ಮನಮಂಥನ
ಇದು ಬೇಡ ಎಂದು ತಾವೇ ನಿರ್ಧರಿಸುವ ಮೊದಲು ಮನೋವೈದ್ಯರಲ್ಲಿ ಅಗತ್ಯವಾದ ಸಲಹೆಯನ್ನು ಪಡೆಯಬೇಕು.
ಮಾನಸಿಕ ಬೇನೆಯು ಒಂದು ಕಳಂಕ ಎಂದೆಂಬ ನಂಬಿಕೆಯು ನಮ್ಮಲ್ಲಿ ಇನ್ನೂ ಉಳಿದಿದೆ. ಆದರೆ ನಮ್ಮ ಸಮಾಜವು, ಬಹು ಕಾಲದಿಂದ ಕೆಲವು ಮಾನಸಿಕ ಬೇನೆಗಳನ್ನು ದೆವ್ವ ಹಿಡಿದಿದೆ, ಅವನಿಗೆ' ; 'ಮೋಹಿನಿ ಬಡಿದಿದೆ' ;
- ಸವತಿಕಾಟ ಅವಳಿಗೆ' ; 'ಕೊಳ್ಳಿ ಪಿಶಾಚಿ ಅವಳ ಹೊಟ್ಟೆಯನ್ನು ಹೊಕ್ಕಿದೆ'
ಎಂದು ಹೆಸರಿಡುತ್ತಿದ್ದರು. ಪಂಜುರ್ಲಿ ಭೂತವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಡಿಸಿದರೆ, ಕುಟ್ಟಿಚಾತನ್ನನ್ನು ಕೇರಳದಲ್ಲಿ ದಿಗ್ಧಂಧಿಸುತ್ತಿದ್ದರು.
ದೆವ್ವ ಹಿಡಿದರೆ ಕಳಂಕವೇನೂ ಅಲ್ಲ ಎಂದು ನಂಬಿಕೆಯೂ ಮೂಡಿತ್ತು.
ನಮ್ಮ ಸಮಾಜದ ನಂಬಿಕೆಗಳನ್ನು ಮನೋವೈದ್ಯರೂ ಬಳಸಿಕೊಂಡು
'ಇದು ಮಾನಸಿಕ ಬೇನೆಯಲ್ಲ-ಕೇವಲ ಭೂತದ ಕಾಟ, ಪಿಶಾಚಿಯ ಆಟ ಇದನ್ನು ನಾವೂ ದಿಗ್ಧಂಧಿಸಬಲ್ಲೆವು ಈ ರೀತಿಯಲ್ಲಿ' ಎಂದು ಹೇಳಿ ತಾವು ಎಂದಿನಂತೆ ಮಾಡುವ ಚಿಕಿತ್ಸೆಯನ್ನೇ ಪರಿಣಾಮಕಾರಿಯಾಗಿ ಮಾಡಬಹುದು. ಆಗ ಸಮಾಜದಲ್ಲಿ 'ಕಳಂಕ'ದ ಸೊಲ್ಲು ಏಳುವುದಿಲ್ಲ. ಮನೋವಿಜ್ಞಾನಿಗಳು ಈ ಕ್ರಮವನ್ನು ಆಚರಿಸುವುದು ಅಷ್ಟು ಸುಲಭವಲ್ಲ ; ಅವರು ಅಭ್ಯಾಸಿಸುವ ಸಂಸ್ಥೆಗಳೇ ಇದಕ್ಕೆ ಅಡಚಣೆಯಾಗುತ್ತದೆ. ಆದರೆ ಮನೆಯ ವೈದ್ಯರುಗಳು ಈ ಉಪಾಯವನ್ನು ಸುಲಭವಾಗಿ ಆಚರಿಸಿ, ತಟ್ಟಬಹುದಾದ ಕಳಂಕವನ್ನು ನಿವಾರಿಸಬಹುದು.
೨. ಮಾನಸಿಕ ಬೇನೆಗಳ ಮೊದಲ ಹಂತವನ್ನು ಗುರುತಿಸುವುದು :
ಮೊದಮೊದಲ ಹಂತದಲ್ಲಿ ಮಾನಸಿಕ ಬೇನೆಗಳನ್ನು ಗುರುತಿಸಿದರೆ, ಅವುಗಳನ್ನು ಗುಣಪಡಿಸುವುದು ಹೆಚ್ಚು ಸುಲಭ. ಮೊದಲ ಹಂತದಲ್ಲಿ ಗುರುತಿಸಬೇಕಾದರೆ, ಮನೆಯಲ್ಲಿರುವ ಜನರಿಗೆ, ಶಾಲೆಯಲ್ಲಿರುವ ಮಂದಿಗೆ, ಈ ಬೇನೆಗಳ ಸ್ವರೂಪವು ತಿಳಿದಿರಬೇಕು. ವಿಷಯವು ತಿಳಿದಿದ್ದಾಗ ಮಾತ್ರ ಅದನ್ನು ಗುರುತಿಸಲು ಸಾಧ್ಯ. ಬೇನೆಗಳ ಸ್ವರೂಪವು ಎಲ್ಲರಿಗೂ ತಿಳಿಯಲಿ ಎಂದೇ ಈ ಪುಸ್ತಕವನ್ನು ಬರೆದಿರುವುದು. ಚಿಕಿತ್ಸಾ ವಿಧಾನಗಳಲ್ಲಿ ಜ್ಞಾನ ಪ್ರಸಾರವೂ ಮುಖ್ಯವಾದ ಒಂದು ಅಂಶ.
೩. ಹಿರಿಯ ಮನೋವಿಜ್ಞಾನಿಯಾದ Jung ಎಂಬುವನು ಈ ರೀತಿ ಒಂದೆಡೆ ಹೇಳಿದ್ದಾನೆ :
"People are groping for some system of religious belief".