ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೪

ಮನಮಂಥನ

ಅಂದರೆ ಮೆದುಳಿನ ಶಿಥಿಲತೆಯಿಂದ ಮುಪ್ಪಿಗರಲ್ಲಿ ಸಂಭವಿಸುವ ಮಾನಸಿಕ ಪಲ್ಲಟಕ್ಕೆ ಉಪಶಮನವನ್ನು ಮಾಡಬಹುದೇ ವಿನಹಾ ಸಫಲ ಚಿಕಿತ್ಸೆಯನ್ನಲ್ಲ. ಸಂಪಂಗಿರಾಮಯ್ಯನವರು ಮಾನಸಿಕ ಆಸ್ಪತ್ರೆಯಲ್ಲಿ ಒಂದೆರಡು ತಿಂಗಳು ಇದ್ದರು. ನಂತರ ತೀರಿಕೊಂಡರು.

ಚಿಕ್ಕಪಾಪಯ್ಯನವರ ಬಾಳೂ ಮುಪ್ಪಿನಲ್ಲಿ ವಿಚಿತ್ರವಾಯಿತು. ಪೇಟೆಯಲ್ಲಿ ಅವರು ಮುಖ್ಯಸ್ಥರಾಗಿದ್ದರು. ಶ್ರೀಮಂತರು, ದೊಡ್ಡ ಪ್ರಮಾಣದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದರು. ಪೇಟೆಯ ಆಂಜನೇಯನ ಗುಡಿಯ ಧರ್ಮದರ್ಶಿಗಳಾಗಿದ್ದರು. ಬಹಳ ಭಕ್ತಿಯಿಂದ ದೇವಸ್ಥಾನದ ಕೈಂಕರ್ಯ ಮತ್ತು ಪೂಜಾದಿಗಳನ್ನು ಏರ್ಪಡಿಸುತ್ತಿದ್ದರು. ತುಂಬಿದ ಮನೆ, ಆದರದ ಸ್ವಭಾವ, ಶ್ರೀಮಂತರಾಗಿದ್ದರೂ ಬಿಡುಗೈ ದೊರೆ.

ಅರವತ್ತರ ಸುಮಾರಿಗೆ ಮಧುಮೂತ್ರದ ಬೇನೆ ಇರುವುದು ತಿಳಿಯಬಂತು. ಇನ್ದ್ರಕ್ಷನ್ನುಗಳನ್ನು ತೆಗೆದುಕೊಂಡರೂ, ಪಥ್ಯವಿರುವುದು ಅವರಿಗೆ ಸಾಧ್ಯವಾಗಲಿಲ್ಲ. ಜತೆಗೆ ರಕ್ತದ ಒತ್ತಡವೂ ಹೆಚ್ಚಾಯಿತು. ಎಷ್ಟೋ ಜನ ಮುದುಕರಲ್ಲಿ ಇವೆರಡೂ ಬೇನೆಗಳೂ ಒಟ್ಟೋಟ್ಟಿಗೆ ಕಾಣಿಸಿಕೊಳ್ಳುತ್ತವೆ. ಹಾಗೂ ಹೀಗೂ ಒದ್ದಾಡಿಕೊಂಡು ತಮ್ಮ ಕೆಲಸವನ್ನು ಸಾಕಷ್ಟು ಪರಿಣಾಮಕಾರಿಯಾಗಿ ನಡೆಸಿಕೊಂಡಿರುತ್ತಾರೆ. ಆದರೆ ಚಿಕ್ಕಪಾಪಯ್ಯನವರಂತಹ ಕೆಲವರಲ್ಲಿ ಈ ಬೇನೆಗಳ ಜತೆಗೆ, ಮೆದುಳಿನ ಶಿಥಿಲತೆಯೂ ಕಾಣಿಸಿಕೊಳ್ಳುತ್ತದೆ.

ದೈವಭಕ್ತರೂ ಧಾರ್ಮಿಕರೂ ಆಗಿದ್ದ ಚಿಕ್ಕಪಾಪಯ್ಯನವರು ಅರವತ್ತ ಮೂರರ ವಯಸ್ಸಿನಲ್ಲಿ ಬಿಳಿಮೀಸೆಗೆ ಕರಿಬಣ್ಣವನ್ನು ಹಚ್ಚಲಾರಂಭಿಸಿದರು. ಬಿಳಿರುಮಾಲನ್ನು ಕಟ್ಟುತ್ತಿದ್ದವರು, ಈಗೀಗ ಜರಿ ರುಮಾಲಿಗೆ ಮಾರುಹೋದರು. ಕೆರೆ ಏರಿಯ ಬಳಿಯಿದ್ದ ನಾಗಾಸಾನಿಯ ಮನೆಗೆ ಮೇಲಿಂದ ಮೇಲೆ ಹೋಗಲಾರಂಭಿಸಿದರು. ಕಿಟ್ಟಪ್ಪನ ಗೆಳೆತನವೂ ಆಯಿತು. ಅವನಲ್ಲಿ ನಂಬಿಕೆಯೂ ಹುಟ್ಟಿತು. ಊರಿನಲ್ಲೆಲ್ಲಾ ಕಿಟ್ಟಪ್ಪ ಸುಪ್ರಸಿದ್ಧನಾಗಿದ್ದ. ಹತ್ತಾರು ಹೆಣ್ಣುಮಕ್ಕಳ ಯೋಗಕ್ಷೇಮವನ್ನು ಅವ ನೋಡಿಕೊಳ್ಳುತ್ತಿದ್ದ. ಅದಕ್ಕಾಗಿ ಚಿಕ್ಕಪಾಪಯ್ಯನವರ ಭೋಗ ಕ್ಷೇಮವನ್ನೂ ವಹಿಸಿಕೊಂಡ. ಚಿಕ್ಕಪಾಪಯ್ಯನವರೂ ಬಲೆಗೆ ಬಿದ್ದರು.

ಮಂಡಿಗೆ ಹೋಗಿ ವ್ಯಾಪಾರದ ಉಸ್ತುವಾರಿಯನ್ನು ವೈನವಾಗಿ ನಡೆಸುತ್ತಿದ್ದರು, ಚಿಕ್ಕಪಾಪಯ್ಯನವರು. ಆದರೆ ಖರ್ಚು ಮಾತ್ರ ವಿಪರೀತವಾಗತೊಡಗಿತು. ಸೆರಗಿನಲ್ಲಿ ಹಣವನ್ನು ಕೇರತೊಡಗಿದರೆ, ಮಣ್ಣು ಧೂಳು ಮಾತ್ರ ಉಳಿಯುತ್ತದೆ. ಚಿಕ್ಕಪಾಪಯ್ಯನವರ ವಿಚಿತ್ರ ವರ್ತನೆಯಿಂದ