ಮನಮಂಥನ
ಅಪಾಯದಿಂದ ದೂರ ಓಡಿಹೋಗುವುದು, ಆರೀತಿ ಅಪಾಯವನ್ನು ನಿವಾರಿಸಿಕೊಳ್ಳುವುದು. ಪ್ರಾಣಿಗಳಲ್ಲಿ ದೇಹಕ್ಕೆ ಆಪಾಯವು ಉಂಟಾಗುತ್ತದೆ ಎಂದಾಗ ಪ್ರಾಣ ಭಯವು ಓಡು ಅಥವಾ ಹೋರಾಡು, ಎಂಬ ಎರಡು ಉಪಾಯಗಳಲ್ಲಿ ಒಂದನ್ನು ಸೂಚಿಸುತ್ತದೆ.
ಮಾನವ ಹಂತದಲ್ಲಿ, ದೇಹಕ್ಕಿಂತಲೂ ಮನಸ್ಸಿಗೆ ಹೆಚ್ಚು ಪ್ರಾಧಾನ್ಯವಿದೆ. ಮನಸ್ಸಿಗೆ ಅಪಾಯ ಬರುವುದು ಎಂದರೆ ಏನು ? ಯಾವುದಾದರೂ ಸಮಸ್ಯೆಯು ತಲೆದೋರಿದಾಗ, ಆಗುಹೋಗುಗಳನ್ನು ವಿಚಾರಮಾಡಿ ಗಮನಿಸಿ ಸೂಕ್ತ ನಿರ್ಧಾರವನ್ನು ಮಾಡುವುದು ಮನಸ್ಸಿನ ಕೆಲಸ. ಹೀಗೆ ನಿರ್ಧರಿಸಬೇಕಾದ, ಹೀಗೆ ಮಾಡಿದರೆ ಅನಾಹುತವೇನಾಗುತ್ತೋ ; ಹಾಗೆ ಮಾಡಿದರೆ ಯಾವ ಕಷ್ಟ ಬರುತ್ತೋ ಎಂದು ಅನುಮಾನವು ಬರುವುದು ಸಹಜ. ಆಗ ಏನಾದರೂ ಆಗಲಿ ; ಹೀಗೇ ಮಾಡುತ್ತೇನೆ, ಬಂದುದನ್ನು ಅನುಭವಿಸುತ್ತೇನೆ, ಎಂದು ಧೈರ್ಯಮಾಡಿ ಮುನ್ನುಗ್ಗುವುದು ಸಾಮಾನ್ಯ ನಡವಳಿಕೆ, ಮನಸ್ಸು ಸುದೃಢವಾಗಿರದೆ ಇದ್ದರೆ, ಆಗ ಅದು ಎದುರಿಸಿ ಹೋರಾಡುವ ಸ್ಥಿತಿಯಲ್ಲಿರುವುದಿಲ್ಲ. ಆಗ ವಾಸ್ತವಿಕ ಪರಿಸ್ಥಿತಿಯಿಂದ ಮನಸ್ಸು ಓಡಿಹೋಗುತ್ತದೆ ಅದೇ ಅಮ್ಮಿಸಿಯಾ,ಫ್ಯೂಗ್ಯೂ.
ಕಾಡುಮೃಗಗಳು ದೇಹದ ನಡವಳಿಕೆಯಲ್ಲಿ ಪ್ರದರ್ಶಿಸುವ ರೀತಿಯನ್ನು, ನಾಡ ಮನುಷ್ಯರು ಮನಸ್ಸಿನ ನಡವಳಿಕೆಯಲ್ಲಿ ಅನುಸರಿಸುತ್ತಾರೆ.
ಶೀನಪ್ಪನ ಮನಸ್ಸು, ಯಾವ ಸಮಸ್ಯೆಯ ಪರಿಹಾರಕ್ಕಾಗಿ, ಮಂಥನವನ್ನು ಮಾಡುತ್ತಿತ್ತೋ, ಆ ಸಮಸ್ಯೆಯ ಮನದಾಳದಲ್ಲಿರುವ ಬೇರು ಬುಡಗಳನ್ನು ಶೀನಪ್ಪನೂ ತಿಳಿದಿರಲಿಲ್ಲ. ಮನೆಯವರಿಗಾಗಲೀ, ಸ್ನೇಹಿತರಿಗಾಗಲಿ ತಿಳಿಯಲು ಅಸಾಧ್ಯ. ಪ್ರತಿ ವ್ಯಕ್ತಿಯ ಮನಸ್ಪೂ ಅತಿ ಗುಪ್ತವಾದ, ಭದ್ರವಾದ ಕೋಟೆ. ಆ ಕೋಟೆಯಲ್ಲಿರುವ ಸುರಂಗ ಮಾರ್ಗಗಳಾಗಲೀ ಗುಪ್ತ ಕೊಠಡಿಗಳಾಗಲೀ, ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಅಂದ ಮೇಲೆ ಆ ಕೋಟೆಗೆ ಲಗ್ಗೆ ಹಾಕಿ ಎಲ್ಲವನ್ನೂ ತಿಳಿಯುವುದು ದುಸ್ಸಾಧ್ಯ.
ಮನಮಂಥನವನ್ನು ಸೀನಪ್ಪ ಮಾಡಿದಾಗ, ಹೋರಾಡಿ ಗೆಲ್ಲುವ ನಿರ್ಣಯವನ್ನು ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅವನ ಮನಸ್ಸು ದೃಢವಾಗಿರಲಿಲ್ಲ ; ಇನ್ನೂ ಮಕ್ಕಳ ಮನಸ್ಸಿನಂತೆಯೇ ವಯಸ್ಸಾದರೂ ಉಳಿದಿತ್ತು. ಆದಕಾರಣ ವಾಸ್ತವಿಕ ಪರಿಸ್ಥಿತಿಯಿಂದ ದೂರ ಓಡಿಹೋಯಿತು. ಕೆಲಕಾಲಾನಂತರ ಹಿಂದೆ ಕಾಡುತ್ತಿದ್ದ ಸಮಸ್ಯೆಯು, ತೀವ್ರತೆಯನ್ನು ಸ್ವಾಭಾವಿಕವಾಗಿ, ಕಾಲಾನುಕಾಲದಲ್ಲಿ