ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಚಿಕಿತ್ಸಾಕ್ರಮಗಳು

೨೫೯

Mayer gross ಎಂಬ ಪ್ರಸಿದ್ಧ ಮನೋವೈದ್ಯನು ಒಂದು ಕಡೆ ಹೇಳಿದ್ದಾನೆ.

"Freudian Analysis will do for some, what Religious Conversion will do for others"

ಈ ಎರಡು ಅರ್ಥಗರ್ಭಿತ ವಾಕ್ಯಗಳನ್ನು ಏಕೆ ಉದ್ಧರಿಸಿದ್ದೇನೆ ಎಂದರೆ, ಹಲವಾರು ತೆರನ ಮಾನಸಿಕ ತಳಮಳಗಳು ದೇವರು, ದಿಂಡರು ; ಮತ ವ್ರತ; ಪೂಜೆ ಪುನಸ್ಕಾರ ಇತ್ಯಾದಿ ಆಚರಣೆಗಳಿಂದ ಸಾಕಷ್ಟು ಸಮಾಧಾನವನ್ನು ಹೊಂದುತ್ತವೆ. 'ಇವೆಲ್ಲವೂ ಮೂಢನಂಬಿಕೆಗಳು. ದೇವರು ಇದ್ದದ್ದೇ ಆದರೆ, ಈ ಬೇನೆಯನ್ನು ಯಾಕೆ ಕೊಡಬೇಕಾಗಿತ್ತು? ನಂತರ ಅವನೆದುರಿಗೆ ತೆಂಗಿನಕಾಯಿ ಒಡೆದರೆ ವಾಸಿಮಾಡುತ್ತಾನೋ? ಎಂದು ಪದವೀಧರರು ಎನಿಸಿಕೊಂಡವರು ನಗೆಯಾಡುತ್ತಾರೆ ದಿಟ. ಆದರೆ ಇದು ಅವರುಗಳ ಮೌಡ್ಯವನ್ನು ಮುಂದು ಮಾಡಿ ತೋರಿಸುತ್ತದೆಯೇ ವಿನಃ ಅವರ ವೈಜ್ಞಾನಿಕ ಅರಿವನ್ನಲ್ಲ.

ಮಾನಸಿಕ ತಳಮಳವು ಒಬ್ಬನಿಗೆ ಉಂಟಾಗಿದೆ ಎನ್ನೋಣ. ಅವನ ನಡವಳಿಕೆಯನ್ನು ಕಂಡವರು 'ಇವನಿಗೆ ಭೂತ ಹಿಡಿದಿದೆ ಅಥವಾ ದೆವ್ವ ಬಡಿದಿದೆ' ಎಂದನ್ನಬಹುದು. ದೆವ್ವ, ಭೂತ ಅಂಥ ಯಾರು ಅನ್ನುತ್ತಾರೆಯೋ ಅವರುಗಳು ದೇವರುದಿಂಡಿರು ಭೂತವನ್ನು ಓಡಿಸುತ್ತಾರೆ, ದೆವ್ವವನ್ನು ಉಚ್ಚಾಟಣೆ ಮಾಡುತ್ತಾರೆ ಎಂದೂ ನಂಬುತ್ತಾರೆ. ಅಂತಹವರು ದೇವರು, ವ್ರತ, ಪೂಜೆ, ಇತ್ಯಾದಿಗಳಿಂದ ತಮ್ಮ ಮಾನಸಿಕ ತಳಮಳವನ್ನು ಗುಣಪಡಿಸಿಕೊಳ್ಳುತ್ತಾರೆ. ರೋಗಿಗಳಿಗೆ ಸ್ವಾಸ್ಥ್ಯ ಉಂಟಾಗುವುದು ಮುಖ್ಯವೇ ಹೊರತು, ದೇವರು ಇದ್ದಾನೆಯೇ, ಭೂತಗಳು ಇವೆಯೇ ಎಂಬ ಪ್ರಶ್ನೆಯು ಈ ವಿಷಯದಲ್ಲಿ ಅಪ್ರಕೃತ, ಅಸಂಗತ. ಕೆಲವು ಮಾನಸಿಕ ರೋಗಿಗಳಿಗೆ ಪೂಜೆ, ವ್ರತಗಳು ಸಮಾಧಾನವನ್ನು ತಂದಿರುವುದು ಎಲ್ಲರ ಅನುಭವಕ್ಕೂ ಎಂದಾದರೂ ಬಂದೇ ಇರುತ್ತದೆ. ಆದಕಾರಣ, ಇದು ಹೇಗೆ ಸಾಧ್ಯವಾಯಿತು ಎಂದು ಸಂಶೋಧನೆ ನಡೆಸಬೇಕು. ಇದು ಮೂಢನಂಬಿಕೆ ಎಂದು ಅಲ್ಲಗಳೆಯುವುದು ಭಯಂಕರ ಮೌಡ್ಯತನ !

Jung ಮತ್ತು Mayer-Gross ಅವರುಗಳು ಈ ರೀತಿಯ ಸಂಶೋಧನೆಯಲ್ಲಿ ತೊಡಗಿದವರು. ಸಂಪೂರ್ಣವಾಗಿ ವಿವರಗಳನ್ನು ಹೊರಗೆಡವಲು ಸಾಧ್ಯವಾಗಿಲ್ಲ. ಆದರೂ ಪಕ್ವವಾದ ಹಾಗೂ ವಿಶಾಲವಾದ ಅನುಭವದಿಂದ ಮೇಲೆ ಉದ್ಧರಿಸುವ ಮಾತುಗಳನ್ನು ಹೇಳಿದ್ದಾರೆ. ಬಹಳಷ್ಟು ಅರ್ಥಗರ್ಭಿತವಾದ ವಾಕ್ಯಗಳು.

ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದಿರುವ ನಮ್ಮ ಸಮಾಜದ ಮಾನಸಿಕ