ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆತಂಕ

೧೧

ದೇಹಾರೋಗ್ಯವು ಸಮರ್ಪಕವಾಗಿತ್ತು. ಶಾಲೆಯಲ್ಲಿ ಯಾವ ಮೆಹನತ್ತನ್ನು ಪಡೆಯದೆ ಇದ್ದರೂ, ನಲವತ್ತು, ನಲವತ್ತೈದು, ಅಂಕಿಗಳನ್ನು ಪಡೆದು ಪ್ಯಾಸ್ ಆಗುತ್ತಿದ್ದ. ಹತ್ತನೇ ಸ್ಟಾಂಡರ್ಡ್‌ನಲ್ಲಿ ಒಮ್ಮೆ ಕುಂಟಿದ್ದ. ಆದರೆ ಆ ಪರೀಕ್ಷೆಯ ಕಾಲದಲ್ಲಿ ಅವನ ತಾಯಿಗೆ ಭಯಂಕರ ಸ್ವರೂಪದ ನ್ಯೂಮೋನಿಯಾ ತಾಕಿತ್ತು. ಎರಡು ದಿನ ಆಕೆ ಇತ್ತಲೋ ಅತ್ತಲೋ ಎನ್ನುವಂತೆ, ನರಳಿದ್ದಳು. ಕಫ ಕಟ್ಟಿಕೊಂಡು ಗೊ‌ ಗೊರ್ ಶಬ್ದವು ಕೇಳಿಸುತ್ತಿತ್ತು ; ದೂರದಲ್ಲಿ ನಿಂತವರಿಗೂ ಕೂಡ. ಭಗವಂತನ ಕೃಪೆಯಿಂದ ಆಕೆಗೆ ಗುಣವೇನೋ ಆಯಿತು. ಆದರೆ ಇವನ ಓದಿಗೆ ಅಡ್ಡಿಯಾಯಿತು. ಆ ವರ್ಷ ನಪಾಸಾಗಿದ್ದ. ಅನಂತರ ಎರಡು ಮೂರು ವರ್ಷ ಚೆನ್ನಾಗಿಯೇ ಇದ್ದ. ಯಾವ ಮಾಯದಲ್ಲೋ ಈ ಬೇನೆಯು ಬಂದು ಅಮರಿಕೊಂಡಿತು. ದಿನದಲ್ಲಿ ಮೂರು ನಾಲ್ಕು ಬಾರಿ, ಅರ್ಧ ಗಂಟೆಯಿಂದ ಒಂದು ಗಂಟೆಯ ತನಕ ಹೀಗೆ ಕಾಡುತ್ತದೆ. ಮಿಕ್ಕ ವೇಳೆಯಲ್ಲಿ ಆರೋಗ್ಯವಾಗಿಯೇ ಇರುತ್ತಾನೆ. ಆದರೂ ತಿರುಗಿ ಯಾವಾಗ ಹಾಗೆ ಆಗುತ್ತದೋ ಎನ್ನುವ ಹೆದರಿಕೆಯು ಇದ್ದೇ ಇರುತ್ತದೆ.

“ನಿತ್ಯ ಸಾಯುವವರಿಗೆ ಅಳೋರು ಯಾರು ?” ಎನ್ನುವ ಹಾಗೆ, ಈಗೀಗ ನನ್ನನ್ನು ಕಂಡರೆ ಮನೆಯವರಿಗೆಲ್ಲಾ ತಾತ್ಸಾರ ಹುಟ್ಟಿದೆ. 'ಉಸಿರು ನಿಂತು ಹೋದರೆ, ಹೋಗಲಿ ಬಿಡು, ಅಂತ ಅಪಹಾಸ್ಯ ಮಾಡುತ್ತಾರೆ' ಎಂದು ಹೇಳಿದ, ಅರೆ ಕ್ಷಣದಲ್ಲಿ ಅವನ ಮುಖದಲ್ಲಿ ಉದ್ದುದ್ದ ಗೆರೆಗಳು ಮೂಡಿದವು.

'ನೋಡಿ ಡಾಕ್ಟರೇ ! ಈಗ ಉಸಿರು ನಿಂತೇ ಹೋಗಿದೆ' ಎಂದ. ನೋಡುತ್ತಲೇ ಇದ್ದೆ. ಅವನು ಉಸಿರು ಆಡುತ್ತಲೇ ಇದ್ದ. ನಿಟ್ಟುಸಿರನ್ನು ಕಷ್ಟದಿಂದ ಎಳೆದುಕೊಂಡು ಬಿಡುವವರಂತೆ ಸದ್ದು ಮಾಡುತ್ತಾ ಉಸಿರಾಡುತ್ತಿದ್ದ. ಹಣೆಯ ಮೇಲೆ ಕಿರು ಬೆವರು ಹನಿಗಳು ಮಣಿಗಟ್ಟಿದುವು. ಆದರೆ ಅವನ ಮಾತುಗಳಲ್ಲಿ ಯಾಗಲೀ, ನಡವಳಿಕೆಯಲ್ಲಾಗಲೀ, ಪೆಚ್ಚುತನವಾಗಲೀ, ಅಸಂಬದ್ಧವಾಗಲೀ ಇರಲಿಲ್ಲ. ತಲೆ ತಿರುಗಿ ಭೌಳಿ ಬರುವುದಾಗಲೀ, ಕೈಕಾಲು ಕುಸಿದಂತೆ ಆಗುವುದಾಗಲೀ, ಯಾವುದೂ ಸಂಭವಿಸಿರಲಿಲ್ಲ.

ದೇಹಾರೋಗ್ಯವು ಸಾಕಷ್ಟು ಸಮರ್ಪಕವಾಗಿರುವ ಈ ಯುವಕನಿಗೆ ಆತಂಕವು ಅಲೆಯಲೆಯಾಗಿ ಬಡಿದು, ಈ ರೀತಿ ಉಸಿರಾಟದ ಭ್ರಮಾ ಕಷ್ಟವನ್ನು ಕೊಟ್ಟು ಏಕೆ ಕಾಡುತ್ತಿದೆ?

ಹೊರನೋಟಕ್ಕೆ ದೇಹಾರೋಗ್ಯವು ಸಮರ್ಪಕವಾಗಿ ಕಂಡರೂ, ಇನ್ನೂ ವ್ಯಕ್ತವಾಗದೆ ಇರುವ ಎಂಡೋಕ್ರೀನ್ ಗ್ರಂಥಿಗಳ ಏರುಪೇರಿನಿಂದ