ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೨
ಮನಮಂಥನ

೧. ಹುಚ್ಚು ಬೆಪ್ಪು ಶೀವಲೀಲೆ ಇಂತಹ ಮಾನಸಿಕ ರೋಗಗಳಿಂದ ನರಳುವವರಲ್ಲಿ ಸಾಕಷ್ಟು ಪಾಲು ಜನರ ದೇಹಾರೋಗ್ಯವು ಸಮರ್ಪಕವಾಗಿಯೇ ಇರುತ್ತದೆ. ಹಲವಾರು ಹಿಸ್ಟಿರಿಯಾ ರೋಗಿಗಳು ; ಒಬ್ಸೇಷನ್ ತಗುಲಿದವರು, ಹಾಗೂ ಅತಿ ಆತಂಕದಿಂದ ನರಳುವವರು ; ಮತ್ತು ಇತರ ತೆರನ ಮಾನಸಿಕ ರೋಗಿಗಳು ; ತೋಳದಂತೆ ಶಕ್ತಿಯುತವಾದ ದೇಹವನ್ನು ಹೊಂದಿರುತ್ತಾರೆ, ಕಿರುಬಗಳಂತೆ ಧಂಡಿ ಧಂಡಿ ತಿಂದು ಅರಗಿಸಿಕೊಳ್ಳುತ್ತಾರೆ. ಮಜಭೂತಾಗಿರುವ ಅವರ ದೇಹ ಎಂಬ ದೇವಾಲಯದಲ್ಲಿ ಅಥವಾ ಬ್ರಹ್ಮಪುರಿಯಲ್ಲಿ, ಮನಸ್ಸಿನ ಭೂತಗಳು ಮತ್ತು ಪಿಶಾಚಿಗಳು ಹೇಗೆ ಸೇರಿಕೊಂಡವು? ದೇಹವು ದಾರ್ಡ್ಯವಾಗಿರುವಾಗ, ಮನಸ್ಸಿಗೆ ರೋಗಗಳು ಹೇಗೆ ಬಡಿಯಿತು? ಬ್ರಹ್ಮಪುರಿಯು ಬ್ರಹ್ಮ ರಾಕ್ಷಸನ ಆವಾಸಸ್ಥಳವಾದುದು ಹೇಗೆ? ಅದೂ ಆರೋಗ್ಯಸ್ಥಿತಿಯಲ್ಲಿರುವಾಗ?

೨. ಮನೋದೈಹಿಕ ಬೇನೆಗಳಿಂದ ನರಳುವವರ ಸಂಖ್ಯೆಯು; ಎಲ್ಲಾ ತರಹ ರೋಗಗಳಿಂದ ನರಳುವವರ ಸಂಖ್ಯೆಯಲ್ಲಿ ಶತಾಂಶ ೭೦-೮೦ ರಷ್ಟಿದೆ ಎಂದು ಅನುಭವಸ್ಥ ವೈದ್ಯರ ಅಂದಾಜು. ಈ ತೆರನ ಬೇನೆಗಳಿಂದ ನರಳುವವರು ಹಲವಾರು ಬಾರಿ, ಕೆಲವಾರು ನುರಿತ ವೈದ್ಯರುಗಳಿಂದ ಸಂಪೂರ್ಣ ದೇಹ ಪರೀಕ್ಷೆಯನ್ನು ಮಾಡಿಸಿ ಕೊಂಡಿರುತ್ತಾರೆ. ನೂರು ನೂರು ಗಟ್ಟಲೆ ಹಣವನ್ನು ನೀರಿನಂತೆ ಖರ್ಚುಮಾಡಿ, ಹತ್ತಾರು ತೆರನಾದ ರಕ್ತ ಪರೀಕ್ಷೆ ; ಎಕ್ಸರೆ ಪರೀಕ್ಷೆ; ಇ.ಇ.ಜಿ. ಪರೀಕ್ಷೆಗಳನ್ನು ಮಾಡಿಸಿಕೊಂಡಿರುತ್ತಾರೆ. 'ದೇಹದ ಕಾರ್ಯಕ್ರಮಗಳಲ್ಲಿ ಯಾವುದೊಂದು ಕೊಂಕೂ ಇಲ್ಲ; ವಿನಾಕಾರಣ ನೀವು ನರಳುತ್ತಿದ್ದೀರಿ ; ಆತಂಕ ಪಡಬೇಡಿ' ಎಂಬ ಸಲಹೆಯನ್ನು ನಿಷ್ಣಾತ ವೈದ್ಯರುಗಳಿಂದ ಪಡೆಯುತ್ತಾರೆ. ಆದರೂ ಅವರುಗಳು ಮನೋ ದೈಹಿಕ ಬೇನೆಗಳಿಂದ ನರಳುತ್ತಲೇ ಇರುತ್ತಾರೆ. ಅಂದರೆ ದೇಹವು ಆರೋಗ್ಯವಾಗಿದ್ದರೂ, ಮಾನಸಿಕ ತಳಮಳದ ಕಾರಣಗಳಿಂದಾಗಿ, ಬೇನೆಯ ಸಂಕಟವನ್ನು ಅನುಭವಿಸುತ್ತದೆ. ಮಾನಸಿಕ ಸ್ವಾಸ್ಥ್ಯವು ಅಲ್ಲೋಲಕಲ್ಲೋಲವಾಗಿರುತ್ತದೆ. ಬ್ರಹ್ಮಪುರಿಯು ಆರೋಗ್ಯದಿಂದಿದ್ದರೆ, ಮಾನಸಿಕ ಬ್ರಹ್ಮರಾಕ್ಷಸನ ಹಾವಳಿಯು ಆಗುವುದೇಕೆ?

೩. ದೀರ್ಘ ಕಾಲದ ಕಾಯಿಲೆಗಳಿಂದ ದೇಹವು ನರಳುತ್ತಿದ್ದರೂ, ಅಂತಹ ರೋಗಿಗಳ ಮನಸ್ಸು ಸ್ವಸ್ಥವಾಗಿಯೇ ಇರುತ್ತದೆ. ಅಲ್ಲದೆ ಹಲವಾರು ರೋಗಿಗಳಲ್ಲಿ ಬಹಳ ಚುರುಕಾಗಿಯೂ ಕೆಲಸವನ್ನು ಮಾಡುತ್ತದೆ. ಉದಾಹರಣೆಗೆ Robert Louis Stevenson, ಮತ್ತು A.j. Comin, ಇವರುಗಳು ಇಂಗ್ಲೀಷಿನಲ್ಲಿಯೂ,