ಭಾಗ-೨
ಅರಿಕೆ-ಹಾರೈಕೆ
ಮಾನಸಿಕ ಬೇನೆಗಳ ವಿರಾಟ್ ಸ್ವರೂಪದ, ಚಿತ್ರವಿಚಿತ್ರ ಪ್ರದರ್ಶನಗಳನ್ನು ಸಾಕಷ್ಟು ವಿವರವಾಗಿ ನೋಡಿದವು. ಮನಸ್ಸು ಯಾವ ರೀತಿಯಲ್ಲಿ ವಕ್ರವಾಗುತ್ತದೆ ಎಂಬುದನ್ನೂ ಸ್ಕೂಲವಾಗಿ ತಿಳಿದವು.
ಸಂಜೆಯ ಮಸುಕಿನಲ್ಲಿ ಹಾದಿಯಲ್ಲಿ ಕಾಣಿಸಿದುದು ಹಾವೋ ಹಗ್ಗವೋ ಎಂಬ ಸಂದೇಹವು ಬರುತ್ತದೆ. ಸಂದೇಹದ ಹಿಂದೆಯೇ ಭಯ ಮತ್ತು ಆತಂಕ, ಟಾರ್ಚ್ ಬೆಳಕನ್ನು ಅದರ ಮೇಲೆ ಚೆಲ್ಲಿದರೆ, ಸಂದೇಹವು ಮಾಯವಾಗುತ್ತದೆ. ಹಗ್ಗವಾಗಿದ್ದರೆ ಮುನ್ನಡೆಯುತ್ತೇವೆ. ಹಾವಾಗಿದ್ದರೆ ಸೂಕ್ತವಾದ ರಕ್ಷಣೆಯನ್ನು ಮಾಡಿಕೊಳ್ಳುತ್ತೇವೆ.
ಮಾನಸಿಕ ಬೇನೆಗಳ ವಿಷಯದಲ್ಲಿ ಜನಸಾಮಾನ್ಯರಲ್ಲಿ ಸಾಕಷ್ಟು ಸಂದೇಹಗಳಿವೆ. ಮನಸ್ಸು ಹೇಗೆ ವರ್ತಿಸುತ್ತದೆ? ನಿರ್ಣಯಗಳನ್ನು ಹೇಗೆ ನಿರ್ಧರಿಸುತ್ತದೆ? ಅದರ ಕಾರ್ಯಕ್ರಮವು ಹಳಿ ತಪ್ಪುವುದು ಹೇಗೆ? ಇವುಗಳನ್ನು ತಿಳಿದುಕೊಂಡರೆ, ಸಂದೇಹದ ಮೇಲೆ ಬೆಳಕನ್ನು ಚೆಲ್ಲಿದಂತಾಗುತ್ತದೆ, ಆಗ ಸಂದೇಹ ಪರಿಹಾರವಾಗುತ್ತದೆ.
ಆದಕಾರಣ ಮನಸ್ಸಿನ ಸ್ಕೂಲ ಪರಿಚಯವನ್ನು ಮಾಡಿಕೊಡಲು ಈ ಭಾಗದಲ್ಲಿ ಯತ್ನಿಸಿದ್ದೇನೆ. ಮನಸ್ಸಿನ ವಿಷಯದಲ್ಲಿ ಮನೋವೈಜ್ಞಾನಿಕರು ಪ್ರಗತಿಯನ್ನು ಸಾಧಿಸಿದ್ದಾರೆ ಆದರ ಆ ಜ್ಞಾನವು ಇನ್ನೂ ಶೈಶವಾವಸ್ಥೆಯಲ್ಲಿದೆಯೋ ಎಂಬ ಅನುಮಾನವು ವಿಜ್ಞಾನಿಗಳಲ್ಲಿ ಬೇರೂರಿದೆ.
ನಮ್ಮ ನಾಡಿನಲ್ಲಿ ಮನಸ್ಸಿನ ವಿಶ್ಲೇಷಣೆ ಮತ್ತು ಮನಸ್ಸನ್ನು ನಡೆಸುವ ಆವುದೋ ಅವ್ಯಕ್ತವಾದ ಅಂಶವು ಇದೆ, ಅದನ್ನು ಅರಿಯಬೇಕು ಎಂಬುದೇ ಪುರಾತನ ಕಾಲದ ಮನನಿಗರ ಮತ್ತು ಋಷಿಗಳ ಏಕಮಾತ್ರ ಧೈಯವಾಗಿತ್ತು.
ಅವರುಗಳು ನುಡಿದ ಭಾಷೆಯು, ನಾವು ವೈಜ್ಞಾನಿಕವಾಗಿ ಆಡುವ ಭಾಷೆಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಆದರೂ ಶ್ರದ್ಧೆಯನ್ನು ವಹಿಸಿ ಎರಡನ್ನೂ ಅಭ್ಯಾಸ ಮಾಡಿದರೆ, ಅವುಗಳೆರಡಕ್ಕೂ ಇರುವ ಸಾಮ್ಯವು ಸ್ಪಷ್ಟವಾಗುತ್ತದೆ. ಹಿರಿಯ ಋಷಿಗಳು ಹೇಳಿದುದನ್ನು ಗಮನಿಸಿದರೆ ಮನೋವಿಜ್ಞಾನವು ಮುಂದೆ ಯಾವ