ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮನಸ್ಸಿನ ಸ್ವರೂಪ

೨೮೩

ರಾಕ್ಷಸ ಆಯುಧವು ಈ ರೀತಿಯದು. ಇದೂ ವೈಜ್ಞಾನಿಕನ ಅಳತೆಗೆ ನಿಖರವಾಗಿ ಸಿಕ್ಕಿದೆ.

ಆದರೆ ಇವೆಲ್ಲಾ ಶಕ್ತಿಗಳು, ಮನಸ್ಸು ಎಂಬ ಶಕ್ತಿಗಿಂತ ಪ್ರತ್ಯೇಕವಾಗಿವೆ. ಮನಸ್ಸು ಒಂದು ತೆರನ ಶಕ್ತಿ ಎಂದು ತಿಳಿದಿದ್ದರೂ, ವೈಜ್ಞಾನಿಕ ಗಣಿತ ಶಾಸ್ತ್ರದ ಅಧ್ಯಯನಕ್ಕೆ ಇನ್ನೂ ಒಳಪಟ್ಟಿಲ್ಲ. ಅಂದರೆ ಮನಸ್ಸು ಎಂಬ ಶಕ್ತಿಯ ನಿಖರವಾದ ಪರಿಚಯವು ಇನ್ನೂ ಸಾಧ್ಯವಾಗಿಲ್ಲ.

ನಮ್ಮ ನಾಡಿನ ಪೂರ್ವಿಕ ಮನನಿಗರು, ಮನಸ್ಸನ್ನು 'ಚಿತ್ರ' ಎಂದು ಹೆಸರಿಸಿದ್ದರು. ಚೈತನ್ಯ ಎಂಬ ಪದವು ಶಕ್ತಿ ಎನ್ನುವ ಅರ್ಥವನ್ನೂ ಮೂಡಿಸುತ್ತದೆ. ಚಿತ್ರ ಪದದಿಂದ ಹುಟ್ಟಿ ಬಂದಿದೆ. ಚಿತ್ರ ಎನ್ನುವ ಪದವನ್ನು ಇನ್ನೂ ಹೆಚ್ಚು ಗೂಡಾರ್ಥದಲ್ಲಿ ಬಳಸುತ್ತಿದ್ದರು. ಅದನ್ನು ಮುಂದಿನ ಅಧ್ಯಾಯಗಳಲ್ಲಿ ತಿಳಿಯಲು ಯತ್ನಿಸೋಣ.

ಅಜ್ಜಯ್ಯನ ಮನೆಗೆ ರಜೆಯಲ್ಲಿ ಹೋಗಲೆತ್ನಿಸಿದಾಗ, ನನ್ನ ಮನಸ್ಸಿನಲ್ಲಿ ಮೂಡಿದ ಯೋಚನೆಗಳನ್ನು, ಮನಸ್ಸಿನ ಪರಿವರ್ತನೆಗಳು, ಎಂದು ಹೇಳಬಹುದು. ಚಪ್ಪಲಿಯನ್ನು ಮೆಟ್ಟಿಕೊಂಡು ಹೋಗಬಾರದು ಎಂಬ ಯೋಚನೆಯು ಮೂಡಿದಾಗ ಆ ಕ್ಷಣಾಂಶ ಮನಸ್ಸು ಚಪ್ಪಲಿಯಿಂದ ತುಂಬಿಕೊಂಡಿತು. ಚಪ್ಪಲಿಯೇ ಪೂರ್ಣವಾಗಿ ಪ್ರತಿಬಿಂಬಿಸಿತ್ತು. ಮನಸ್ಸಿನಲ್ಲಿ, ಎನ್ನಲೂಬಹುದು. ಮರುಕ್ಷಣ ಹೂಗಳ ಯೋಚನೆಯು ಮೂಡಿತು. ಕ್ಷಣಾಂಶ ಮನಸ್ಸು ಹೂವಿನಿಂದ ತುಂಬಿತ್ತು. ಹೂವೇ ಆಗಿತ್ತು ಎಂದರೂ ಅಡ್ಡಿಯಿಲ್ಲ. ಯೋಚಿಸುವಾಗ ಮನಸ್ಸಿನಲ್ಲಿ ಉಂಟಾಗುವ ಪರಿವರ್ತನೆಗಳನ್ನು 'ವೃತ್ತಿ' ಎಂದು ಕರೆಯುತ್ತಿದ್ದರು. ಕಣ್ಣಿಗೆ ಕಂಡುಬಂದ ಚೆಂದದ ಹೂವು, ಮನಸ್ಸಿನಲ್ಲಿ ಪ್ರತಿಬಿಂಬಿತವಾಗಿ ಕ್ಷಣಾಂಶ ಮನಸ್ಸು ಆ ಹೂವೇ ಆಗಿರುತ್ತದೆ. ಕಿವಿಗಳ ಮೂಲಕ ಕೇಳಿಸಿದುದೂ ಹಾಗೆಯೇ ಪಂಚೇಂದ್ರಿಯಗಳ ಮೂಲಕ ಮನಸ್ಸಿಗೆ ತಲುಪಿದ ಎಲ್ಲವೂ ಪ್ರತಿಕ್ರಿಯೆಯನ್ನು ಮೂಡಿಸುತ್ತವೆ. ಹೊರಲೋಕದಿಂದ ಪ್ರತಿಕ್ಷಣವೂ ಪಂಚೇಂದ್ರಿಯಗಳಲ್ಲಿ ಯಾವುದಾದರೂ ಒಂದರಿಂದ ಮನಸ್ಸು ಕೆಣಕಲ್ಪಡುತ್ತದೆ. ಮನಸೂ ಪ್ರತಿಕ್ರಿಯೆಯನ್ನು ಹೂಡುತ್ತವೆ. ಆದಕಾರಣ ಮನಸ್ಸು ಒಮ್ಮೆ ಅತ್ತ, ಮತ್ತೊಮ್ಮೆ ಇತ್ತ, ಕೆಲವೊಮ್ಮೆ ಸುತ್ತ ಎಳೆದಾಡಲ್ಪಡುತ್ತಿರುತ್ತದೆ. ಚಿತ್ರ ವೃತ್ತಿಗಳು ಅಡ್ಡಾದಿಡ್ಡಿಯಾಗಿ ನಡೆಯುತ್ತವೆ. ಚಿತ್ತ ವೃತ್ತಿಯನ್ನು ನಿರೋಧಿಸುವುದೇ ಯೋಗ ಎಂದರು, ಪತಂಜಲಿ ಋಷಿಗಳು. ಈ ವಿಷಯವು ಬಾಳು ಹಸನಾಗಲಿಚ್ಛಿಸುವವರಿಗೆ, ಅಮೂಲ್ಯವಾದುದು. ಮುಂದೆ ಬರುವ ಅಧ್ಯಾಯಗಳಲ್ಲಿ ಇದನ್ನು ಹೆಚ್ಚು ವಿವರವಾಗಿ ಪರಿಶೀಲಿಸೋಣ.