ಸತ್ಯವಾಗಲೇಬೇಕು? ಸತ್ಯವಲ್ಲವೇನೋ ಎಂಬ ಸಂದೇಹವುಂಟಾಗುತ್ತದೆ. ಮತ್ತೆ ಯಾಕೆ ರೋಂಇನ ಮನಸಿಗರು ಹಾಗಂದರು?
ರೋಮನ್ ಸಾಮ್ರಾಜ್ಯವು ಆ ಕಾಲದಲ್ಲಿ ಸಂಪದ್ಭರಿತವಾಗಿತ್ತು. ರೋಂನಗರ ವನಕ ಭೋಗ ಜೀವನಕ್ಕೆ ಸುಖ ಲೋಲಾಪ್ತಿಗಳಿಗೆ ಎಲ್ಲ ತೆರನ ಅವಕಾಶಗಳನ್ನೂ ಒದಗಿಸುತ್ತಿತ್ತು ; ಅಲ್ಪಸಂಖ್ಯಾತರಾದ ಶ್ರೀಮಂತ ಕುಟುಂಬದವರು ಆಡಿದ್ದೇ ಆಟ. ಬಹುಸಂಖ್ಯಾತರಾದ ಇತರರು ಇಂತಹ ಶ್ರೀಮಂತರ ಜೀತದಾಳುಗಳು ಅಥವಾ ಗುಲಾಮರು, ತಲತಲಾಂತರದಿಂದಲೂ ಗುಲಾಮರಾಗಿಯೇ ಇರಬೇಕಾಗಿದ್ದವರು. ಸಾಮಾಜಿಕವಾಗಿ ಈ ವ್ಯವಸ್ಥೆಯು ಇದ್ದರೂ, ಗಂಡು ಹೆಣ್ಣು ಎಂಬ ಎರಡೇ ವ್ಯತ್ಯಾಸವು ಬಾಳಿನಲ್ಲಿ ಗುರುತಿಸಲ್ಪಡುತ್ತಿತ್ತು. ಹೀಗಾಗಿ ಗುಲಾಮ ಹೆಣ್ಣುಗಳು, ಶ್ರೀಮಂತರ ಆಟಕ್ಕೆ ಮತ್ತು ಕೂಟಕ್ಕೆ ಸಿದ್ಧವಾಗಿರಬೇಕಾಗಿತ್ತು. ಈ ರೀತಿಯಲ್ಲಿ ಗುಪ್ತ ವ್ಯಾಧಿಗಳು ಎಲ್ಲರಲ್ಲೂ ಸರಿಸಮಾನತೆಯಿಂದ ಹರಡಲು ಅನುಕೂಲವಾಗಿತ್ತು. ಸಿಫಿಲಿಸ್ ಎಂಬ ರತಿ ವ್ಯಾಧಿಯು ಸುಮಾರು ಮಂದಿಯನ್ನು ಕಾಡುತ್ತಿತ್ತು. ಆಗಿನ ಕಾಲದಲ್ಲಿ ಈ ವ್ಯಾಧಿಗೆ ಪರಿಣಾಮಕಾರಿಯಾದ ಯಾವ ಔಷಧವೂ ಇರಲಿಲ್ಲ. ವ್ಯಾಧಿಯು ಉಲ್ಬಣಿಸುತ್ತ ಹೋದಾಗ ನರಗಳು ಮತ್ತು ಮೆದುಳುಗಳನ್ನೂ ಆಕ್ರಮಿಸಿಕೊಳ್ಳುತ್ತಿತ್ತು. ಆಗ ರೋಗಿಗೆ ಪಾರ್ಶ್ವ ಮತ್ತಿತರ ವಾಯುಗಳೂ ಮತ್ತು ಉನ್ಮಾದಾವಸ್ಥೆಯೂ ಉಂಟಾಗುತ್ತಿತ್ತು. General paralysis of the insane ಎಂಬ ಈ ಬೇನೆಯು ರೋಂ ನಗರದ ಬಹಳಷ್ಟು ಮಂದಿಯಲ್ಲಿ ಕಾಣಿಸಿಕೊಂಡಿತ್ತು.
ಈ ದೃಶ್ಯವನ್ನು ಕಂಡ ಆ ಕಾಲದ ಆ ನಗರದ ಮನನಿಗರು, ಸ್ವಾಭಾವಿಕವಾಗಿ ಹೀಗೆ ತೀರ್ಮಾನಿಸಿದರು. 'ಇವರ ದೇಹವು ಕೆಟ್ಟ ಜಾಡ್ಯದಿಂದ ಮಲಿನವಾಯಿತು. ಮಲಿನಗೊಂಡ ದೇಹದಲ್ಲಿ ಸ್ವಸ್ಥ್ಯವನ್ನು ಹೊಂದಿದ ಮನಸ್ಸು ಇರಲು ಸಾಧ್ಯವಿಲ್ಲ. ಅದಕಾರಣ ದೇಹವನ್ನು ಶುಚಿಯಾಗಿರಿಸಿಕೊಂಡರೆ, ಆರೋಗ್ಯವಾಗಿ ಕಾಪಾಡಿಕೊಂಡರೆ, ಆಗ ಮನಸ್ಸು ಆರೋಗ್ಯವಾಗಿರುತ್ತದೆ, ಶುಚಿಯಾಗಿರುತ್ತದೆ' ಎಂದು. ಆಗಿನ ಕಾಲದ ಆ ದೇಶದ ಸ್ಥಿತಿಯಲ್ಲಿ ಅವರು ನುಡಿದುದು ಸತ್ಯ.
ಆದರೆ ಈಗಿನ ಕಾಲದಲ್ಲಿ; ಮಾನವ ಜ್ಞಾನ ಭಂಡಾರವು ಅತ್ಯಾಶ್ಚರ್ಯ ಕರವಾಗಿ ಅಭಿವೃದ್ಧಿ ಹೊಂದಿರುವಾಗ, ಆ ನಾಣ್ಣುಡಿಯು ಸರಿಯಲ್ಲ, ಮುಕ್ಕಾಲು ಪಾಲು ತಪ್ಪು ಎಂಬುದು ಖಚಿತವಾಗುತ್ತದೆ. ಕೆಲವು ವರ್ತಮಾನಕಾಲದ ನಿದರ್ಶನಗಳನ್ನು ಪರಿಶೀಲಿಸೋಣ.