟಲಲ್ಲಿ ಬಿಟ್ಟು ಹೋದೆ. ಹಾಸ್ಟೆಲ್ ವಾರ್ಡ್‌ನ್‌ನಿಂದ ಮೂರು ತಿಂಗಳಾದ ಮೇಲೆ ಕಾಗದ ಬಂತು.' 'ಒಂದು ವಾರದಿಂದ ನಿಲೂಫರ್ ಕಾಲೇಜಿಗೆ ಹೋಗುತ್ತಿಲ್ಲ. ಡಾಕ್ಟರ್ ಅನ್ನು ಕರೆಸಲೇ, ಮೈ ಜಡ್ಡಾಗಿದೆಯೇ ಅಂದರೆ, ಏನೂ ಬೇಡ, ಒಂದೂ ಇಲ್ಲ ಎಂದು ಸಿಡುಕುತ್ತಾಳೆ. ಊಟವನ್ನು ಸರಿಯಾಗಿ ಮಾಡುತ್ತಿಲ್ಲ. ನೀವು ಬಂದು ಕರೆದುಕೊಂಡು ಹೋಗಿ, ಸರಿಯಾದ ಶುಶೂಷೆಯನ್ನು ಮಾಡುವುದಕ್ಕೆ ನಮಗೆ ಸಾಧ್ಯವಿಲ್ಲ. ನಲವತ್ತು ಜನ ಹುಡುಗಿಯರಿದ್ದಾರೆ. ನಾನೊಬ್ಬಳೇ ನೋಡಿಕೊಳ್ಳಬೇಕು' ಎಂದು ಬರೆದಿದ್ದಳು.

ನಮಗೆಲ್ಲಾ ಗಾಬರಿಯಾಯಿತು. ನಿಂತಕಾಲಲ್ಲೇ ಇಲ್ಲಿಗೆ ಬಂದು ಹಾಸ್ಟೆಲಿಗೆ ಹೋದೆ. ನನ್ನನ್ನು ಕಂಡಾಗ 'ದಾದಾ ಚೆನ್ನಾಗಿದಿಯಾ? ಯಾವಾಗ ಬಂದೆ.' ಎಂದು ಕೇಳಲಿಲ್ಲ, ಸುಮ್ಮನೆ ನನ್ನ ಮುಖವನ್ನು ನೋಡುತ್ತಿದ್ದಳು. 'ಚೆನ್ನಾಗಿದೀಯಾ? ಕಾಲೇಜಿಗೆ ಹೋಗಲಿಲ್ಲವಂತೆ, ಏನು ಕಾಯಿಲೆಯಾಗಿದೆ ; ಅಥವಾ ಕಾಲೇಜಿನಲ್ಲಿ ಯಾರಾದರೂ ಕೀಟಲೆ ಮಾಡಿದರೇ?' ಎಂದು ಕೇಳಿದೆ. ಬೆಪ್ಪು ಬಡಿದಂತಿದ್ದ ಅವಳ ಮುಖವನ್ನು ನೋಡಿ ನನಗೆ ಗಾಬರಿಯಾಗಿತ್ತು. ದೆವ್ವಭೂತವನ್ನು ಕಂಡು ಹೆದರಿದವರಂತಿದ್ದಳು. ಯಾವ ಉತ್ತರವನ್ನೂ ಕೊಡಲಿಲ್ಲ. ಅವಳನ್ನು ಮನೆಗೆ ಕರೆದುಕೊಂಡು ಹೋದೆ. ತೌರಿಗೆ ಬಂದ ಮೇಲೆ ಕೂಡ ಗೆಲುವಾಗಲಿಲ್ಲ. “ಯಾವುದೋ ಭೂತ ಹಿಡಿದುಕೊಂಡಿದೆ. ಎಲ್ಲೆಲ್ಲೋ ಹಸಿ ಮೈಯ್ಯನ ಹುಡುಗಿಯನ್ನು ಬಿಟ್ಟು ಬಂದರೆ ಇನ್ನೇನಾಗುತ್ತೆ' ಅಂತ ನನ್ನ ಹೆಂಡತಿ ರೇಗಿದಳು. ಭೂತ ಬಿಡಿಸುವುದಕ್ಕೆ ಮೌಲ್ವಿಯನ್ನು ಕರೆಸಿ ಏರ್ಪಾಡು ಮಾಡಿದಳು. ಭೂತ ಬಿಡಿಸುವ ಕ್ರಮವನ್ನು ಯಾರು ನೋಡಿದರೂ ಹೆದರಬೇಕು, ಆದರೆ ನಿಲೂಫರ್ ಉದಾಸೀನಳಾಗಿಯೇ ಇದ್ದಳು. ಬೇವಿನಸೊಪ್ಪಿನ ಬರಲಿಂದ ಬಾರಿಸಿದಾಗಲೂ ಸ್ವಲ್ಪಹೊತ್ತು ಸುಮ್ಮಗಿದ್ದಳು. ನಂತರ ರೇಗಾಡಿದಳು, ಯಾವುದಕ್ಕೂ ಭಯ ಬಿದ್ದಂತೆ ಕಾಣಿಸಲಿಲ್ಲ. ಆಮೇಲೆ ಒಂದೆರಡು ವಾರ ಎಲ್ಲರೊಂದಿಗೂ ಒಂದೆರಡು