ವಿಷಯಕ್ಕೆ ಹೋಗು

ಪುಟ:ಮನಮಂಥನ.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮೬

ಮನಮಂಥನ

೩. ವಯಸ್ಸು ಆದಂತೆಲ್ಲಾ ಮುಪ್ಪು ಅಡರುವುದನ್ನು ಎಲ್ಲರೂ ಕಂಡಿದ್ದಾರೆ, ಚರ್ಮವು ಸುಕ್ಕುಗಟ್ಟಿ, ಕಾಂತಿಹೀನವಾಗುವುದು ; ಕೂದಲೂ ನರೆಯುವುದು, ಕಣ್ಣು, ಕಿವಿಗಳು ಮಂದವಾಗುತ್ತಾ ಹೋಗುವುದು, ಇತ್ಯಾದಿಗಳೆಲ್ಲವೂ ಮುದ್ದು ಮೂಡುತ್ತಿರುವುದರ ಲಕ್ಷಣಗಳು.

ಆದರೆ ದೇಹದೊಂದಿಗೆ ಜನಿಸಿದ ಮನಸ್ಸು, ದೇಹಕ್ಕೆ ಮುಪ್ಪು ಮೂಡುವುದರ, ಸರಿಸಮನಾಗಿ ಅರಳು ಮರುಳಾಗುತ್ತದೆಯೇ ? ಇಲ್ಲ. ಅರವತ್ತು ಎಪ್ಪತ್ತು ವರ್ಷಗಳಾದರೂ ದೇಹವು ಶಿಥಿಲವಾಗಿರದೆ ಸಾಕಷ್ಟು ದೃಢವಾಗಿರಬಹುದು. ಆದರೆ ಮನಸ್ಸು ಚುರುಕುತನವನ್ನು ಐವತ್ತರ ಪ್ರಾಯದಿಂದ ಕಳೆದುಕೊಳ್ಳಲಾರಂಭಿಸಬಹುದು. ತಪ್ರೀತಿ, ದೇಹವು ಐವತ್ತು ಅರವತ್ತಕ್ಕೆ ಶಿಥಿಲವಾಗತೊಡಗಿದರೂ, ಎಂಬತ್ತು ತೊಂಬತ್ತಕ್ಕೆ ತುಂಬಾ ಶಿಥಿಲವಾದರೂ ಅವರುಗಳ ಮನಸ್ಸು ಅತ್ಯಂತ ಚುರುಕಾಗಿ ಉಳಿದಿರಬಹುದು.

ದೇಹ ಮತ್ತು ಮನಸ್ಸು ಒಂದಕ್ಕೊಂದು ಅಗತ್ಯ ಸಂಬಂಧವನ್ನು ನಿಕಟವಾಗಿ ಹೊಂದಿದ್ದರೂ ವಿವಿಧ ರೀತಿಯಲ್ಲಿ, ಬೇರೆ ಬೇರೆ ಕಾಲಗಳಲ್ಲಿ, ಭಿನ್ನವಾದ ಗತಿಯಲ್ಲಿ ಮುಪ್ಪನ್ನು ಪಡೆಯುತ್ತವೆ.

೪. ಆಜನ್ಮಸಿದ್ಧವಾಗಿ ಪಡೆದ ಜಾಣತನದಿಂದ, ಮನಸ್ಸು ದೇಹದ ಮುಖ್ಯ ಕಾರ್ಯಕ್ರಮಗಳನ್ನು ನಡೆಸುತ್ತದೆ. ಆಳ ಮನಸ್ಸಿನಲ್ಲಿ ಪ್ರತಿಷ್ಠಿತವಾಗಿರುವ ಜನ್ಮ ಜನ್ಮಾಂತರಗಳ ಸ್ಮರಣೆಯು ಮನಸ್ಸಿನ ಹುಟ್ಟು ಜಾಣತನಕ್ಕೆ ಮೂಲಾಧಾರ. ಪ್ರಕೃತ ಜನ್ಮದಲ್ಲಿ ಮನಸ್ಸು ಅಭಿವೃದ್ಧಿ ಹೊಂದುತ್ತದೆ, ಲೋಕಾನುಭವವನ್ನು ಪಡೆಯುವುದರ ಮೂಲಕ.

ಆದರೆ ಮನಸ್ಸನ್ನು ನಡೆಸುವ ಆಂತರಿಕವಾದ ಚೈತನ್ಯವಾವುದಾದರೂ ಇದೆಯೇ ? ಬಲ್ಲವರಿಂದ ಕಲಿತು, ಮಾಡುವವರನ್ನು ನೋಡಿ ಕಲಿತು, ಆಲೋಚನೆಯನ್ನು ಮಾಡಿ ಅರಿತು, ಲೋಕಾನುಭವವನ್ನು ಪಡೆಯುತ್ತದೆ, ಮನಸ್ಸು. ಅಭಿವೃದ್ಧಿ ಹೊಂದುತ್ತದೆ. ಇದು ಎಲ್ಲರಿಗೂ ಸುಲಭವಾಗಿ ತಿಳಿಯುವ ವಿಷಯ. ಆದರೆ ಮನಸ್ಸಿನ ಅಂತರಾಳದಲ್ಲಿ ಎಲ್ಲೋ ಒಂದು ಶಕ್ತಿ ಇದೆ, ಅಥವಾ ಚೈತನ್ಯವು ಅಡಗಿದೆ. ಅವ್ಯಕ್ತವಾಗಿ ಆ ಚೈತನ್ಯವು ಮನಸ್ಸನ್ನು ನಡೆಸುತ್ತದೆ, ಎಂದು ಊಹಿಸಲು ಸಾಕಷ್ಟು ಸಾಕ್ಷ್ಯಗಳಿವೆ. ಪ್ರಮಾಣಗಳು ದೊರಕುತ್ತವೆ. ದೇಹದ ಮೇಲೆ ಹತೋಟಿಯನ್ನು ಮನಸ್ಸು ಹೊಂದಿರುವಂತೆ ಮನಸ್ಸಿನ ಮೇಲೆ ಪ್ರಭಾವೀ ಹತೋಟಿಯನ್ನು ಆಂತರಿಕವಾದ ಮತ್ತೆ ಯಾವುದೋ ಚೈತನ್ಯವು ಪಡೆದಿದೆ.

೫. ದೇಹವು ಮಲಿನಗೊಳ್ಳುವುದನ್ನೂ ಕಂಡಿದ್ದೇವೆ. ಬೆವರು ಸುರಿದು,