ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೦

ಮನಮಂಥನ

'ಇನ್ನು ಮೇಲೆ ಇವರ ಕುಣಿತಕ್ಕೆ ತಕ್ಕ ಹಾಗೆ ನಾನು ಹಾಡಬೇಕು. ಅಂದ ಮೇಲೆ ಮುಂದೆ ಹೇಗೆ ಎಂದು ಹೇಳಲಿ ಮಾಮ” ಎಂದಳು ಪ್ರಮೀಳಾದೇವಿ ; ತುಂಟ ನಗುವನ್ನು ಗಂಡನತ್ತ ಮೀಂಟುತ್ತಾ.

'ಮುಂದೆ ಹೇಗಾದರೂ ಆಗಲಿ, ಈಗ ಒಂದು ಗೀತವನ್ನು ಹಾಡಮ್ಮ'ಎಂದೆ.

ಪ್ರಮೀಳನಿಗೆ ಕಂಠಶ್ರೀ ಇದೆ. ಶಾರೀರಕ್ಕೆ ತಕ್ಕ ಸೊಬಗಿನ ಶರೀರ. ಇಪ್ಪತ್ತರ ಪ್ರಾಯದ ಕಳೆಯು ಮುಖಕ್ಕೆ ಚೆಲುವನ್ನು ಮಸ್ತು ಮೂಡಿಸಿತ್ತು.

ಕಲ್ಮಶದ ವಲ್ಮೀಕವೆಂದೊಡಲ ಜರೆಯದಿರು ಬ್ರಹ್ಮಪುರಿಯಂದದನು ಋಷಿಗಳೊರೆದಿಹರು ಹಮುಳ್ಳ ಹಯವ ಕಾಪಿಟ್ಟು ಕಡಿವಣ ತೊಡಿಸಿ ನಮ್ಮ ಗುರಿ ಗೈದಿಪುದು-ಮಂಕುತಿಮ್ಮ

ಎಂಬ ಸುಪ್ರಸಿದ್ಧ ಗೀತೆಯೊಂದನ್ನು ಪಮ್ಮಿ ಬಲು ಭಾವಪೂರ್ಣವಾಗಿ ಹಾಡಿದಳು. ನೆಮ್ಮದಿಯಿಂದ ತುಂಬು ಬಾಳನ್ನು ನಡೆಸಿ ಎಂದು ಹರಸಿ, ಹೊರಬಂದೆ, ಅವರ ಮನೆಯಿಂದ.

ಪಮ್ಮಿ ಹಾಡಿದ ಗೀತವನ್ನು ಎಷ್ಟೋ ಬಾರಿ ಕೇಳಿದ್ದೆ. ಅದು ನನಗೆ ಕಂಠ ಗತವಾಗಿತ್ತು. ಆದರೆ ಈ ಸಂಜೆ ಪಮ್ಮಿ ಹಾಡಿದ್ದು ನನ್ನ ಮನಸ್ಸಿಗೆ ನಾಟಿತು. ಸಂಗೀತ ಲಾಲಿತ್ಯಕ್ಕಿಂತಲೂ ಸಾಹಿತ್ಯವು ಕಾಡಲಾರಂಭಿಸಿತು. ಒಡಲಿನಲ್ಲಿ ಕಲ್ಮಶವು ಇರುವುದು ಎಲ್ಲರಿಗೂ ತಿಳಿದ ವಿಷಯ. ಅದರ ಸುತ್ತಲೂ ದೇಹವು ಹುತ್ತ ಎಂದರೆ ವಲ್ಮೀಕದಂತೆ ಬೆಳೆದಿದೆ. ಆದರೆ ಅದನ್ನು ಜರೆಯಬೇಕೇಕೆ? ಪಮ್ಮಿಯನ್ನು ಕಂಡರೆ ಸಂತಸವುಂಟಾಗುತ್ತದೆ. ತಿರುಗಿ ತಿರುಗಿ ನೋಡಬೇಕು ಎನ್ನುವ ಆಸೆಯಾಗುತ್ತದೆ. ಇಂತಹ ಸುಂದರ ದೇಹವನ್ನು ಜರೆಯದಿರು ಎಂದನ್ನಲು ಕಾರಣವೇನು? ಹಿರಿಯರು ಹಲವರು ಒಡಲನ್ನು ನಿಕೃಷ್ಟವಾಗಿ ಕಂಡಿರಬೇಕು. ಆದುದರಿಂದ, ದೃಷ್ಟಾರರಾದ ಡಿ.ವಿ.ಜಿ.ಯವರು 'ಒಡಲನ್ನು ಜರೆಯಬೇಡಿ' ಎಂದು ಒತ್ತಿ ಹೇಳಿದ್ದಾರೆ.

ಒಡಲನ್ನು ಆರೋಗ್ಯವಾಗಿರುವಂತೆ ಕಾಪಾಡಿಕೊಂಡು ಬಂದರೆ, ಮನಸ್ಸಿನ ಆರೋಗ್ಯವೂ ಸ್ವಸ್ಥವಾಗಿರುತ್ತದೆ ಎಂದು, ಉಚ್ಛಾಯ ಸ್ಥಿತಿಯಲ್ಲಿದ್ದಾಗ ರೋಂ ಸಾಮ್ರಾಜ್ಯದ ಮನಸಿಗರು ನಾಣ್ಣುಡಿಯನ್ನು ಕಟ್ಟಿದರು. Mens sane in corpore sano, ಆರೋಗ್ಯವಾದ ದೇಹವಿದ್ದರೆ ಮನಸ್ಸ ಆರೋಗ್ಯವಾಗಿರುತ್ತದೆ. ಎಂಬ ಲ್ಯಾಟಿನ್ ನಾಣ್ಣುಡಿ, ಅನುಭವ ಹೇಳಲ್ಪಟ್ಟ ನಾಣ್ಣುಡಿಯು