ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೨೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನಮಂಥನ

೨. ಮನಸ್ಸಿನ ಸ್ವರೂಪ

ಮನಸ್ಸು ಎಂದರೇನು ? ಯಾವುದರ ನೆರವಿನಿಂದ ನಾವು ಆಲೋಚಿಸು ತ್ತೇವೆಯೋ ಅದನ್ನು ಮನಸ್ಸು ಎನ್ನಬೇಕು. ಆಲೋಚನೆಗಳು ಎಂದರೆ ಏನು ? ಮನಸ್ಸಿನಲ್ಲಿ ತೋರಿಬರುವ ವಿಶೇಷಗಳು ಎನ್ನಬೇಕು. ಒಂದು ಪ್ರಶ್ನೆಯನ್ನು ಬಿಡಿಸಲಾಗದೆ ಇನ್ನೊಂದು ಪ್ರಶ್ನೆಯಿಂದ ಉತ್ತರಿಸಿದಂತಾಯಿತು. ಆದುದರಿಂದಲೇ ಅಮೆರಿಕಾದ ಸುಪ್ರಸಿದ್ಧ ಮನನಿಗ-ನಗೆಗಾರ Ambrose Bierce ತನ್ನ Devil's Dictionary ಯಲ್ಲಿ ಮನಸ್ಸನ್ನು ಈ ರೀತಿ ವರ್ಣಿಸಿದ್ದಾರೆ. Mind: The thing with which we think, we think, ಮನಸ್ಸು ಎಂಬುದರ ಸಮಸ್ಯೆಯನ್ನು ಈ ವಾಕ್ಯವು ಎತ್ತಿ ತೋರಿಸುತ್ತದೆ. ಇಂತಹ ಸಮಸ್ಯೆಗಳನ್ನು ಬಿಡಿಸುವ ಗೋಜು ವೇದಾಂತಿಗಳದು. ನಮ್ಮ ಮನಸ್ಸು ಸ್ವಸ್ಥವಾಗಿರಬೇಕು ; ಆ ಕಾರಣದಿಂದ ಮನಸ್ಸು ಎನ್ನುವುದನ್ನು ಯೋಚಿಸುವ ಹಾಗೂ ಸ್ಮರಣೆಯಲ್ಲಿಟ್ಟುಕೊಳ್ಳುವ, ಒಂದು ತೆರನ ಶಕ್ತಿ ಎಂದು ಹೇಳಬಹುದು. ನಮ್ಮ ದಿನದಿನದ ಅನುಭವಕ್ಕೆ ಈ ವಿವರಣೆಯು ಹೊಂದಿಕೊಳ್ಳುತ್ತದೆ.

ಒಂದು ಉದಾಹರಣೆಯಿಂದ ಮನಸ್ಸಿನ ಹಲವಾರು ತೆರನ ಚಟುವಟಿಕೆಗಳನ್ನು ತಿಳಿಯುವ :

ಬೇಸಿಗೆಯ ರಜದಲ್ಲಿ ನನ್ನ ಅಜ್ಜಯ್ಯನನ್ನು ನೋಡಿಕೊಂಡು ಬರಲು ಹಳ್ಳಿಗೆ ಹೋದೆ. ಅಜ್ಜಯ್ಯನನ್ನು ನೋಡಿಕೊಂಡು ಬರುವುದು ಒಂದು ಆಸೆ. ಆಸೆಯೇ ಯೋಚನೆಯಾಯಿತು. ಈ ಯೋಚನೆಯನ್ನು ಕಾರ್ಯಗತ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂದರೆ ಒಂದರಿಂದ ಇನ್ನೊಂದು ಸಂಬಂಧವನ್ನು ಹೊಂದುವಂತೆ ಯೋಚನೆಗಳನ್ನು ಮಾಡಬೇಕು. ಇಂತಹ ರೈಲಿನಲ್ಲಿ ಇಷ್ಟು ಹೊತ್ತಿಗೆ ಹೊರಟರೆ, ಅಜ್ಜಯ್ಯನ ಹಳ್ಳಿಯ ಹತ್ತಿರ ಇರುವ ಸ್ಟೇಷನ್ನಿಗೆ ತಲಪುತ್ತೇನೆ. ಅಲ್ಲಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗೆ ನಡೆಯಬೇಕು. ಹಳ್ಳಿಯ ಕಡೆಯ ರಸ್ತೆಗಳು ; ಅಂದರೆ ರಸ್ತೆಗಳೇ ಇಲ್ಲ. ಚಪ್ಪಲಿಗಳನ್ನು ಮೆಟ್ಟಿಕೊಂಡು ಅಷ್ಟು ದೂರ ನಡೆದು ಅಭ್ಯಾಸವಿಲ್ಲ. ಬರೀ ಕಾಲುಗಳಲ್ಲಿ ನಡೆಯುವುದನಕ ಅಸಾಧ್ಯ. ಆದ್ದರಿಂದ ಹೂಗಳನ್ನು ಹಾಕಿಕೊಂಡು