೨೬೧
ಇದನ್ನೂ ಮುಂಜಾಗ್ರತಾ ಕ್ರಮ ಎನ್ನಬೇಕು. ಏಕೆಂದರೆ, ಮಾನಸಿಕ ತಳಮಳವು ತನ್ನಷ್ಟಕ್ಕೆ ತಾನೇ ಸ್ವಾಭಾವಿಕವಾಗಿ ಸರಿಹೋಗುವಂತಿರುವಾಗ ಉಳಿದವರು ಎಂದರೆ ವೈದ್ಯರುಗಳು ಕೂಡ, ತೆಪ್ಪಗಿರಬೇಕು. ಸಾಧ್ಯವಾದರೆ, ಸ್ವಾಭಾವಿಕವಾಗಿ ನಡೆಯುತ್ತಿರುವ ಆಚರಣೆಗಳಿಗೆ ಸಹಾಯವನ್ನು ಮಾಡಬೇಕು. ಅದು ಬಿಟ್ಟು, ಸ್ವಾಭಾವಿಕವಾಗಿ ನಡೆಯುವ ಸಮಾಧಾನಪಡಿಸುವ ಕಾವ್ಯಗಳಿಗೆ ಆಡಚಣೆಯನ್ನುಂಟುಮಾಡಿದರೆ, ಮಾನಸಿಕ ಬೇನೆಯು ಪ್ರಾರಂಭವಾಗುತ್ತದೆ, ಪ್ರಬಲವೂ ಆಗುತ್ತದೆ. ಹೀಗಾಗಲು ಬಿಡಬಾರದು. ಈ ವಿಷಯದಲ್ಲಿ ಜನರೆಲ್ಲರೂ ಅರಿವನ್ನು ಪಡೆದರೆ, ಆಗ, ತಳಮಳವು ಬೇರೆಯಾಗಿ ಬೇರೂರದಂತೆ ಮುಂಜಾಗ್ರತೆಯನ್ನು ಕೈಗೊಳ್ಳಬಹುದು. ಆದಕಾರಣ ಈ ತೆರನ ಪುಸ್ತಕಗಳ ಅಗತ್ಯವು ಬಹಳ, ನಮ್ಮ ಸಮಾಜದಲ್ಲಿ.
೨. ಕೆಲವು ಮಕ್ಕಳು ಬಹಳ ಚುರುಕಾಗಿರುತ್ತವೆ. ಕೂತಲ್ಲಿ ಕೂರುವುದಿಲ್ಲ. ನಿಂತಲ್ಲಿ ನಿಲ್ಲುವುದಿಲ್ಲ, ಪಾದರಸದಂತೆ ಅಲ್ಲಿ ಇಲ್ಲಿ ಓಡಾಡುತ್ತವೆ. ಹೊಸ ಮುಖ ಅನ್ನುವುದಿಲ್ಲ ಎಲ್ಲರ ಹತ್ತಿರವೂ ಸದರದಿಂದ ಆಡಹೋಗುತ್ತವೆ. ಇದರ ಜತೆಗೂ ಕೋಪ ಹಠವೂ ಅತಿಯಾಗಿರುತ್ತದೆ. ಚಾಕುವನ್ನು ಹಿಡಿದು ಆಡುತ್ತಿರುವಾಗ, ಅದನ್ನು ಕಂಡ ದೊಡ್ಡವರು ಕೈಯಿಂದ ಚಾಕುವನ್ನು ಕಿತ್ತುಕೊಂಡರೆ, ರಚ್ಚಾಟದ ಅಳುವನ್ನು ಶುರು ಮಾಡುತ್ತದೆ. ಯಾರು ಸಮಾಧಾನವನ್ನು ಮಾಡಿದರೂ ಪ್ರಯೋಜನವಿರುವುದಿಲ್ಲ. ಉಸಿರು ಹಿಡಿದು ಅಳಲಾರಂಭಿಸಿ, ಕಡೆಗೆ ಉಸಿರು ಕಟ್ಟಿ ಜ್ಞಾನವೂ ಒಂದೆರಡು ನಿಮಿಷ ತಪ್ಪುತ್ತದೆ. ಆಗ ಮಗು ನೀಲಿಯೂ ಆಗುತ್ತದೆ. ಉಸಿರು ಹಿಡಿದುದರಿಂದ ರಕ್ತದಲ್ಲಿ ಆಕ್ಸಿಜನ್ ಕಡಿಮೆಯಾಗುತ್ತದೆ. ನೀಲಿ ಛಾಯೆಯು ಮೂಡುತ್ತದೆ. ತುಂಬಾ ಭಯ ತರಿಸುವ ದೃಶ್ಯ, ಆದರೆ ಒಂದೆರಡು ನಿಮಿಷಗಳಲ್ಲಿ ದೊಡ್ಡ ಉಸಿರನ್ನೆಳೆದುಕೊಂಡು, ನಂತರ ಸರಾಗವಾಗಿ ಉಸಿರಾಡುತ್ತದೆ. ನಿದ್ರೆಯನ್ನೂ ಸ್ವಲ್ಪ ಕಾಲ ಮಾಡುತ್ತದೆ. ಮೈಯ ಬಣ್ಣವೂ ನೀಲಿಯಿಂದ ಸಾಮಾನ್ಯ ಸ್ಥಿತಿಗೆ ತಿರುಗುತ್ತದೆ. ಎದ್ದ ಕೂಡಲೇ ಮತ್ತೆ ಪಾದರಸದಂತಹ ಚಟುವಟಿಕೆ ಮತ್ತು ಚೇಷ್ಟೆ ಶುರುವಾಗುತ್ತದೆ. Tantrums ಎಂದು ಈ ಪರಿಸ್ಥಿತಿಯನ್ನು ಕರೆಯುತ್ತಾರೆ. ಮಗುವು ಬೆಳೆದಂತೆಲ್ಲ, ಅದರ ನರಮಂಡಲ ರಚನೆಯು ಪ್ರೌಢವಾದಂತೆ Tantrums ಆವೇಷಗಳು ಕಡಿಮೆಯಾಗುತ್ತವೆ. ಸುಮಾರು ೮-೧೦ ಪ್ರಾಯಕ್ಕೆ ಸಂಪೂರ್ಣವಾಗಿ ನಿಂತುಹೋಗುತ್ತದೆ.
ಇಂತಹ ರಚ್ಚೆಯು ಆವೇಶ, ಮತ್ತು ಜ್ಞಾನ ತಪ್ಪುವಿಕೆ, ಹಾಗೂ ಕೈಕಾಲುಗಳ ಸೆರೆವ ಬಡಿದಾಟ, ಇವನ್ನು ಕಂಡು ಮೂರ್ಛರೋಗ ಬಂದಿದೆ ಎಂದು