ಮೈಯಿಗೆ ಶಾಖವು ಹರಿದು ಬರುವುದು ಕಾಣಿಸುವುದಿಲ್ಲ. ಆದರೆ ಶಾಖವು ಹರಿದು ಬಂದಿರಲೇಬೇಕು. ಶಾಖವು ಒಂದು ರೀತಿಯ ಶಕ್ತಿ.
ಕುದುರೆಯ ಲಾಳದಂತಿರುವ ಮ್ಯಾಗ್ನೆಟ್ಟನ್ನಿಟ್ಟು, ಅದರ ಮೇಲೆ ಕಾಗದವನ್ನು ಹರಡಿ, ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಉದುರಿಸಿದರೆ, ಹುಡಿಯು ಒಂದು ವಿಚಿತ್ರವಾದ ರೇಖಾ ಚಿತ್ರವನ್ನು ರಚಿಸಿಕೊಳ್ಳುತ್ತದೆ. ಲಾಳವಿರುವ ಎರಡೂ ಪಕ್ಕಗಳಲ್ಲಿ ಹುಡಿಯು ರಂಗೋಲಿಯನ್ನಿಟ್ಟಂತಾಗುತ್ತದೆ. ಲಾಳದ ಎರಡು ತುದಿಗಳಲ್ಲೂ ಮೀಸೆ ಕಟ್ಟಿಕೊಳ್ಳುತ್ತದೆ. ಮ್ಯಾಗ್ನೆಟಿಕ್‌ನ ಆಯಸ್ಕಾಂತ ಶಕ್ತಿಯು ಕಬ್ಬಿಣದ ಹುಡಿಯನ್ನು ಈ ರೀತಿ ಚೆಲ್ಲಾಡಿಸುತ್ತದೆ. ಮ್ಯಾಗ್ನೆಟ್ಟಿನ ಶಕ್ತಿಯು ಒಂದು ತೆರನಾದುದು.
ಇಲೆಕ್ಟ್ರಿಕ್ ಸ್ಟವ್‌ನಲ್ಲಿ, ಸ್ವಿಚ್ ಹಾಕಿದ ಮೇಲೆ, ಕೆಂಪಗೆ ಲೋಹದ ಸುರುಳಿಗಳು ಕಾಯುತ್ತವೆ. ಉತ್ಪತ್ತಿಯಾದ ಆ ಶಾಖದಿಂದ ಅಡಿಗೆಯನ್ನು ಬೇಯಿಸಬಹುದು. ಆ ಇಲೆಕ್ಟ್ರಿಕ್ ಶಕ್ತಿಯನ್ನು ತೆಳು ತಂತಿಗಳಿರುವ ಬಲ್ಲಿನಲ್ಲಿ ಹರಿಯ ಬಿಟ್ಟರೆ, ಬೆಳಕು ಹರಡುತ್ತದೆ. ಶಾಖವನ್ನೂ ಬೆಳಕನ್ನೂ ಹಾಗೂ ಮ್ಯಾಗ್ನೆಟಿಕ್ ಪ್ರತಿಕ್ರಿಯೆಗಳನ್ನೂ, ಇಲೆಕ್ಟ್ರಿಸಿಟಿಯು ಸಾಧಿಸುತ್ತದೆ. ಇಲೆಕ್ಟ್ರಿಸಿಟಿಯೂ ಒಂದು ವಿಧವಾದ ಶಕ್ತಿ.
ಗುರುತ್ವಾಕರ್ಷಣೆಯೂ ಒಂದು ತೆರನ ಶಕ್ತಿ.
ಕಂತ್ರಿ ನಾಯಿಯ ಕಡೆಗೆ ಹುಡುಗನು ಕಲ್ಲನ್ನೆಸೆಯುತ್ತಾನೆ. ಅವನ ತೋಳ್ಬಲದಿಂದ ಎಸೆದ ಕಲ್ಲು ರಭಸದಿಂದ ಸ್ವಲ್ಪ ದೂರ ಸಾಗುತ್ತದೆ. ತೋಳ್ಬಲವು ಒಂದು ವಿಧದ ಶಕ್ತಿ. ಫಿಸಿಕಲ್ ಶಕ್ತಿ.
ಇವೆಲ್ಲ ತೆರನ ಶಕ್ತಿಗಳು, ಆಮೂಲಾಗ್ರವಾಗಿ ವಿಜ್ಞಾನಿಗಳಿಂದ ಅಭ್ಯಸಿಸಲ್ಪಟ್ಟಿವೆ. ಇವುಗಳ ಗುಣಗಳು ಎಣಿಸಲ್ಪಟ್ಟಿವೆ, ಗುಣಿಸಲ್ಪಟ್ಟಿವೆ. ಹಾಗಾಗಿ ಮಾನವನ ಹತೋಟಿಗೆ ಒಳಗಾಗಿವೆ. ಅವನ ಬಾಳನ್ನು ಸುಖಮಯವಾಗಿಸಿವೆ ; ಅವನ ದೈಹಿಕ ಶ್ರಮವನ್ನು ಬಹುಪಾಲು ನಿವಾರಿಸಿವೆ.
ಇತ್ತಿಂದೀಚೆಗೆ ಅಣುವನ್ನು ಬಿರಿಸಿದರೆ ಆಪಾರಶಕ್ತಿಯು ಹೊರ ಹೊಮ್ಮುತ್ತದೆ ಎಂಬುದನ್ನು ಕಂಡು ಹಿಡಿದರು. ಈ ಶಕ್ತಿಯನ್ನು ಶಾಖವನ್ನಾಗಿ ಪರಿವರ್ತಿಸಿ ಏನೆಲ್ಲವನ್ನೂ ಸುಟ್ಟು ಹಾಕಬಹುದು. ಇಲೆಕ್ಟ್ರಿಕ್ ಶಕ್ತಿಯನ್ನಾಗಿ ಪರಿವರ್ತಿಸಿ ಬಳಸಿಕೊಳ್ಳಲೂಬಹುದು. ಅಟಾಮಿಕ್ ಶಕ್ತಿಯೂ ನಿಖರವಾಗಿ
ಅಳೆಯಲ್ಪಡಬಹುದು. ಹೈಡ್ರೋಜನ್ನಿನ ಎರಡು ಅಣುಗಳನ್ನು ಬೆಸೆದರೆ, ಆಗಲೂ ಶಕ್ತಿಯು ಅಪಾರವಾಗಿ ಹೊರ ಹೊಮ್ಮುತ್ತದೆ. ಪ್ಯೂಷನ್ ಬಾಂಬ್ ಎಂಬ