ಆದರೆ ಹೆಚ್ಚು ಮಕ್ಕಳಾಗದಂತೆ ಎಚ್ಚರವಹಿಸುವುದು ಒಳ್ಳೆಯದು.
ಬಹು ಪಾಲು ಮೂವತ್ತರ ಪ್ರಾಯವು ಮೀರಿದ ಮೇಲೆ ಜೋ ಬೇನೆಯು ಕಾಣಿಸಿಕೊಳ್ಳುತ್ತದೆ. ಆ ವೇಳೆಗೆ ಮದುವೆಯಾಗಿ, ಮಕ್ಕಳೂ ಆಗಿರುತ್ತದೆ, ನಮ್ಮ ಸಮಾಜದಲ್ಲಿ, ಅಂದಮೇಲೆ ನಮ್ಮಲ್ಲಿ ಮುಂಜಾಗ್ರತಾ ಕ್ರಮಗಳಲ್ಲೊಂದಾದ, ಮದುವೆಯ ಸಲಹೆಯು, ಸುಮಾರುಪಾಲು ನಿಷ್ಟ್ರಯೋಜಕ.
ಅದೂ ಅಲ್ಲದೆ ದೇವರು ಎಂದು ಶೈಶವದಿಂದಲೂ ಕೇಳಿಸಿಕೊಳ್ಳುವ ನಮ್ಮ ಸಮಾಜದಲ್ಲಿ, ಇನ್ನೊಂದು ವಿಚಿತ್ರವನ್ನೂ ಕಾಣುತ್ತೇವೆ. ಪ್ರೌಢ ವಿದ್ಯಾಭ್ಯಾಸವನ್ನು ಮಾಡಿದ ಈ ತರುಣನಿಗೆ ಜೋದ ಚಿಹ್ನೆಗಳಿವೆ. ಇವನಿಗೆ ಕೆಲಕಾಲವಾದರೂ ಮದುವೆಯನ್ನು ಮಾಡಬಾರದು ಎಂದು ಮನೋವೈದ್ಯರು ಒತ್ತಿ ಹೇಳಿರುತ್ತಾರೆ. 'ಹುಚ್ಚು ಬಿಟ್ಟ ಹೊರತು ಹೆಣ್ಣು ಕೊಡುವುದಿಲ್ಲ ; ಹೆಣ್ಣು ಕೊಟ್ಟ ಹೊರತು ಹುಚ್ಚು ಬಿಡುವುದಿಲ್ಲ' ಎಂಬ ಗಾದೆಯನ್ನು ಡಾಕ್ಟರು ಕೇಳಿಯೇ ಇಲ್ಲವೇನೋ ? ಎಂದು ಡಾಕ್ಟರನ್ನು ಮೂದಲಿಸಿ, ಆ ತರುಣನಿಗೆ ಮದುವೆಯನ್ನು ಮಾಡಿ ಬಿಡುತ್ತಾರೆ. ಸಂಸಾರದ ಮೊದಲು ಕೆಲವು ವರ್ಷಗಳು ಅಡ್ಡಾದಿಡ್ಡಿಯಾದರೂ, ನಂತರ ತಕ್ಕಮಟ್ಟಿಗೆ ಸುಖವಾಗಿಯೇ ಇರುತ್ತಾರೆ, ಆ ದಂಪತಿಗಳು. ಇದನ್ನು ಸಾಕ್ಷಾತ್ತಾಗಿ ಕಂಡ ಯಾವ ವೈದ್ಯನೂ, ವಿವಾಹವನ್ನು ಮುಂದಕ್ಕೆ ತಳ್ಳಿ ಎಂದು ತಾನು ಕೊಡಬೇಕಾದ ಸಲಹೆಯನ್ನು ಒತ್ತಾಯಪಡಿಸುವುದಿಲ್ಲ. ಪಾಶ್ಚಾತ್ಯ ಸಮಾಜಗಳಲ್ಲಿ ಇಂತಹ ಸಲಹೆಯನ್ನು ಒತ್ತಿ ಹೇಳಬೇಕು. ಆದರೆ ನಮ್ಮ ಸಂಸ್ಕೃತಿಯ ಸಮಾಜದಲ್ಲಿ, ಒತ್ತಾಯಪಡಿಸಬೇಕಾಗಿಲ್ಲ. ದೇವರಲ್ಲಿನ ಶೈಶವದಿಂದ ರೂಢಿಸಲ್ಪಟ್ಟ ನಂಬಿಕೆಯೇ ಇಂತಹ ಉತ್ತಮ ಫಲಿತಾಂಶಕ್ಕೆ ಕಾರಣವೇ? ಎಂಬುದನ್ನು ಮನೋವಿಜ್ಞಾನಿಗಳು ಸಂಶೋಧಿಸಬೇಕು.
ಇನ್ನೂ ಒಂದು ತೊಂದರೆಯಿದೆ, ನಮ್ಮ ಸಮಾಜದಲ್ಲಿ, ಜೋ ತರಹ ಬೇನೆ ಯಾವುದು? ಮ್ಯಾನಿಕ್ ಡಿಪ್ರೆಸಿವ್ ಸೈಕೋಸಿಸ್ ಯಾವುದು ಎಂದು ಜನ ಸಾಮಾನ್ಯರಿಗೆ ತಿಳಿಯುವುದಿಲ್ಲ. ಹುಚ್ಚು ಬೆಪ್ಪು ಶಿವಲೀಲೆ ಎಂದು ನಮ್ಮ ಜನತೆ ಮಾನಸಿಕ ಬೇನೆಗಳನ್ನು ವಿಂಗಡಿಸುತ್ತಾರೆ. ಅವರ ಪಾಲಿಗೆ ಹುಚ್ಚು ಎಂದರೆ ಒಂದೇ ಗುಂಪು, ಹಾಗಾಗಿ ಆನುವಂಶಿಕ ಪ್ರವೃತ್ತಿಯು ಸ್ಪಷ್ಟವಾಗಿರದೆ ಇರುವ ಇತರ ಮಾನಸಿಕ ಬೇನೆಗಳವರನ್ನೂ, ವಿವಾಹಕ್ಕೆ ಅಸಾಧು ಎಂದು ತಳ್ಳಿ ಹಾಕುತ್ತಾರೆ. ಇದರಿಂದ ಸುಮಾರು ತೊಂದರೆಯೂ, ನಿವಾರಿಸಬಹುದಾದ ಕಷ್ಟ ಸಂಕಟಗಳೂ ಉಂಟಾಗುತ್ತವೆ. ಜನತೆಯು ಈ ವಿಷಯದಲ್ಲಿ ಎಚ್ಚರಗೊಳ್ಳಬೇಕಾದರೆ, ಅವರಿಗೆ ಆ ವಿಷಯದ ತಿಳುವಳಿಕೆಯೂ ಕಲಿಸಲ್ಪಡಬೇಕು. ಅಥವಾ ಅನುಮಾನ ಬಂದಾಗ