ಈ ಪುಟವನ್ನು ಪ್ರಕಟಿಸಲಾಗಿದೆ
೨೬೨
ಮನಮಂಥನ
ಮನೆಯವರು ಅಂದುಕೊಳ್ಳುವುದೂ ಉಂಟು. ಹಾಗಂದುಕೊಂಡು ಮೂರ್ಛ ರೋಗಕ್ಕೆ ಬಳಸುವ ಔಷಧಗಳನ್ನು ಕೊಡಲಾರಂಭಿಸಬಹುದು. ಇಂತಹ ಔಷಧಿಗಳು ಬಹಳ ವರ್ಷ ಕೊಡಬೇಕಾದುದರಿಂದ, ಇದು ಮೆದುಳಿನ ಕಾರ್ಯದ ಸುವ್ಯವಸ್ಥೆಗೆ ಅಡ್ಡಿಯಾಗುತ್ತದೆ. ಇದರಿಂದ ದುಷ್ಪರಿಣಾಮವೂ ಮುಂದೆ ಆಗುತ್ತದೆ. ಮಾನಸಿಕ ಮಾಂದ್ಯತೆ, Dull Child ಉಂಟಾಗಬಹುದು. ಬೆಳೆದ ಮೇಲೆ ಮಾನಸಿಕ ಸ್ವಾಸ್ಥ್ಯವೂ ಸಾಕಷ್ಟು ಉಳಿಯುವುದಿಲ್ಲ, ಬೆಳೆಯುವುದೂ ಇಲ್ಲ.
ಆದಕಾರಣ ಮಾನಸಿಕ ಅವ್ಯವಸ್ಥೆಯು ಮುಂದೆ ಉಂಟಾಗದಂತೆ ಎಚ್ಚರಿಕೆಯನ್ನು ವಹಿಸುವಾಗ ಈ ವಿಷಯವನ್ನು ಗಮನಿಸಬೇಕು. ಸ್ವಲ್ಪ ಅನುಮಾನವು ಬಂದರೂ ಕಂದಾಚಾರದ ನಂಬಿಕೆಗಳಿಗೆ ತುತ್ತಾಗದೆ, ನುರಿತ ವೈದ್ಯರ ಸಲಹೆಯನ್ನು ಪಡೆಯಬೇಕು.