ಮನಮಂಥನ
ಜ್ವರವು ಉಗ್ರವಾದರೆ, ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಥವಾ ಮಾರಕವಾಗುತ್ತದೆ.
ಆದರೆ ಜ್ವರವು ಉಗ್ರವಾದರೆ, ಸ್ವಲ್ಪವೇ ಆಗಿದ್ದರೆ, ಹಾಗೂ ತಿಂಗಳಾನುಗಟ್ಟಲೆ ಕಾಡುವಂತಹುದಾದರೆ, ಆಗ ಅಂತಹ ಜ್ವರದ ನಂಜು ಅಲ್ಪ ಪ್ರಮಾಣದಲ್ಲಿರುತ್ತದೆ. ಮೆದುಳಿನ ಮೇಲೆ ಅಂತಹ ಅಲ್ಪ ನಂಜು ಪ್ರಚೋದಕವಾಗುತ್ತದೆ. ಅಂದರೆ ಮನಸೂ ಚುರುಕಾಗಿ ಕೆಲಸ ಮಾಡುತ್ತದೆ. ಸ್ಫೂರ್ತಿಯನ್ನು ಪ್ರಚೋದಿಸುತ್ತದೆ.
(ಆ) ಜ್ವರವು ಉಗ್ರವಾದಾಗ, ಅಥವಾ ಸೌಮ್ಯವಾಗಿದ್ದಾಗ, ಸನ್ನಿ ಅಥವಾ ಸ್ಫೂರ್ತಿ, ಇವುಗಳು ಕಾಣಬರುತ್ತವೆ. ಅದೇ ರೀತಿಯಲ್ಲಿ ಮಾದಕ ಪದಾರ್ಥಗಳೂ ಮನಸ್ಸಿನ ಮೇಲೆ, ಪ್ರಭಾವವನ್ನು ಬೀರುತ್ತವೆ. ಅಲ್ಪ ಪ್ರಮಾಣದಲ್ಲಿ, ನಿಧಾನವಾಗಿ ಸೇವಿಸಿದಾಗ, ಮನಸ್ಸು ಚುರುಕಾಗುತ್ತದೆ. ಸ್ಫೂರ್ತಿಯೂ ಹೆಚ್ಚುತ್ತದೆ. ಹೆಚ್ಚು ಪ್ರಮಾಣದಲ್ಲಿ ಗಟಗಟನೆ ಇಳಿಸಿದರೆ, ಮನಸ್ಸು ಸನ್ನಿಬಡಿದಂತಾಗುತ್ತದೆ. ಮಾನ ಅವಮಾನ, ಸಭ್ಯ, ಅಸಭ್ಯ ; ಇತ್ಯಾದಿಗಳನ್ನು ಮರೆಯುವುದಲ್ಲದೆ, ವಾಸ್ತವಿಕತೆಯನ್ನೂ ಮರೆಯುತ್ತದೆ. ಎಂತೆಂತದೋ ವಿಕಾರಿ ಭ್ರಮೆಗಳು ಅವನನ್ನು ಕಾಡುತ್ತವೆ. ಅದಕ್ಕನುಗುಣವಾಗಿ ಅವನ ನಡತೆ, ಮಾತು. ಎಲ್ಲರಲ್ಲಿಯೂ ಮಾದಕ ದ್ರವ್ಯಗಳ ಫಲಿತಾಂಶವು ಒಂದೇ ರೀತಿಯಲ್ಲಿ ಇರುತ್ತದೆ ಎನ್ನಲಾಗದು. ಸ್ಫೂರ್ತಿಯು ಸಹಜವಾಗಿದ್ದ ಕೆಲವರು, Confessions of an opium eater ; ತೆರನಾದ ಉತ್ತಮ ಪುಸ್ತಕಗಳನ್ನು ಬರೆಯುತ್ತಾರೆ. ಉಳಿದಂತೆ ಬಹು ಸಂಖ್ಯಾತರು ಮಾದಕ ದ್ರವ್ಯಗಳನ್ನು ಸೇವಿಸಿದಾಗ, ಅಸಭ್ಯ ತೆರನಾಗಿ ತೂರಾಡುತ್ತಾರೆ, ಹುಚ್ಚರಂತೆ ಆಡುತ್ತಾರೆ.
ದೈನಂದಿನ ಸಾಮಾನ್ಯ ಅನುಭವದಲ್ಲಿ ವಿಫುಲವಾಗಿ ಈ ಗುಣವನ್ನು ಕಾಣಬಹುದು, ಅಭ್ಯಾಸಕ್ಕೆ ತಕ್ಕಂತೆ ಮೂರು ನಾಲ್ಕು, ಕುಡಿದು ಬಂದ ಸಂಗೀತಗಾರ ಅಥವಾ ನಟ ; ಅಥವಾ, ಹರಿಕಥೆಯ ದಾಸ ; ಇವರುಗಳ ಕೌಶ್ಯಲವು ಅತ್ಯಂತ ಸ್ಫೂರ್ತಿಯಿಂದಿದ್ದು, ಸಭಿಕರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಕಲಾಕಾರರಲ್ಲಿ ಇಂತಹ ಪ್ರವೃತ್ತಿಯು ಸಾಮಾನ್ಯ ಎನ್ನುವಷ್ಟು ಉದಾಹರಣೆಗಳು ಕಾಣಬರುತ್ತವೆ. ಆದರೆ ಪಡಖಾನೆಯಿಂದ ಗುಂಪು ಗುಂಪಾಗಿ ಸಂಜೆಯಾದ ಮೇಲೆ ಹಿಂತಿರುಗುವ ಬಹು ಸಂಖ್ಯಾತರನ್ನು ನೋಡಿ! ಇಲ್ಲದ ರಸ್ತೆಯಲ್ಲಿ ಅಡ್ಡಾಡುತ್ತಾ, ಅಸಭ್ಯ ಮಾತುಗಳನ್ನು ಹಾಡುಗಳು ಎಂದು ಭ್ರಮಿಸುತ್ತ, ತೂರಾಡುವವರು, ಷಹರಿನಲ್ಲಿ ಪ್ರತಿ ಸಂಜೆಯೂ ಹೇರಳವಾಗಿ ಕಾಣಿಸುತ್ತಾರೆ. ಅಯ್ಯೋ ಪಾಪ ಎಂದನಿಸುತ್ತದೆ, ನೋಡಿದವರಿಗೆ ಒಮ್ಮೊಮ್ಮೆ ನೋಡಿದವರಲ್ಲಿ ಕೆಲವರಿಗಾದರೂ ಮಾತ್ಸರ್ಯವು