೨೭೯
ಭೂಮಿಯ ಮೇಲಕ್ಕೆ ಸೇಬಿನ ಹಣ್ಣು ಬಿತ್ತು. ಇಲ್ಲದಿದ್ದರೆ ಸೇಬಿನ ಹಣ್ಣಿನ ಮೇಲೆ ಭೂಮಿಯು ಬೀಳಬೇಕಾಗುತ್ತಿತ್ತು! ಎಂದವ ಸಿದ್ಧಾಂತವನ್ನು ಮಾಡಿದ, ಗಣಿತ ಶಾಸ್ತ್ರದ ಪ್ರಕಾರ ತನ್ನ ಸಿದ್ಧಾಂತವನ್ನು ಸಮರ್ಥಿಸಿದ. ಪರಸ್ಪರ ಆಕರ್ಷಣೆಯ ಪ್ರಮಾಣವನ್ನು ಅಳತೆಮಾಡಿ ತೋರಿಸಿದ.
ಕುತೂಹಲವು ನ್ಯೂಟನ್ನನ ಮನಸ್ಸನ್ನು ದೆವ್ವದಂತೆ ಹಿಡಿದುಕೊಂಡಿತ್ತು. ಅವನ ವಿಚಾರಪರ ಮನಸ್ಸು ತಾ ಕಂಡ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲು, ಅತಿ ಶ್ರದ್ಧೆಯಿಂದ ತೊಡಗಿತು.
ಮನಸ್ಸಿನ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ, ಕುತೂಹಲವು ಒಂದು ಮುಖ್ಯ ಪ್ರೇರಕ.
ದೇಹದ ಹೊರಗಿನ ವಸ್ತು ಸ್ಥಿತಿಯನ್ನು ಇಂದ್ರಿಯಗಳ ಮೂಲಕ ಗ್ರಹಿಸಿ, ನಂತರ ವಿವೇಚಿಸಿ, ಸೂಕ್ತವಾದ ನಿರ್ಣಯಗಳನ್ನು ಮಾಡಿ ಕಾರ್ಯರೂಪಕ್ಕೆ ತರುವುದು ; ಮನಸ್ಸಿನ ಸಾಮಾನ್ಯವಾದ ಒಂದು ಚಟುವಟಿಕೆ. ಅನುಭವಿಸಿದುದನ್ನು ಸ್ಮರಣೆಯಲ್ಲಿಟ್ಟುಕೊಂಡು, ಅದರಿಂದ ಕಲಿತ ಪಾಠವನ್ನು ಅಗತ್ಯ ಬಿದ್ದಾಗ ಬಳಸಿಕೊಳ್ಳುವುದು, ಸಾಮಾನ್ಯವಾದ ಇನ್ನೊಂದು ಚಟುವಟಿಕೆ. ಅಂತಃಕರಣದಿಂದ ಭಾವನಾಪರವಶನಾದಾಗ, ಹಾಗೂ ಕೂತೂಹಲದಿಂದ ಕೆರಳಿದಾಗ, ಹಠಾತ್ತನೆ ತೇಲಿಬರುವ ಸ್ಪೂರ್ತಿಯೂ ಮನಸ್ಸಿನೊಂದು ಗುಣ. ಮನಸ್ಸಿನ ಮುಖ್ಯ ಕಾವ್ಯಗಳಲ್ಲಿ ಇವು ಮೂರನ್ನೂ ಗಮನಿಸಬೇಕು.
ದೇಹ ಮತ್ತು ಮನಸ್ಸು ಇವೆರಡರ ಸಮನ್ವಯವೇ ಬಾಳಿನ ಜೀವಾಳ. ದೇಹವು ಇರದಿದ್ದರೆ, ಮನಸ್ಸು ಸ್ವತಂತ್ರವಾಗಿ ಇರಲು ಸಾಧ್ಯವೇ ಹಾಗೂ ಮನಸ್ಸು ಇಲ್ಲದಿದ್ದರೆ, ದೇಹವು ಉಳಿಯಲು ಸಾಧ್ಯವೇ ? ಈಗಿನ ನಮ್ಮ ತಿಳಿವಳಿಕೆಯ ಪ್ರಕಾರ, ಎರಡರ ಒಕ್ಕೂಟವು ಸಾಧ್ಯವೇ ಹೊರತು, ಒಂದು, ಇನ್ನೊಂದನ್ನು ಬಿಟ್ಟು ಇರಲು ಸಾಧ್ಯವೇ ಇಲ್ಲ. ಅಂದಮೇಲೆ ಮನಸ್ಸು ದೇಹದ ಅಗೋಚರವಾದ ಒಂದು ಅಂಗ, ಅಥವಾ ದೇಹವು ಮನಸ್ಸಿನ ಗೋಚರವಾದ ಒಂದು ಅಂಗ, ಎಂದನ್ನಬಹುದು.
ಕಣ್ಣು, ದೇಹದಲ್ಲಿ ಕಾಣಿಸಿಸುವ ಒಂದು ಅಂಗ. ಕಿವಿಯು ಕೇಳಿಸಿಸುವ ಒಂದು ಅಂಗ. ಮೂಗು ವಾಸನೆಯನ್ನು ಅರುಹುವ ಒಂದು ಅಂಗ. ನಾಲಿಗೆಯು ಉಂಡುದರ ಸವಿ ಕಹಿಗಳನ್ನು ರುಚಿಸಿಸುವ ಒಂದು ಅಂಗ ಸ್ಪರ್ಶಸುಖ ಅಥವಾ ದುಃಖವನ್ನು ಒದಗಿಸುವ ಚರ್ಮವು ಒಂದು ಅಂಗ. ಪಂಚೇಂದ್ರಿಯಗಳೂ